ಮಧುಗಿರಿ: ನನಗೆ ಕಣ್ಣು ಕಾಣಿಸುವುದಿಲ್ಲ, ಹೆಂಡತಿ ಮಕ್ಕಳು ಯಾರೂ ಇಲ್ಲ, ವೃದ್ಧಾಪ್ಯ ವೇತನದಿಂದ ನಾನು ಜೀವನ ಸಾಗಿಸುತ್ತಿದ್ದೇನೆ. ಆದರೆ, ಹಿಂದೆ ಅಂಚೆ ಇಲಾಖೆ ಕಚೇರಿ ಅಕೌಂಟ್ ಗೆ ನನಗೆ ವೃದ್ಧಾಪ್ಯ ವೇತನ ಬರುತ್ತಿತ್ತು. ಆದರೆ ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತಿರುವುದರಿಂದ ನನಗೆ ಸಮಸ್ಯೆಯಾಗಿದೆ ಎಂದು ವೃದ್ಧರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ನೇರಳೇಕೆರೆ ಗ್ರಾಮದ ನಿವಾಸಿಯಾಗಿರುವ ಕರಿಯಪ್ಪನವರು ಇದೀಗ ತಮಗೆ ನೇರಳೇಕೆರೆ ಅಂಚೆ ಇಲಾಖೆಯ ಖಾತೆಗೆ ವೃದ್ಧಾಪ್ಯ ವೇತನವನ್ನು ಜಮಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದಿನಿಂದಲೂ ಅಂಚೆಕಚೇರಿ ಖಾತೆಗೆ ಹಣ ಬರುತ್ತಿತ್ತು. ಆದರೆ ಈಗ ಅದನ್ನು ಕೈಮರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ವರ್ಗಾಯಿಸಲಾಗುತ್ತಿದೆ. ಹಾಗಾಗಿ ವೃದ್ಧಾಪ್ಯ ವೇತನವನ್ನು ಪಡೆದುಕೊಳ್ಳಲು ಕಷ್ಟಕರವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಅಂಗವಿಕಲರಿಗೆ, ವೃದ್ಧರಿಗೆ ಸ್ಥಳೀಯವಾಗಿಯೇ ವೃದ್ಧಾಪ್ಯ ವೇತನ ದೊರೆಯುವಂತೆ ಮಾಡಬೇಕು. ವೃದ್ಧರನ್ನ ಅಲೆದಾಡಿಸದೇ ವೃದ್ಧಾಪ್ಯ ವೇತನ ಅವರ ಕೈಗೆ ಸಿಗುವಂತೆ ಕ್ರಮವಹಿಸಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q