nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    March 7, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ
    • ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ
    • ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ
    • ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ
    • ಸಾರಿಗೆ ಕ್ಷೇತ್ರಕ್ಕೆ ಬಂಪರ್ ಕೊಡುಗೆ: 2,000 ಕೋಟಿ ರೂ. ವೆಚ್ಚದಲ್ಲಿ 4,000 ಎಲೆಕ್ಟ್ರಿಕ್ ಬಸ್‌ ಗಳ ಸೇರ್ಪಡೆ
    • ಸಾಲವಿಲ್ಲದೆ ಯಾವುದೇ ದೇಶ–ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ; ಟೀಕಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ: ಸಿಎಂ ಸಿದ್ದರಾಮಯ್ಯ ತಿರುಗೇಟು
    • ಸಾಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರತ್ನಮ್ಮ ಶಿವರಾಜು, ಉಪಾಧ್ಯಕ್ಷರಾಗಿ ಪುಟ್ಟಸಿದ್ದಯ್ಯ ಅವಿರೋಧ ಆಯ್ಕೆ
    • ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ; 45,000 ಕೋಟಿ ಗುರಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಾನು ಮಾಡಿದ  ಅಭಿವೃದ್ಧಿ  ಬಗ್ಗೆ  ಟೀಕೆ ಮಾಡಲು  ಡಿ.ಸುಧಾಕರ್ ಗೆ ನೈತಿಕತೆ ಇಲ್ಲ: ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್
    ಜಿಲ್ಲಾ ಸುದ್ದಿ May 8, 2022

    ನಾನು ಮಾಡಿದ  ಅಭಿವೃದ್ಧಿ  ಬಗ್ಗೆ  ಟೀಕೆ ಮಾಡಲು  ಡಿ.ಸುಧಾಕರ್ ಗೆ ನೈತಿಕತೆ ಇಲ್ಲ: ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್

    By adminMay 8, 2022No Comments2 Mins Read
    poornima shreenivas

    ಹಿರಿಯೂರು:  ಹಿರಿಯೂರು ತಾಲ್ಲೂಕಿನಲ್ಲಿ ನಾನು ಮಾಡಿದ  ಅಭಿವೃದ್ಧಿ  ಕಾರ್ಯಕ್ರಮಗಳ ಬಗ್ಗೆ  ಟೀಕೆ ಮಾಡಲು  ಡಿ. ಸುಧಾಕರ್ ರವರಿಗೆ ಯಾವುದೇ ನೈತಿಕತೆ ಇಲ್ಲ  ಎಂದು ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿನ  ಹುಳಿಯಾರ್  ರಸ್ತೆಯಲ್ಲಿರುವ  ನಗರದ  ಶಾಸಕರ ಕಾರ್ಯಾಲಯದಲ್ಲಿ ನಗರಕ್ಕೆ ವಸತಿ ಸಚಿವ ಸೋಮಣ್ಣ ಪ್ರವಾಸ ಕೈಗೊಂಡಿರುವ ಕುರಿತಂತೆ ವಸತಿ ಯೋಜನೆ ಕಾರ್ಯಕ್ರಮದ ಬಗ್ಗೆ  ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,   ಸ್ಲಂಬೋರ್ಡ್ ವತಿಯಿಂದ 477 ಮತ್ತು 988 ಮನೆಗಳ ನಿರ್ಮಾಣ ಆಗಲಿವೆ, ವಾಜಪೇಯಿ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಗಳ ಮೂಲಕ 76 ಮತ್ತು 24 ಮನೆಗಳ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.


    Provided by
    Provided by

    ಮೇ 10 ರಂದು ಮಂಗಳವಾರ ವಸತಿ ಸಚಿವ ವಿ.ಸೋಮಣ್ಣ ನಗರಕ್ಕೆ ಆಗಮಿಸಲಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಜಿ+2 ಮಾದರಿಯ 624 ಹಾಗೂ 1248 ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ  ಎಂದು  ಶಾಸಕಿ ಪೂರ್ಣಿಮಾ  ಮಾಹಿತಿ ನೀಡಿದರು.

    ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ ಮಂಜೂರಾದ 4,448 ಅಲೆಮಾರಿ ಜನಾಂಗಕ್ಕೆ ಮನೆಗಳ ಜೊತೆಗೆ ಹೆಚ್ಚುವರಿಯಾಗಿ 845 ಮನೆಗಳಿಗೆ ಇದೇ ಸಂದರ್ಭದಲ್ಲಿ ಹಕ್ಕುಪತ್ರ ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಗಳ ಅಡಿಯಲ್ಲಿ ಗ್ರಾಮಾಂತರಕ್ಕೆ 1,200 ಮಂಜೂರಾತಿ ಹಾಗೂ ಹೆಚ್ಚುವರಿ ಬೇಡಿಕೆಯಾಗಿ 1,000 ಮನೆಗಳಿಗೆ ಮನವಿ ಮಾಡಲಾಗುವುದು ಎಂದರಲ್ಲದೆ,  ಜವಾಬ್ದಾರಿಯುತ ಶಾಸಕಿಯಾಗಿ   ನನ್ನ  ಮತದಾರರ ಋಣ ತೀರಿಸಲು ನಮ್ಮ ಸರ್ಕಾರದಿಂದ 8 ಕೋಟಿ ರೂ. ವೆಚ್ಚದ ಸಾರಿಗೆ ಡಿಪೋ ಮಂಜೂರು, 25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ, ಮಿನಿ ವಿಧಾನಸೌಧಕ್ಕೆ 15 ಕೋಟಿ, ಧರ್ಮಪುರ ಕೆರೆಗೆ ನೀರು ಹರಿಸಲು 90 ಕೋಟಿ ಸೇರಿದಂತೆ ನಗರ ಜನತೆಯ ಅನುಕೂಲಕ್ಕೆ ಯುಜಿಡಿ ಗೆ 206 ಕೋಟಿ ಅತಿ ಶೀಘ್ರದಲ್ಲಿ ಸರ್ಕಾರದಿಂದ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

