ಸರಗೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸುನೀಲ್ ಬೋಸ್ ಗೆ ಹೆಚ್ಚು ಮತಗಳನ್ನು ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಹಂಚೀಪುರ,ಮುಳ್ಳೂರು.ಕೆ ಬೆಳತ್ತೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ದಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಭೆಯನ್ನು ಹಮ್ಮಿಕೊಂಡಿದ್ದು,ಗಣ್ಯರು ಜ್ಯೋತಿ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ವೇಳೆ ನೀಡಿದ ಮತಗಳಗಿಂತ ಹೆಚ್ಚಿನ ಮತಗಳನ್ನು ಸುನೀಲ್ ಬೋಸ್ ರವರಿಗೆ ನೀಡಬೇಕು.ಆರ್ಭ್ಯಥಿಯಾದ ಸುನೀಲ್ ಬೋಸ್ ರವರು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು.ಎಲ್ಲಿ ಕ್ಷೇತ್ರಗಳಿಗಿಂತ ನಮ್ಮ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ನೀಡಲಾಗುವುದು ಎಂದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೀಸಲು ಆರ್ಭ್ಯಥಿ ಸುನೀಲ್ ಬೋಸ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡಿ ಈ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅನಿಲ್ ಚಿಕ್ಕಮಾದು ಜಯಗಳಿಸಿದ್ದರು ಎಂದು ಹೇಳಿದರು.
ಮಾಜಿ ಮಂತ್ರಿ ಕೋಟೆ ಎಂ ಶಿವಣ್ಣ ಮಾತನಾಡಿ ಕಳೆದ ಹತ್ತು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಜಾರಿಗೊಳಿಸದೆ ಇದ್ದರೂ ಸಹ ಈ ಬಾರಿಯೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ ಇದು ಹಾಸ್ಯಾಸ್ಪದ ಎಂದರು.
ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಡಬಲ್ ಗ್ಯಾರಂಟಿ ಯೋಜನೆಗಳು ದೊರಕಲಿವೆ. ಅದರಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ರವರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ವಿವಿಧ ಪಕ್ಷಗಳನ್ನು ತೊರೆದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್,ಪುರಸಭೆ ಸದಸ್ಯ ಎಚ್ ಸಿ ನರಸಿಂಹಮೂರ್ತಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾದಪ್ಪ,ಏಜಾಷಾ ಪಾಷಾ, ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು,ಮಾಜಿ ಜಿಪಂ ಸದಸ್ಯರು ಚಿಕ್ಕವೀರನಾಯಕ, ರವಿ, ಭಾಗ್ಯಲಕ್ಷ್ಮಿ, ಎಚ್ ಸಿ ಮಂಜುನಾಥ್, ನಂದಿನಿ ಚಂದ್ರಶೇಖರ, ಗ್ರಾಪಂ ಸದಸ್ಯರು ಕುರ್ಣೇಗಾಲ ಬೆಟ್ಟಸ್ವಾಮಿ, ನಂಜಯ್ಯ, ಚಿಕ್ಕಶಂಭೆಗೌಡ , ಬಸವರಾಜು, ಶಿವಶಂಕರ್, ಲೋಕೇಶ್, ಪ್ರಕಾಶ್, ಶಿವರಾಜು,ಭಾಗ್ಯ ಕೆಂಪಸಿದ್ದ, ಶಿವಲಿಂಗಯ್ಯ,ಶಿವಚನ್ನ, ಗಂಗಾಧರ್,ಪಕ್ಷದ ಪ್ರಧಾನ ಕಾರ್ಯದರ್ಶಿ ಚೆಲುವರಾಜು, ಟೌನ್ ಅಧ್ಯಕ್ಷ ನಾಗರಾಜು,ನಾಮಧಾರಿಗೌಡ ಸಮುದಾಯ ಸಂಘದ ತಾಲ್ಲೂಕು ಅಧ್ಯಕ್ಷ ಬೀಮರಾಜು, ಚಿಕ್ಕಣ್ಣ ಬಿರ್ವಾಳ್ ,ಶಂಭುಲಿಂಗನಾಯಕ.ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ಮುಖಂಡರು ಪುಟ್ಟಸ್ವಾಮಿ,ಪರಶಿವಮೂರ್ತಿ,ನಾಗರಾಜು ಮಣಿ, ನಾಗರಾಜು, ಮಣಿಕಂಠ, ನಟರಾಜು, ಕ್ಯಾತನಹಳ್ಳಿ ನಾಗರಾಜು,ರಾಜನಾಯಕ,ಮರಿದೇವಯ್ಯ, ಬಸವರಾಜು, ಗುರುಸ್ವಾಮಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ಧರಾಜು, ಸೋಮಶೇಖರ್, ಪ್ರಭುಸ್ವಾಮಿ, ಕೆಂಡಗಣ್ಣಸ್ವಾಮಿ, ಮಂಜುನಾಥ್, ನಾಗರಾಜು, ಕುಮಾರ್, ಪುಟ್ಟಸ್ವಾಮಿ, ರಾಜೇಶ್, ಪ್ರಭು, ಚಿನ್ನಯ್ಯ,ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