ಡಿ ಬಾಸ್ ದರ್ಶನ್ ಸಿನಿಮಾ ಜರ್ನಿಯಲ್ಲಿ 25 ವರ್ಷ ಪೂರೈಸಿದ್ದಾರೆ. ಕಾಟೇರ ಕೂಡ ಬಿಗ್ ಸಕ್ಸಸ್ ಆಗಿದೆ. 50 ದಿನದ ಸೆಲೆಬ್ರೇಷನ್ ಸಹ ಮಾಡಲಾಗಿದೆ. ಅಷ್ಟರಲ್ಲಿಯೇ ದಾಸ ಇನ್ನೂ ಒಂದು ವಿಶೇಷ ವಿಚಾರ ಹೊರ ಬಂದಿದೆ. ದರ್ಶನ್ ಸ್ನೇಹಿತರು ಈ ಖುಷಿಯನ್ನ ಸೆಲೆಬ್ರೇಟ್ ಕೂಡ ಮಾಡಿದ್ದಾರೆ.
ಅದನ್ನ ಸ್ವತಃ ದರ್ಶನ್ ಕಂಡು ಥ್ರಿಲ್ಲ್ ಆಗಿದ್ದಾರೆ. ಇಲ್ಲಿವರೆಗಿನ ಒಟ್ಟು ಇತಿಹಾಸದಲ್ಲಿ ಯಾರು 6.2 ಅಡಿ ಎತ್ತರದ ಚಾಕೋಲೆಟ್ ಪ್ರತಿಮೆ ಮಾಡಿಸಿದ್ದೇ ಇಲ್ಲ. ಹೌದು, ದಾಸ ದರ್ಶನ್ ತಮ್ಮದೇ ಒಂದು ಬೃಹತ್ ಚಾಕೋಲೆಟ್ ಪ್ರತಿಮೆ ಕಂಡು ಬೆರಗಾಗಿದ್ದಾರೆ. ದರ್ಶನ್ ಹೈಟ್ ಎಷ್ಟಿದಿಯೋ ಅಷ್ಟೇ ಹೈಟ್ ನ ಚಾಕೋಲೆಟ್ ಪ್ರತಿಮೆಯನ್ನ ಕಂಡ ದರ್ಶನ್ ಆಶ್ವರ್ಯಗೊಂಡರು. ದಾಸ ದರ್ಶನ್ ಚಾಕೋಲೆಟ್ ಪ್ರತಿಮೆಯ ತೂಕ ಬರೋಬ್ಬರಿ 250 ಕೆಜಿ. ಚಾಕೋಲೆಟ್ ಬಳಸಿಯೇ ಈ ಒಂದು ಬೃಹತ್ ಪ್ರತಿಮೆಯನ್ನ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


