ತುಮಕೂರು: ತುಮಕೂರಿನ ಶ್ರೀ ಸಿದ್ದಿವಿನಾಯಕ ಸೇವಾಮಂಡಳಿ ಆವರಣದಲ್ಲಿಗಣೇಶ ಚತುರ್ಥಿ–2024ರ ಪ್ರಯುಕ್ತ ಹಮ್ಮಿಕೊಂಡಿದ್ದ ದಕ್ಷಯಜ್ಞಯಕ್ಷಗಾನ ಪ್ರಸಂಗತುಂಬಿದ ಪ್ರೇಕ್ಷಾಂಗಣದಲ್ಲಿ ಯಶಸ್ವಿ ಪ್ರದರ್ಶನಕಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ಪ್ರಸನ್ನಕುಮಾರ್ , ಕಳೆದ ಹಲವಾರು ವರ್ಷಗಳಿಂದ ಗಣೇಶ ಉತ್ಸವವನ್ನು ನಡೆಸುತ್ತಿದ್ದು ನೂರಾರು ರಂಗತಂಡಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟು ನಮ್ಮ ಗಣೇಶ ಉತ್ಸವವನ್ನು ಯಶಸ್ವಿಗೊಳಿಸಿವೆ. ಈ ಬಾರಿಯೂ ಹತ್ತಾರು ರಂಗತಂಡಗಳು, ಯುವಕಲಾವಿದರು ಈ ಉತ್ಸವದಲ್ಲಿ ಭಾಗವಸುತ್ತಿದ್ದಾರೆ. ಅವರೆಲ್ಲರಿಗೂ ಶುಭಕೋರಿ ಮತ್ತು ಇಂದಿನ ದಕ್ಷಯಜ್ಞಯಕ್ಷಗಾನ ಪ್ರಸಂಗವೂ ಯಶಸ್ವಿಗೊಳ್ಳಲಿ ಎಂದು ಹಾರೈಸಿದರು.
ನಂತರಇನ್ನೊಬ್ಬಅತಿಥಿಯಾದ ನಾಗೇಶ್ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು. ಕಡೆಯದಾಗಿ ದಕ್ಷ ಯಜ್ಞಯಕ್ಷಗಾನ ಪ್ರಸಂಗದ ನಿರ್ದೇಶಕರಾದ ಮತ್ತು ಹೆಸರಾಂತ ಯಕ್ಷಗಾನ ಕಲಾವಿದರಾದ ಬೇಗಾರ್ ಶಿವಕುಮಾರ್ ಅವರು ಮಾತನಾಡಿ, ಯಕ್ಷಗಾನಂ ವಿಶ್ವಗಾನಂ ಎಂದು ಹೇಳಿ ಹೀಗೆ ಮುಂದಿನ ಎಲ್ಲಾ ರಂಗಕಾರ್ಯಕ್ರಮಗಳಿಗೆ ತುಮಕೂರಿನ ಪ್ರೇಕ್ಷಕರು ಬಂದು ಕಲಾವಿದರನ್ನು ಆಶೀರ್ವದಿಸಬೇಕು ಎಂದು ಕೇಳಿಕೊಂಡರು.
ದಕ್ಷನ ಪಾತ್ರದಲ್ಲಿಯಕ್ಷಗಾನದ ಪ್ರಸಿದ್ಧ ಕಲಾವಿದರಾದ ಬೇಗಾರ್ ಶಿವಕುಮಾರ್ ಅವರು ಬಹಳ ಮನೋಜ್ಞವಾಗಿ ಅಭಿನಯಿಸಿದರು ಮತ್ತು ಉಳಿದ ಪಾತ್ರಗಳು ಕೂಡ ಚೆನ್ನಾಗಿ ಅಭಿನಯಿಸಿ ತುಂಬಿದ ಪ್ರೇಕ್ಷಕರನ್ನು ಸಂತೋಷಪಡಿಸಿದರು. ಒಟ್ಟಿನಲ್ಲಿಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q