ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿ.ಟಿ.ರವಿಯನ್ನು ಲೂಟಿ ರವಿ ಎಂದು ಹೇಳುತ್ತಾರೆ. ಅವರು 4 ಬಾರಿ ಶಾಸಕ, 2 ಬಾರಿ ಸಚಿವರಾಗಿದ್ದರೂ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು.
ಚಿಕ್ಕಮಗಳೂರು ಕ್ಷೇತ್ರ ಮೂಲಸೌಕರ್ಯಗಳಿಂದಲೂ ವಂಚಿತವಾಗಿದೆ. ಧರ್ಮ, ವ್ಯಕ್ತಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡುವುದೇ ರವಿ ಕಾಯಕ. ಸಿ.ಟಿ.ರವಿ ಒಬ್ಬ ವಿಕೃತ ಮನಸ್ಸುಳ್ಳಂತಹ ವ್ಯಕ್ತಿ ಎಂದು ಸಿಟಿ ರವಿ ವಿರುದ್ಧ ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ 4 ತಿಂಗಳೊಳಗೆ 43 ಕೇಸ್ ಹಿಂಪಡೆದಿದ್ದರು. ಆ 43 ಕೇಸ್ಗಳ ಪೈಕಿ ಮೊದಲ ಪ್ರಕರಣವೇ ಸಿ.ಟಿ. ರವಿ ಅವರದು. ಬಿಜೆಪಿ ಶಾಸಕರ ಬೆಂಕಿ, ದೌರ್ಜನ್ಯ ಪ್ರಕರಣಗಳನ್ನು ಹಿಂಪಡೆದಿದ್ದರು. ಇದರಲ್ಲೇ ಗೊತ್ತಾಗುತ್ತೆ ಯಾರು ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಯಾರು, ಯಾವ ಕೇಸ್ ಹಿಂಪಡೆದರು ಎಂದು ಜನರಿಗೆ ಗೊತ್ತಿದೆ ಎಂದು ಧ್ರುವನಾರಾಯಣ ಕಿಡಿಕಾರಿದರು.