ಬೆಂಗಳೂರು: ಮಣಿಪಾಲ ಆಸ್ಪತ್ರೆಗಳ ಸಮೂಹವು ‘ಹೃದಯದ ರಕ್ಷಕ 2. 0’ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದಡಿ ನಗರದ ಆಯ್ದ 40 ಸಂಚಾರ ಪೊಲೀಸರಿಗೆ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ತರಬೇತಿ (ಸಿಪಿಆರ್) ನೀಡಲಾಯಿತು.
ತರಬೇತಿಗೆ ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ. ಎನ್. ಅನುಚೇತ್ ಚಾಲನೆ ನೀಡಿ ಮಾತನಾಡಿದರು.
ಹೃದಯಾಘಾತಕ್ಕೆ ಒಳಗಾದವರಿಗೆ ಸಿಪಿಆರ್ ವಿಧಾನದಿಂದ ಹೃದಯವನ್ನು ಪುನರುಜ್ಜೀವನಗೊಳಿಸಿ, ವ್ಯಕ್ತಿಯ ಜೀವ ಉಳಿಸಬಹುದಾಗಿದೆ ಎಂದರು.


