nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಶ್ವದ ಅತ್ಯಂತ ದೊಡ್ಡ ಶಕ್ತಿ ತಾಯಿ: ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ

    May 26, 2026

    ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು

    May 26, 2026

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026
    Facebook Twitter Instagram
    ಟ್ರೆಂಡಿಂಗ್
    • ವಿಶ್ವದ ಅತ್ಯಂತ ದೊಡ್ಡ ಶಕ್ತಿ ತಾಯಿ: ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ
    • ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು
    • ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ
    • ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ
    • ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
    • ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
    • ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
    • ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಧಿಕಾರಿಗಳಿಂದ ವಿನಾ ಕಾರಣ ಕಾಲಹರಣ: ದಯಾಮರಣ ಕೇಳುವ ಸ್ಥಿತಿಗೆ ತಲುಪಿದ ಕುಟುಂಬ
    ತುಮಕೂರು February 3, 2022

    ಅಧಿಕಾರಿಗಳಿಂದ ವಿನಾ ಕಾರಣ ಕಾಲಹರಣ: ದಯಾಮರಣ ಕೇಳುವ ಸ್ಥಿತಿಗೆ ತಲುಪಿದ ಕುಟುಂಬ

    By adminFebruary 3, 2022No Comments2 Mins Read
    press meet

    ತುಮಕೂರು: ಪವತಿ ಖಾತೆಯ ಆಧಾರದಲ್ಲಿ ಪಹಣಿ, ಎಂ.ಆರ್‌ ಗಳು ಸಕ್ರಮವಾಗಿದ್ದರು, ಪ್ರತ್ಯೇಕ ಪೋಡಿ ಮಾಡಿಕೊಡದೇ ವಿನಾ ಕಾರಣ ಕಾಲಹರಣ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನೊಂದ ಮಹಿಳೆಗೆ ನ್ಯಾಯದೊರಕಿಸಿ ಕೊಡಬೇಕೆಂದು ಶೂದ್ರಸೇನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಸಿ.ರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

    ನಿರ್ಮಲ ಕೆ.ಎನ್ ಕೋಂ ಲೇಟ್ ರಾಜಕುಮಾರ್ ಬಿನ್, ಕಮಲಮ್ಮ ತುಮಕೂರು ನಗರ ನಿವಾಸಿಯಾದ ಇವರ ಪತಿಯವರಾದ ಲೇಟ್ ರಾಜ್ ಕುಮಾರ್ ಬಿನ್ ಕಮಲಮ್ಮರವರಿಗೆ ಭೂ ನ್ಯಾಯ ಮಂಡಳಿಯಿಂದ 10 ಗುಂಟೆ ವಿಸ್ತೀರ್ಣದ ಜಮೀನು ಸರ್ವೇ ನಂ.3.3ರ ಚನ್ನನದಿಣ್ಣೆ ಪ್ರದೇಶದಲ್ಲಿ ಮಂಜೂರಾಗಿದ್ದು ನ್ಯಾಯಯುತವಾಗಿದೆ.


    Provided by
    Provided by

    ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಸತ್ಯವಾಗಿವೆ. ತದನಂತರ ಇವರ ಪತಿಯಾದ ರಾಜ್‌ಕುಮಾರ್‌ ರವರು ಮರಣ ಹೊಂದಿದ್ದು, ಪವತಿ ಆಧಾರದಲ್ಲಿ ಇವರ ಹೆಸರಿಗೆ 10ಗುಂಟೆ ವಿಸ್ತೀರ್ಣದಲ್ಲಿ 02ಗುಂಟೆ ಸಾರ್ವಜನಿಕ ರಸ್ತೆಗೆ ಮಿಸಲಾಗಿದ್ದು, ಉಳಿದ 08 ಗುಂಟೆ ಇವರ ಹೆಸರಿಗೆ ಪಹಣಿ, ಎಂ.ಆರ್‌ , ದಾಖಲಾತಿಗಳಿವೆ, ಆದರೆ ಇದೇ ಸರ್ವೆ ನಂಬರ್‌ ಗಳಲ್ಲಿ ಕೆಲವರಿಗೆ ಭೂ ನ್ಯಾಯ ಮಂಡಳಿಯಲ್ಲಿ ಮಂಜೂರಾಗಿದ್ದು, ಅವರೆಲ್ಲರೂ ಜಿಲ್ಲಾಧಿಕಾರಿಗಳ ಮುಖಾಂತರ ಭೂ ಪರಿವರ್ತನೆ ಮಾಡಿಕೊಂಡು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ

