ತಿಪಟೂರು: ಸಿಂದಗಿ ಉಪಚುನಾವಣೆ ವೇಳೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ದಲಿತರು ಬಿಜೆಪಿಯಲ್ಲಿ ಹೊಟ್ಟೆಪಾಡಿಗೆ ಗೋಸ್ಕರ ಇದ್ದಾರೆ ಎಂಬ ದಲಿತ ವಿರೋಧಿಯಾಗಿ ಅವಮಾನಕರ ಹೇಳಿಕೆ ನೀಡಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದು , ಸದ್ಯದಲ್ಲಿ ಅವರ ಹೇಳಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮೋರ್ಚಾ ತಾಲೂಕು ಅಧ್ಯಕ್ಷ ಮತಿಘಟ್ಟ ಎಂ.ಪಿ. ಅಶೋಕ್ ಹೇಳಿದರು.
ತಿಪಟೂರು ನಗರದ ಕಲ್ಪತರು ಗ್ರಾಂಡ್ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ದಲಿತ ವಿರೋಧಿ ಹೇಳಿಕೆ ಕೂಡಲೇ ವಾಪಸ್ಸು ಪಡೆದು ದಲಿತರಲ್ಲಿ ಕ್ಷಮೆಯಾಚಿಸಬೇಕು ಇಲ್ಲವಾದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು. ದಲಿತರ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ದಲಿತರು ಯಾವುದೇ ಪಕ್ಷದಲ್ಲಿ ಜೀತ ಪದ್ಧತಿ ಜೀವನ ಮಾಡುತ್ತಿಲ್ಲ. ಸುಖಾಸುಮ್ಮನೆ ದಲಿತರನ್ನು ಕೆಣಕುವ ಕೆಲಸ ಮಾಡಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಎಸ್ ಸಿ ಮೋರ್ಚಾ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ, ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಸ್ಥಾನವನ್ನು ರಮಾನಾಥ್ ಕೋವಿಂದ್ ಹಾಗೂ ರಾಜ್ಯದ ರಾಜ್ಯಪಾಲರು ಉನ್ನತ ಹುದ್ದೆಯಲ್ಲಿದ್ದು ದೊಡ್ಡ ಜವಾಬ್ದಾರಿಯನ್ನು ದಲಿತ ಸಮುದಾಯಕ್ಕೆ ಬಿಜೆಪಿ ನೀಡಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಬಳ್ಳೇಕಟ್ಟೆ ಸುರೇಶ್ ಮಾತನಾಡಿ, ಸಿದ್ದರಾಮಯ್ಯ ದಲಿತರಿಂದಲೇ ಮತಪಡೆದು ಎಲ್ಲವನ್ನೂ ಅನುಭವಿಸಿ, ಇದೀಗ ದಲಿತರ ವಿರುದ್ಧ ಅವಮಾನಕರ ಹೇಳಿಕೆ ನೀಡುವುದು ಸರಿಯಲ್ಲ ಎಂದರು ಈ ಸಂದರ್ಭದಲ್ಲಿ ಶಿವಣ್ಣ ಎಪಿಎಂಸಿ ಅಧ್ಯಕ್ಷ ಎಚ್ಪಿ ದಿವಾಕರ್ ಧನಂಜಯ್ ನಾಯಕ್ ಷಣ್ಮುಖಸ್ವಾಮಿ ಮತ್ತಿತರು ಇದ್ದರು.