ಬೆಂಗಳೂರು: ನಟ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿ ಭೇಟಿ ಮಾಡಿರುವ ಫೋಟೋ, ವಿಡಿಯೋ ವೈರಲ್ ಮಾಡಿರುವ ರೌಡಿ ವೇಲುಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂದು ವರದಿಯಾಗಿದೆ.
ಈ ಪೋಟೊಗಳನ್ನ ವೈರಲ್ ಮಾಡಿರೋದು ನೀನೆ ಎಂದು ನಾಗ ವೇಲು ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾನೆ. ಸಿದ್ದಾಪುರ ಮಹೇಶನ ಕೊಲೆ ಕೇಸಲ್ಲಿ ಜೈಲು ಸೇರಿದ್ದ ವೇಲು, ಈಗ ವಿಲ್ಸನ್ ಗಾರ್ಡನ್ ನಾಗನ ಕೋಪಕ್ಕೆ ಗುರಿಯಾಗಿದ್ದಾನೆ ಅಂತ ಹೇಳಲಾಗಿದೆ.
ವಿಲ್ಸನ್ ಗಾರ್ಡನ್ ನಾಗ ಸೇರಿ ಒಟ್ಟು ಹತ್ತು ಜನರಿಂದ ವೇಲು ಮೇಲೆ ತೀವ್ರ ಹಲ್ಲೆ ನಡೆದಿದೆ ಅಂತ ಹೇಳಲಾಗಿದೆ. ಒಟ್ಟಿನಲ್ಲಿ ಡಿ ಬಾಸ್ ಕಾಲಿಟ್ಟ ಕಡೆಗಳೆಲ್ಲ, ಸಮಸ್ಯೆಗಳು ಸೃಷ್ಟಿಯಾಗ್ತಿವೆ. ಜೈಲಿನಲ್ಲಿ ಫೋಟೋ ವೈರಲ್ ಆದ ಹಿನ್ನೆಲೆ ದರ್ಶನ್ ಅವರಿಗೆ ಸದ್ಯ ಜಾಮೀನು ಸಿಗುವುದು ಕೂಡ ಅನುಮಾನ ಅಂತ ಹೇಳಲಾಗ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


