ಕೊರಟಗೆರೆ: ವಿಶ್ವಕ್ಕೆ ಶಾಂತಿ ಅಹಿಂಸಾ ಧರ್ಮವನ್ನು ಬೋಧಿಸುವ ಜೈನ ಧರ್ಮದ ಮಂತ್ರಗಳು , ಬೋಧನೆ , ಪಾಠ ಪ್ರವಚನಗಳನ್ನು ನೀಡುವ ಧರ್ಮಭೂಮಿ ತೋವಿನಕೆರೆಯಾಗಿದೆ ,ಇಲ್ಲಿ ನಡೆಯುತ್ತಿದ್ದ ಮಂತ್ರಗಳು ಬೋಧನೆಗಳು, ಪ್ರವಚನಗಳು ವಿಶ್ವಮಾನವಾಗಿದ್ದು ,ಇದೊಂದು ಧರ್ಮ ಭೂಮಿಯಾಗಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚನ್ನರಾಯನ ದುರ್ಗ ಹೋಬಳಿ ತೋವಿನಕೆರೆಯಲ್ಲಿ ಶ್ರೀ ದಿಗಂಬರ ಜೈನ ಶ್ರೀ ಚಂದ್ರಪ್ರಭಾ ತೀರ್ಥಂಕರರ ಜಿನಮಂದಿರದಲ್ಲಿ ಚಂದ್ರನಾಥ ಭವನದ ಉದ್ಘಾಟನಾ ಸಮಾರಂಭದ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಈ ಹಿಂದೆ ಇಲ್ಲಿ ಮಂತ್ರಗಳ ಬೋಧನೆ ,ಪಾಠ ಪ್ರವಚನಗಳು ನಡೆಯುತ್ತಿದ್ದವು, ಮಾತಾಜಿಗಳು ಪ್ರವಚನ ನೀಡುತ್ತಿದ್ದರು, ಇದೊಂದು ಧರ್ಮ ಭೂಮಿಯಾಗಿದ್ದು ಧರ್ಮಕ್ಕೆ, ಸಾಹಿತ್ಯಕ್ಕೆ, ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದೆ ಎಂದರು.
ಸರ್ಕಾರದಲ್ಲಿ ಇಂದು ಓಟು ಬ್ಯಾಂಕ್ ರಾಜಕೀಯ ನಡೆದಿದೆ, ದೇಶದಲ್ಲಿ ಇಂದು ಸಂಸ್ಕೃತಿಯ ಉದ್ಧಾರ ಬೇಕಿಲ್ಲ, ಭೂಮಿ, ಇತಿಹಾಸ ಬೇಡವಾಗಿದೆ ಎಂದು ವಿಷಾದಿಸಿದ ಭಟ್ಟರಕ ಶ್ರೀಗಳು, ದೇಶ, ಮಣ್ಣು, ಗಾಳಿ, ಬೆಳಕು, ಆಹಾರಗಳನ್ನು ಜೈನರು ಸಂರಕ್ಷಿಸಿದ್ದಾರೆ. ಇಲ್ಲದಿದ್ದರೆ ಎಲ್ಲವೂ ಪರಕೀಯರ ಪಾಲಾಗುತ್ತಿತ್ತು ಎಂದ ಅವರು, ದೇಶಕ್ಕೆ ಹೆಣ್ಣು ಮಕ್ಕಳ ಸೇವೆ ಅಪಾರ ಎಂದರು.
ಈಗಿನ ಸರ್ಕಾರಗಳಿಗೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ ಭಾರತದ ಲಾಂಛನ ,ಸಿಂಹ, ಅಶೋಕಸ್ಥಂಭ, ತ್ರಿವರ್ಣ ಧ್ವಜದ ಮಧ್ಯೆ ಚಕ್ರ, ಸೇರಿದಂತೆ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಭಟ್ಟರಕ ಶ್ರೀಗಳು, ಜನಪದ ತಜ್ಞ, ಸಾಹಿತಿ, ಡಾ.ಎಸ್.ಪಿ.ಪದ್ಮಪ್ರಸಾದ್ ಜೈನ್ ಕನ್ನಡ ಸಾಹಿತ್ಯಕ್ಕೆ, ಜೈನ ಧರ್ಮಕ್ಕೆ ,ಕನ್ನಡದ ಉಳಿವಿಗೆ ಕೊಡುಗೆ ಅಪಾರ ಎಂದರು.
ಸಂಕಟ ಬಂದಾಗ ಚತುರ್ಥಿ ಮಾಡಬೇಕು. ಚೌತಿಯ ದಿನ ಮಾಡಿ, ಉಪಹಾರ ಸೇವಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ ಧರ್ಮ ಪ್ರಚಾರಕರಿಗೆ ಮೋಕ್ಷ ಸಿಗಬೇಕು, ಮನುಕುಲದ ಅಭಿವೃದ್ಧಿಯಾಗಬೇಕು, ಪಂಚ ಸಂದೇಶಗಳ ಪಾಲನೆ ಅಗತ್ಯ ಭಾವನೆ ಬದ್ಧತೆಗಳನ್ನು ವೈಜ್ಞಾನಿಕವಾಗಿ ಕೊಡಬೇಕಿದ್ದು, ಸತ್ಯ ಎನ್ನುವುದು ಕಾನೂನು, ಸನ್ಯಾಸತ್ವದಲ್ಲೂ ಇಲ್ಲ, ಸಮಾಜದಲ್ಲಿ ಇಂದು ಕಂದಕ ಹಿಂಸೆಗಳು ಹೆಚ್ಚಿವೆ ಎಂದು ಎಂದು ವಿಷಾಧಿಸಿದರು.
