ಮಂಡ್ಯ: ಭಕ್ತನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ದೇವಿಯ ತಾಳಿ ಕದ್ದು ಪರಾರಿಯಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ತಾಯಿ ದೇವಾಲಯದಲ್ಲಿ ನಡೆದಿದೆ.
ಭಕ್ತನ ಸೋಗಿನಲ್ಲಿ ಬಂದು ಕೆಲವೇ ಕ್ಷಣಗಳಲ್ಲಿ 6 ಗ್ರಾಂ ತೂಕದ ಚಿನ್ನದ ತಾಳಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದು, ಈತ ಪರಾರಿಯಾಗುವವರೆಗೂ ಯಾರಿಗೂ ತಿಳಿಯದಷ್ಟು ಚಾಲಕಿತನದಿಂದೇವಿಯ ಚಿನ್ನವನ್ನು ಎಗರಿಸಿದ್ದಾನೆ.
ಮೊದಲಿಗೆ ಕಳ್ಳ ದೇವಿಗೆ ಕೈಮುಗಿದಿದ್ದು, ಆ ಬಳಿಕ ಗರ್ಭಗುಡಿಗೆ ನುಗ್ಗಿ ಚಿನ್ನದ ತಾಳಿ ಕಿತ್ತುಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700