    ಇವೆಲ್ಲವೂ ಸಹ  ನಮ್ಮ ಬಿಜೆಪಿ ಸರ್ಕಾರದ  ಸಾಧನೆಯಾಗಿದೆ.  ಆದ್ದರಿಂದ ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡಲು ಮಾಜಿ  ಶಾಸಕರು ಹಾಗೂ  ಮಾಜಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದಂತಹ ಡಿ. ಸುಧಾಕರ್ ರವರಿಗೆ ಯಾವುದೇ ನೈತಿಕತೆ ಇಲ್ಲ, ಅವರು 10 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಯಾವ ಬದ್ಧತೆಯಿಂದ ಕೆಲಸ ಮಾಡಿದ್ದಾರೆ, ಅವರು ಜನಪರವಾಗಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಜನರೇ ಅವರನ್ನು ಆಯ್ಕೆ ಮಾಡುತ್ತಿದ್ದರು ಎಂದರು.

    ಜನರ ಮುಂದೆ ಸುಳ್ಳು ಹೇಳಿ ನಾಟಕ ಮಾಡಿದರೆ, ಅದು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲವೇ, ಮಹಿಳಾ ಶಾಸಕಿಯಾಗಿ ನನ್ನ ಅಲ್ಪ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಅವರ ಇಡೀ ರಾಜಕೀಯ ಜೀವನದಲ್ಲೇ ಮಾಡಿಲ್ಲ. ಈ ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ನೋಡಿ, ಅಸೂಯೆಯಿಂದ ಮಾಜಿ ಶಾಸಕರು , ಸಚಿವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮತದಾರರ ಮುಂದೆ ಅವರ ನಾಟಕ ನಡೆಯದು ಎಂದು  ತೀವ್ರ ವಾಗ್ದಾಳಿ ನಡೆಸಿದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೇಶವಮೂರ್ತಿ,  ಮಾಜಿ ಅಧ್ಯಕ್ಷರಾದ  ಟಿ.ಚಂದ್ರಶೇಖರ್  ನಗರಸಭಾ ಸದಸ್ಯರಾದ ಮಹೇಶ್ ಪಲ್ಲವ, ಡಿ.ಸಣ್ಣಪ್ಪ, ಗಣೇಶ್ ಕದ್ರು,  ಮಾಜಿ ಸದಸ್ಯ ಬಿ.ಕೆ.ಕರಿಯಪ್ಪ, ಚಿರಂಜೀವಿ, ಕೆ.ಪಿ.ಶ್ರೀನಿವಾಸ್ ನಿತ್ಯಾನಂದ ಯಾದವ್,  ಓಂಕಾರ್,  ಶೋಭಾ, ಸರವಣ, ಘಾಟ್ ರವಿ, ಕೃಷ್ಣಮೂರ್ತಿ, ರಾಜಣ್ಣ ಇತರರು ಉಪಸ್ಥಿತರಿದ್ದರು.

    ವರದಿ:  ಮುರುಳಿಧರನ್ ಆರ್.,  ಹಿರಿಯೂರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಸಾಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರತ್ನಮ್ಮ ಶಿವರಾಜು, ಉಪಾಧ್ಯಕ್ಷರಾಗಿ ಪುಟ್ಟಸಿದ್ದಯ್ಯ ಅವಿರೋಧ ಆಯ್ಕೆ

    March 7, 2026

    ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ: ಡಿಎಲ್‌ ಆರ್‌ ಸಿ–ಡಿಸಿಸಿ ಸಭೆಯಲ್ಲಿ ಸಂಸದ ಈ.ತುಕಾರಾಮ್ ತಾಕೀತು

    March 6, 2026

    ಮಾಧ್ಯಮಗಳು ಅವಕಾಶ ವಂಚಿತ ಸಮುದಾಯಗಳ ಧ್ವನಿಯಾಗಬೇಕು: ಪ್ರೊ.ಬಿ.ಕೆ.ರವಿ

    March 6, 2026

    Leave A Reply Cancel Reply

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    ತುಮಕೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಒಳಮೀಸಲಾತಿ ಹೋರಾಟ ಸಮಿತಿ…

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    March 7, 2026

    ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ

    March 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.