ಮಹಾರಾಷ್ಟ್ರದ ಪಂಡರಾಪುರಕ್ಕೆ ತೆರಳಿದ್ದ ಬೆಳಗಾವಿಯ ವಿಠ್ಠಲ ಭಕ್ತರ ಮೇಲೆ ಕೀಡಿಗೇಡಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜ್ ತಾಲೂಕಿನ ಮಾಲಗಾಂವ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಸುರೇಶ್ ರಾಜುಕರ್, ಪರಶುರಾಮ ಜಾಧವ್, ಲಾರಿ ಚಾಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಷಾಢ ಏಕಾದಶಿ ನಿಮಿತ್ತ ತುರಮುರಿ ಗ್ರಾಮದ ಭಕ್ತರು ಬಾಡಿಗೆ ಲಾರಿ ಮಾಡಿಕೊಂಡು ಪಂಡರಾಪುರಕ್ಕೆ ತೆರಳಿದ್ದರು. ಪಂಡರಾಪುರ ವಿಠ್ಠಲನ ದರ್ಶನ ಪಡೆದು ಬೆಳಗಾವಿಗೆ ವಾಪಸ್ ಬರುತ್ತಿದ್ದ ವೇಳೆ ದಾರಿ ತಪ್ಪಿದ್ದಾರೆ. ಬೆಳಗಾವಿಗೆ ಬದಲು ಮಾಲಗಾಂವ ಗ್ರಾಮಕ್ಕೆ ತೆರಳಿದ್ದರು.
ಈ ವೇಳೆ ಲಾರಿಗೆ ಕಾರು ಅಡ್ಡ ಬಂದಿದ್ದು, ಪಾನಮತ್ತನಾಗಿದ್ದ ಕಾರಿನ ಚಾಲಕ ಭಕ್ತರೊಂದಿಗೆ ಕಿರಿಕ್ ಮಾಡಿದ್ದಾನೆ. ಬಳಿಕ ಮೊಬೈಲ್ ಕರೆ ಮಾಡಿ ಸ್ಥಳಕ್ಕೆ ಪುಂಡರನ್ನು ಕರೆಸಿಕೊಂಡು ಭಕ್ತರ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಮೂವರು ವಿಠ್ಠಲ ಭಕ್ತರು ಗಾಯಗೊಂಡಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


