ಚಿತ್ರದುರ್ಗದ ರೇಣುಕಾ ಸ್ವಾಮಿ ಕಿಡ್ನಾಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕಡೆ ರೇಣುಕಸ್ವಾಮಿ ಕರೆತರುವ ಮೊದಲು ಆರೋಪಿಗಳು ಆತನನ್ನ ತುಮಕೂರಿನ ಬಾರ್ ವೊಂದಕ್ಕೆ ಕರೆತಂದಿದ್ರಂತೆ.
ತುಮಕೂರಿನ ರಂಗಾಪುರದ ದುರ್ಗಾ ಬಾರ್ ನಲ್ಲಿ ಆರೋಪಿಗಳು ಮದ್ಯ ಖರೀದಿಸಿದ್ದರು. ಮಧ್ಯಾಹ್ನದ ವೇಳೆಗೆ ತುಮಕೂರಿನ ಬಳಿ ಇಟಿಯೋಸ್ ಕಾರು ನಿಲ್ಲಿಸಿದ್ದಾರೆ. ಬಳಿಕ A4 ರಾಘವೇಂದ್ರ, A6 ಜಗ, A7 ಅನು ಕುಮಾರ್ ಹಾಗೂ ರೇಣುಕಾ ಸ್ವಾಮಿ ಕಾರಿನಿಂದ ಇಳಿದಿದ್ರು. ಬಳಿಕ ಕಾರಿನಿಂದ ಇಳಿದು ಬಾರ್ ಒಳಗೆ ಬರುತ್ತಿರುವ ದೃಶ್ಯ ಬಾರ್ ಹೊರಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾರ್ ಒಳಗೆ ಇದ್ದ ಕೌಂಟರ್ ನತ್ತ ನಾಲ್ಕು ಜನ ತೆರಳಿದ್ದರು. ಈ ವೇಳೆ ಎರಡು ಬಿಯರ್, ಎರಡು ಲೀಟರ್ ವಾಟರ್ ಬಾಟಲ್, ಸ್ನಾಕ್ಸ್ ಖರೀದಿಸಿದ್ದರು. ಬಾರ್ ಕ್ಯಾಶಿಯರ್ ಮಂಜುನಾಥ್ ಆರೋಪಿಗಳಿಗೆ ಮದ್ಯ ನೀಡಿದ್ದರು.
ಪೊಲೀಸರು ಬಂದು ನನಗೆ ಸಿಸಿ ಕ್ಯಾಮೆರಾ ದೃಶ್ಯ ತೋರಿಸಿದ್ದಾಗಲೇ, ಇದು ರೇಣುಕಾ ಸ್ವಾಮಿ ಅಂತ ಗೊತ್ತಾಗಿದ್ದು ಅಂತ ಆ ದಿನದ ಇಂಚಿಂಚೂ ಮಾಹಿತಿಯನ್ನ ದುರ್ಗಾ ಬಾರ್ ಕ್ಯಾಶಿಯರ್ ಮಂಜುನಾಥ್ ಹಂಚಿಕೊಂಡಿದ್ದಾರೆ.
ಖರೀದಿ ಮಾಡಿದ್ದ ಮದ್ಯಕ್ಕೆ ಮೃತ ರೇಣುಕಾ ಸ್ವಾಮಿ ಬಳಿಯೇ ದುಡ್ಡು ಕೊಡಿಸಲಾಗಿತ್ತು. ರೇಣುಕಾ ಸ್ವಾಮಿ ಮೊಬೈಲ್ ನಿಂದ ಫೋನ್ ಪೇ ಮಾಡಿಸಲಾಗಿತ್ತು. ಈ ಎಲ್ಲಾ ದೃಶ್ಯಗಳು ಬಾರ್ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಬಂದಷ್ಟೇ ವೇಗವಾಗಿ ಕಾರು ಹತ್ತಿಕೊಂಡು ಬೆಂಗಳೂರು ಕಡೆ ಡಿ ಗ್ಯಾಂಗ್ ಹೊರಟು ಹೋಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


