ತಿಪಟೂರು: ಪ್ರತಿಯೊಬ್ಬ ಮಾನವನ ಜೀವನದಲ್ಲಿಯೂ ಕ್ರೀಡೆ ಅವಿಭಾಜ್ಯ ಅಂಗವಾಗಬೇಕಿದ್ದು, ದೈಹಿಕ ಸದೃಢತೆಯ ಬಗ್ಗೆ ಕಾಳಜಿವಹಿಸುವ ಅಗತ್ಯವಿದೆ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಡಿವೈಎಸ್ ಪಿ ಸಿದ್ದಾರ್ಥ ಗೋಯಲ್ ತಿಳಿಸಿದರು.
ನಗರದ ಅರಳಿಕಟ್ಟೆಯ ಬಳಿ ತಿಪಟೂರು ಸ್ಫೋರ್ಟ್ ಕ್ಲಬ್ ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ 20ನೇ ವರ್ಷದ ಪುರುಷರ ಮತ್ತು ಮಹಿಳೆಯರ ರಾಜ್ಯಮಟ್ಟದ ರಸ್ತೆ ಓಟದ ಸ್ಫರ್ಧೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್ ಪಿ ಸಿದ್ದಾರ್ಥ ಗೋಯಲ್, ಕ್ರೀಡೆ ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ ಎಂದರು.
ಸ್ಫರ್ಧಾ ಮನೋಭಾವನೆಯಿಂದ ಭಾಗವಹಿಸಿ ತಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುವತ್ತ ಚಿತ್ತವನ್ನು ಹರಿಸಬೇಕಿದೆ. ಆರೋಗ್ಯ ಹಾಗೂ ಸುಸ್ಥಿರತೆಗೆ ಕ್ರೀಡೆ ಹೆಚ್ಚು ಬಲವನ್ನು ನೀಡುವಂತದ್ದಾಗಿದ್ದು ಅದರ ಮಹತ್ವವನ್ನು ಅರಿತುಕೊಂಡು ತಾರತಮ್ಯವಿಲ್ಲದೇ ತೋಡಗಿಸಿಕೊಳ್ಳಬೇಕು.ಸೋಲು-ಗೆಲುವು ಕ್ರೀಡೆಗಳಲ್ಲಿ ಸಾಮಾನ್ಯವಾಗಿದ್ದು ತಮ್ಮ ಮನೋಸ್ಥೈರ್ಯವನ್ನು ಸೋತಾಗ ಹೆಚ್ಚಿಸಿಕೊಳ್ಳಬೇಕೆ ಹೊರತು ಕುಗ್ಗಿಸಿಕೊಳ್ಳಬಾರದು ಹದಿಹರೆಯದವರಿಂದ ಹಿಡಿದು ಎಲ್ಲಾ ವಯೋಮಾನದವರು ದಿನನಿತ್ಯವೂ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸದೃಢತೆಯನ್ನು ಸಂಪಾದಿಸಿಕೊಳ್ಳಬೇಕು ಎಂದು ಹೇಳಿದರು.
ಕ್ರೀಡೆಗಳಲ್ಲಿ ಬಹಳ ಉತ್ಸಾಹದಿಂದ ಯುವಕರು ಪಾಲ್ಗೊಂಡು ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರುವಂತೆ ಕ್ರೀಡಾ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಮಾಡಿ ತೋರಿಸಬೇಕಾಗಿ ಎಂದು ಹೇಳಿದರು, ತಿಪಟೂರು ಸ್ಫೋರ್ಟ್ ಕ್ಲಬ್‍ನ ಗೌರವಾಧ್ಯಕ್ಷ ಲೋಕೇಶ್ವರ ಮಾತನಾಡಿ, ಕಳೆದ 3-4 ದಶಕಗಳಿಂದ ತಾಲ್ಲೂಕಿನಲ್ಲಿ ನಡೆಸಿರುವ ಕ್ರೀಡಾ ಸ್ಫರ್ಧೆಗಳಲ್ಲಿ ನೂರಾರು ಕ್ರೀಡಾ ಪಟುಗಳು ನಾಡಿಗೆ ಪರಿಚಯಿಸಿಕೊಂಡಿದ್ದಾರೆ. ಕ್ರೀಡೆ ನಮ್ಮ ಜೀವನದ ಅವಿಭಾಜ್ಯ ಅಂಗವೆಂದು ಪ್ರತಿಯೊಬ್ಬರು ಭಾವಿಸಿ ಬೇರೆ ಬೇರೆ ಚಟುವಟಿಕೆಗಳ ಜೊತೆಗೆ ತಮ್ಮ ಸೃಜನಶೀಲ ಶಕ್ತಿಯನ್ನು ಪ್ರದಶೀಲ ಶಕ್ತಿಯನ್ನು ಪ್ರದರ್ಶಿಸಿಕೊಳ್ಳಬೇಕು. ಯಾವುದೇ ಹಿಂಜರಿಕೆಯಿಲ್ಲದೇ ಸ್ಫರ್ಧೆಗಳಲ್ಲಿ ನೇರ ಪೈಪೋಟಿಗೆ ಇಳಿದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಹೆಸರನ್ನು ಛಾಪಿಸಿಕೊಳ್ಳಬೇಕು, ಉತ್ತಮ ಆರೋಗ್ಯ, ಸದೃಢವ್ಯಕ್ತಿತ್ವ, ಸಚ್ಛಾರಿತ್ರಗಳಿಂದ ಸಂಪನ್ನರಾಗಿರುವ ಶ್ರೇಷ್ಠ ಕ್ರೀಡಾ ವ್ಯಕ್ತಿಗಳು ಯುವ ಪೀಳಿಗೆಗೆ ಆದರ್ಶವಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್, ನಗರಸಭೆಯ ಉಪಾಧ್ಯಕ್ಷ ಸೊಪ್ಪು ಗಣೇಶ್, ಎಪಿಎಂಸಿ ಉಪಾಧ್ಯಕ್ಷ ತರಕಾರಿ ನಾಗರಾಜು, ಕಲ್ಪತರು ವಿದ್ಯಾಸಂಸ್ಥೆ ಖಜಾಂಜಿ ಟಿ,ಎಸ್,ಶಿವಪ್ರಸಾದ್, ಕಾರ್ಯದರ್ಶಿ ಎಂ,ಆರ್ ಸಂಗಮೇಶ್,ನಗರಸಭೆಯ ಸದಸ್ಯರುಗಳಾದ ಡಾ.ಓಹಿಲಾ ಗಂಗಾಧರ್, ಆಶ್ರೀಫಾ ಬಾನು, ಭಾರತಿ ಮಂಜುನಾಥ್, ನಗರಠಾಣೆಯ ಸಬಿಇನ್ಸ್‍ಪೆಕ್ಟರ್ ದ್ರಾಕ್ಷಾಯಣಿ ಮುಂತಾದವರು ಹಾಜರಿದ್ದರು,