    ಈ ಸರ್ವೇ ನಂಬರ್ ನಲ್ಲಿ ಮೂಲ ವಿಸ್ತೀರ್ಣ ವ್ಯತ್ಯಾಸವಾಗಿ ಮೂಲ ವಿಸ್ತೀರ್ಣಕ್ಕಿಂತ ಈಗಿನ ವಿಸ್ತೀರ್ಣ ವ್ಯತ್ಯಾಸವಾಗಿದೆ. ಆದ್ದರಿಂದ ನಾವುಗಳು ಈ ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದಂತೆ ವಿಸ್ತೀರ್ಣ ವ್ಯತ್ಯಾಸದ ಬಗ್ಗೆ ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದೆವು, ಈ ಮನವಿಗೆ ಸ್ಪಂದಿಸಿದ ವಿಭಾಗಾಧಿಕಾರಿಗಳು ತಮ್ಮ ಪತ್ರದೊಂದಿಗೆ ತುಮಕೂರು ತಾಲ್ಲೂಕು, ತಹಶೀಲ್ದಾರ್‌ರವರಿಗೆ ಈ ವಿಸ್ತೀರ್ಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ತಹಶೀಲ್ದಾರ್ ಕಛೇರಿಯಲ್ಲಿರುವ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಅಜಯ್‌ ರವರು ಹಾಗೂ ಗ್ರಾಮಲೆಕ್ಕಿಗರಾದ ರವಿಕುಮಾರ್ ಭೂಮಿಕೇಂದ್ರದ ಹೇಮಲತಾರವರು ವಿನ ಕಾರಣ ಯಾವುದೇ ಲೋಪಗಳು ಇಲ್ಲದಿದ್ದರೂ ವಿಸ್ತೀರ್ಣ ವ್ಯತ್ಯಾಸಗಳನ್ನು ಗುರುತಿಸದೇ ಕಳೆದ ಫೆಬ್ರವರಿ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಏನು ಮಾಡದೇ ಅಲೆದಾಡಿಸಿ, ಅಲೆದಾಡಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿರುತ್ತಾರೆ ಎಂದು ಅವರು ತಿಳಿಸಿದರು.

    ನೊಂದ ಕುಟುಂಬಕ್ಕೆ ನ್ಯಾಯಯುತವಾಗಿ ಬಂದಿರುವ 8 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಿಸ್ತೀರ್ಣ ವ್ಯತ್ಯಾಸವಾಗಿರುವುದನ್ನು ಸರಿಪಡಿಸಿಕೊಡಬೇಕು ಹಾಗೂ ಇವರಿಗೆ ಮಾನಸಿಕವಾಗಿ ಹಿಂಸೆಯನ್ನು ನೀಡಿದ ಈ ಮೇಲಿನ ಅಧಿಕಾರಿಗಳ ವಿರುದ್ದ ಕಾನೂನು ರೀತ್ಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.

    “ತಾಲೂಕು ಕಚೇರಿ ಬಾಗಿಲು ತಟ್ಟಿ ತಟ್ಟಿ ನಮಗೆ ಸಾಕಷ್ಟು ನೋವು ಉಂಟಾಗಿದೆ. ಜಿಲ್ಲಾಧಿಕಾರಿಗಳು ಕೂಡಲೆ ನಮಗೆ ನ್ಯಾಯ ಕೊಡಿಸಲು ಮುಂದಾಗಬೇಕಿದೆ. ನಮಗೆ ನ್ಯಾಯ ಸಿಗದಿದ್ದರೆ, ನಾವು ಕುಟುಂಬ ಸಮೇತರಾಗಿ ಬಂದು ಜಿಲ್ಲಾಧಿಕಾರಿಗಳಿಗೆ ತುಮಕೂರು ಜಿಲ್ಲೆಯ ಸಂಘಟನೆಗಳ ಮುಖಾಂತರ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಸಿದ್ದರಿದ್ದೇವೆ” ಎಂದು ನೊಂದ ಮಹಿಳೆಯ ಮಗನಾದ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

     

    ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

     

    admin
    • Website

    Related Posts

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026

    ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ:  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ

    May 24, 2026

    ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ: 1.98 ಲಕ್ಷ ರೂಪಾಯಿ ಕಳೆದುಕೊಂಡ ತುಮಕೂರಿನ ವ್ಯಕ್ತಿ!

    May 24, 2026

    Leave A Reply Cancel Reply

    Our Picks

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ವಿಶ್ವದ ಅತ್ಯಂತ ದೊಡ್ಡ ಶಕ್ತಿ ತಾಯಿ: ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ

    May 26, 2026

    ಮಧುಗಿರಿ/ದೊಡ್ಡೇರಿ: ವಿಶ್ವದ ಅತ್ಯಂತ ದೊಡ್ಡ ಶಕ್ತಿ ತಾಯಿ ಎಂದು ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ ತಿಳಿಸಿದರು. ಮಧುಗಿರಿ ತಾಲ್ಲೂಕಿನ…

    ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು

    May 26, 2026

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026

    ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ

    May 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.