ಕೊರಟಗೆರೆ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳ ಓರ್ವ ರೌಡಿ ಶೀಟರ್ ನನ್ನು ಕೊರಟಗೆರೆ ತಾಲೂಕಿನಿಂದ ಗಡಿಪಾರು ಮಾಡಿರುವ ಪ್ರಕರಣ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ರವರ ಆದೇಶದ ಮೇರೆಗೆ ರೌಡಿ ಶೀಟರ್ ಪುನೀತ್ ನನ್ನು ಕೊರಟಗೆರೆ ತಾಲೂಕಿನಿಂದ ತುರುವೇಕೆರೆ ತಾಲೂಕಿಗೆ ಕೊರಟಗೆರೆ ಸಿಪಿಐ ಆರ್.ಪಿ.ಅನಿಲ್ ಗಡಿಪಾರು ಮಾಡಿದ್ದಾರೆ. ಹಾಗೂ ಪ್ರತಿನಿತ್ಯ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ಸಹಿ ಹಾಕುವಂತೆ ಆದೇಶಿಸಿದ್ದಾರೆ.
ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ಗಾನಹಳ್ಳಿ ನಿವಾಸಿಯಾಗಿರುವ ಪುನೀತ್ ನ ಮೇಲೆ 3 ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್ ತೆರೆಯಲಾಗಿತ್ತು, ಮತ್ತೊಂದು ಪ್ರಕರಣವು ದಾಖಲಾದ ಹಿನ್ನೆಲೆಯಲ್ಲಿ ಹಾಗೂ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಜೂಜು ಆಡದಂತೆ ಎಚ್ಚರಿಕೆ: ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಕಳೆದ ಬಾರಿ ಕೆಲವು ಕಡೆ ಜೂಜು ಪ್ರಕರಣಗಳು ಕಂಡು ಬಂದಿದ್ದು ಯುಗಾದಿ ಹಬ್ಬ ಅಥವಾ ಮಾರನೇ ದಿನ ಜುಜೂ ಆಡುವುದು ಕಂಡು ಬಂದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಜುಜೂ ಆಡಲು ಜಮೀನು, ಸ್ಥಳ, ಕಟ್ಟಡ ನೀಡುವವರ ವಿರುದ್ದವೂ ಪ್ರಕರಣ ದಾಖಲಿಸಲಾಗುವುದು.
ಆದ್ದರಿಂದ ಯುಗಾದಿ ಹಬ್ಬವನ್ನು ಆನಂದವಾಗಿ ಅಚರಿಸುವಂತೆ ಹಾಗೂ ಜೂಜೂ ಆಡದಂತೆ ಕೊರಟಗೆರೆ ಸಿಪಿಐ ಆರ್.ಪಿ. ಅನಿಲ್ ಸೂಚಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296