ಎರಡನೇ ಹಂತದ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರಬಂದ ಟಿಬಿಎಂ ಮಿಷನ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಎರಡನೇ ಹಂತದ ಕಾಮಗಾರಿ ವೇಗವನ್ನ ಪಡೆದುಕೊಂಡಿದೆ. ಗೊಟ್ಟಗೆರೆ ನಾಗವಾರ ಮಾರ್ಗವಾಗಿ ನಡೆಯುತ್ತಿರುವ ಸುಮಾರು 13 ಕಿ.ಮೀ ಸುರಂಗ ಕಾರ್ಯ ನಡೆಯುತ್ತಿದ್ದು 2022 ಫೆಬ್ರವರಿ 2ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆ ಸುರಂಗ ಪ್ರವೇಶಿಸಿದ್ದ ವಿಂಧ್ಯಾ ಹೆಸರಿನ ಟಿಬಿಎಂ ಮಿಷನ್ ಗುರುವಾರ ಬೆಳಗ್ಗೆ 10:30ಕ್ಕೆ ತನ್ನ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ ಹೊರಬಂದಿದೆ.
6 ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಿಸಿದ್ದ ವಿಂಧ್ಯಾ;
ಕೊರೊನಾದ ಬಳಿಕ ವೇಗದ ಮಿತಿ ಹೆಚ್ಚಿಸಿರುವ ಎರಡನೇ ಹಂತದ ಮೆಟ್ರೋ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ನಮ್ಮ ಮೆಟ್ರೋ ನಿಗಮ ಪಣತೊಟ್ಟಿದೆ. ಹೀಗಾಗಿ ಕಳೆದ ಫೆಬ್ರವರಿ 2ರಂದು ಸುರಂಗ ಪ್ರವೇಶಿದ್ದ ಟಿಬಿಎಂ ವಿಂಧ್ಯಾ 900ಮೀಟರ್ ಉದ್ದ ಕಲ್ಲು ಬಂಡೆಗಳನ್ನ ಕೊರೆದು ಪ್ಯಾಟರಿ ಟೌನ್ ಬಳಿ ಹೊರ ಬಂದಿದೆ.
ಗೊಟ್ಟಿಗೆರೆಯಿಂದ ನಾಗವಾರದವರೆಗೆ 13 ಕಿ.ಮೀ ಸುರಂಗ ಕಾರ್ಯ:
ಎರಡನೇ ಹಂತದ ಗೊಟ್ಟಗೆರೆ ಟು ನಾಗವಾರ ಮಾರ್ಗದಲ್ಲಿ ಸುಮಾರು 13 ಕಿ.ಮೀ ಸುರಂಗ ಕಾರ್ಯ ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಮತ್ತೊಂದು ಬದಿಯಲ್ಲಿ ನಡೆಯುತ್ತಿದ್ದ ಸುರುಂಗ ಮಾರ್ಗದ ಕಾರ್ಯ ನಡೆಯುತ್ತಿದ್ದು, ಊರ್ಜಾ ಹೆಸರಿನ ಟಿಬಿಎಂ ಮಿಷನ್ ಕೂಡ ತನ್ನ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ ಹೊರಬಂದಿತ್ತು. ಇದರ ಮುಂದುವರೆದ ಭಾಗವಾಗಿ ಇಂದು ವಿಂಧ್ಯಾ ಹೆಸರಿನ ಟಿಬಿಎಂ ಮಿಷನ್ ಕಾರ್ಯ ಕೂಡ ಪೂರ್ಣಗೊಳಿಸಿ ಹೊರಬಂದಿದೆ.
ಇಲ್ಲಿವರೆಗೂ 1755 ಮೀಟರ್ ಉದ್ದ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳಿಸಿದ್ದು, ಇನ್ನುಳಿದಂತ ಕಾರ್ಯ ಪ್ರಗತಿಯಲ್ಲಿದೆ ಎಂದು ನಮ್ಮಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy