ತಿಪಟೂರು: ದಲಿತ ವಿರೋಧಿ ಅಸ್ಪೃಶ್ಯತಾ ಮನಸ್ಥಿತಿ ಹೊಂದಿರುವ ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ರವರನ್ನು ತುಮಕೂರು ಜಿಲ್ಲೆಯಿಂದ ಬೇರಡೆ ವರ್ಗಾವಣೆ ಮಾಡಬೇಕೆಂದು ದಲಿತ ಪ್ರಗತಿಪರ ಸಂಘಟನೆಗಳು ಒತ್ತಾಯ ಮಾಡಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಶಾಂತಪ್ಪ, ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ. ಪ್ರಭು ಅವರು ಅಧಿಕಾರ ದುರ್ಬಳಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಲಿತ ಸರ್ಕಾರಿ ನೌಕರರುಗಳಿಗೆ ನೀಡುತ್ತಿರುವ ಮಾನಸಿಕ ಹಿಂಸೆ ಮತ್ತು ಅಮಾನತು ಶಿಕ್ಷೆಗಳನ್ನು ದಲಿತ ಅಧಿಕಾರಿಗಳನ್ನು ಗುರಿಯನ್ನಾಗಿಸಿ ನೀಡುತ್ತಿರುವುದು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ದಲಿತ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಅಸ್ಪೃಶ್ಯತೆಯನ್ನ ತುಮಕೂರು ಜಿಲ್ಲಾ ಪಂಚಾಯತಿ ಸಿಇಓ ರವರು ಜೀವಂತವಾಗಿಸಲು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿರುವುದು ದಲಿತ ನೌಕರರ ಮೇಲಿನ ದೌರ್ಜನ್ಯದಿಂದ ರುಜುವಾತಾಗಿರುತ್ತದೆ ಆದಕಾರಣ ದಲಿತ ವಿರೋಧಿ ಅಸ್ಪೃಶ್ಯತಾ, ಸ್ಥಿತಿ ಹೊಂದಿರುವ ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನ ಅವರನ್ನ ಮಾನ್ಯ ಸಮಾಜ ಕಲ್ಯಾಣ ಸಚಿವರು ಮತ್ತು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಇವರನ್ನು ಜಿಲ್ಲೆಯಿಂದ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಇದೆ ವೇಳೆ ಮಾತನಾಡಿದ ರಾಘವೇಂದ್ರ ಏಗಚಿಕಟ್ಟೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರಿಗೆ ಒಂದು ನ್ಯಾಯ ಮೇಲ್ವರ್ಗದವರಿಗೆ ಒಂದು ನ್ಯಾಯವೇ? ದಲಿತರನ್ನೇ ಗುರಿಯಾಗಿ ಇರಿಸಿಕೊಂಡು ತುಮಕೂರು ಜಿಲ್ಲೆಯಾದ್ಯಂತ ಹಲವರನ್ನು ಅಮಾನತ್ತು ಮಾಡಿರುವುದು ಖಂಡನೀಯ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಮತ್ತು ಅಮಾನತುಗೊಂಡಿರುವ ನೌಕರರನ್ನು ಪುನಃ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಮತ್ತು ಸಿಇಓ ಜಿ ಪ್ರಭು ಅವರನ್ನು ವಜಾ ಮಾಡಬೇಕು ಆಗ್ರಹಿಸಿದರು.
ದಲಿತ ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ, ಸಿಇಓ ಜಿ.ಪ್ರಭುರವರನ್ನು ವರ್ಗಾವಣೆ ಮಾಡದಿದ್ದಲ್ಲಿ ದಲಿತ ವಿರೋಧಿ ಡಾ.ಜಿ.ಪರಮೇಶ್ವರ್ ಮನೆಯ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಕುಪ್ಪಾಳು ರಂಗಸ್ವಾಮಿ. ಬಿಳಿಗೆರೆ ಚಂದ್ರಶೇಖರ್, ಟಿ.ಕೆ. ಕುಮಾರ್ ಇನ್ನು ಮುಂತಾದವರು ಹಾಜರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4