ನಿಮ್ಮ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಡಿಸೆಂಬರ್ 14 ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಆಧಾರ್ ಕಾರ್ಡ್ ಗೆ ನೀವು ವಿವರಗಳನ್ನು ನೀಡುವ ವೇಳೆ ಹಲವು ತಪ್ಪುಗಳಾಗಲು ಸಾಧ್ಯತೆ ಇವೆ. ಅಡ್ರೆಸ್, ಫೋನ್ ನಂಬರ್ ಲಿಂಕ್, ಡೇಟ್ ಆಫ್ ಬರ್ತ್ ಮೊದಲಾದ ವಿವರಗಳು ತಪ್ಪಾಗಿದ್ದರೆ. ಡಿ.14ರೊಳಗೆ ಸರಿಪಡಿಸಿಕೊಳ್ಳಿ. ಯಾಕೆಂದರೆ ಡಿಸೆಂಬರ್ 14ರವರೆಗೆ ಮಾತ್ರ ಉಚಿತವಾಗಿ ನೀವು ತಿದ್ದುಪಡಿ ಮಾಡಬಹುದು.
10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ ಗಳ ವಿವರಗಳನ್ನು ಉಚಿತವಾಗಿ ನವೀಕರಿಸಲು ಶನಿವಾರ ಕೊನೆಯ ದಿನಾಂಕವಾಗಿತ್ತು. ಇದೀಗ ಇದನ್ನು ಡಿಸೆಂಬರ್ 14 ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಸಹಾಯದಿಂದ ನೀವು ಅಧಿಕೃತ ವೆಬ್ಸೈಟ್ https://myaadhar.uidai.gov.in ಲಾಗಿನ್ ಮಾಡಬಹುದು ಮತ್ತು ವಿವರಗಳನ್ನು ನವೀಕರಿಸಬಹುದು. ಬೆರಳಚ್ಚು, ಐರಿಸ್ ಸ್ಕ್ಯಾನ್ ಮತ್ತು ಮುಖದ ಚಿತ್ರಗಳಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಆನ್ ಲೈನ್ ನಲ್ಲಿ ನವೀಕರಿಸಲು ಸಾಧ್ಯವಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296