ಗಣ್ಯರ ಸಂದೇಶ ಬಯಸಿದರೆ ಶಾಂತಿ ಸಾಧ್ಯ, ಒಳ್ಳೆ ಸಮಾಜ– ಧರ್ಮದ ಹಾದಿಯಲ್ಲಿ ನಡೆದಾಗ, ಮಾನವೀಯತೆ ನೆಲೆಗಟ್ಟು ರೂಪಿಸಿಕೊಂಡಾಗ ಇದು ಸಾಧ್ಯ , ನಾವು ಸಂಘಟಿತರಾದಾಗ ಬದುಕಿನಲ್ಲಿ ಬದಲಾವಣೆ ಅಗತ್ಯ ಎಂದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ, ರತ್ನತ್ರೆಯ ಕ್ರಿಯೇಷನ್ ನ ಡಾ.ನೀರಜಾ ನಾಗೇಂದ್ರ ಕುಮಾರ್ ಮಾತನಾಡಿ ಸಭಿಕರಿಲ್ಲದೆ ಸಭೆಗೆ ಶೋಭೆ ಇಲ್ಲ, ಧಾರ್ಮಿಕ ಸಭೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದು, ಈ ಬಗ್ಗೆ ಚಿಂತನೆ ಅಗತ್ಯ. ಜೈನ ಸಮಾಜದ ಉಳಿವಿಗೆ ಮಕ್ಕಳು ಅಗತ್ಯವಾಗಿದ್ದು, ಇಂದು ಧರ್ಮದ ಉಳಿವಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ಎಲ್ಲದಕ್ಕೂ ಸುಖ ಅಗತ್ಯವಾಗಿದೆ, ತಾಂತ್ರಿಕ ಯುಗದಿಂದ ಅಧಿಕಾರ , ಹಣ , ಕೀರ್ತಿಯನ್ನು ಬಯಸುತ್ತಿದ್ದು ಇದರಿಂದ ಸುಖ, ಆತ್ಮಶಾಂತಿ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು. ಸಪ್ತವ್ಯಸನಗಳಿಂದ ದೂರವಿದ್ದು ಸಮಾಜದ ಮೌಲ್ಯಗಳನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ತುಮಕೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ದಿವ್ಯ ಸಾನಿಧ್ಯಆಶೀರ್ವಚನ ನೀಡಿ ಜೈನ ಧರ್ಮದ ಅಹಿಂಸ, ಶಾಂತಿ , ಅಸ್ಮಿಯ, ಮೌಲ್ಯಗಳು ಪುರಾತನವಾದದ್ದು. ಇವುಗಳ ಸಾಧನೆಗಳನ್ನು ಪ್ರೇರೇಪಿಸುವಲ್ಲಿ ಧರ್ಮದ ಕೊಡುಗೆ ಅಪಾರ, ಆಹಿಂಸೆ ಪರಿಚಯಿಸಿದ ಸಾಧನೆ, ಶಾಂತಿ ,ಸಾಂಗೀಕ ಬದುಕಿಗೆ, ಸಮಾಜಕ್ಕೆ ಪರಿಚಯಿಸಿದವರು ,ಹಾಲು ಜೇನು ಮಿಲನಗೊಂಡಂತಿದೆ ಎಂದರು.
ಜೈನ ಧರ್ಮ, ಹಿಂದೂ ಹಾಗೂ ಬೌದ್ಧ ಧರ್ಮದಲ್ಲಿ ಒಡನಾಟ ಹೊಂದಿದೆ ಭಾರತದ ಉಳಿವಿನಲ್ಲಿ ಜೈನ ಧರ್ಮದ ಪಾತ್ರ ಅಪಾರವಾಗಿದ್ದುಈ ಬಗ್ಗೆ ಚಿಂತನೆ ಅಗತ್ಯ ಎಂದು ಅವರು ,ಧರ್ಮ ಎಲ್ಲವನ್ನು ಆಚರಣೆಯಿಂದ ನೋಡಬೇಕಿದೆ ಎಂದರು.
ಸಮಾಜದ ಆರೋಗ್ಯಕ್ಕೆ ಸರ್ವವು ಅವಿನ ಭಾವ ಹೊಂದಿರಬೇಕು ಎಲ್ಲವನ್ನು ಆತ್ಮ ಗೌರವದಿಂದ ನೋಡಬೇಕು . ಇಲ್ಲದಿದ್ದರೆ ಧರ್ಮಕ್ಕೆ ಉಳಿಗಾಲವಿಲ್ಲ ಎಂದರು.
ದೇಶದಲ್ಲಿ ಧರ್ಮದ ಸಂಶೋಧನೆಗಳು ಹೆಚ್ಚು ಹೆಚ್ಚು ನಡೆದಿದೆ . ಇವು ಧರ್ಮಗಳು ಐಕ್ಯತೆಯಿಂದ ಬದುಕಲು ಪೂರಕವಾಗಿವೆ, ಭಾರತದ ಇತಿಹಾಸವನ್ನು ಭಾರತೀಯರೇ ಬರೆಯಬೇಕು , ಪರಕೀಯರ ಬರಹದ ಬದುಕಿನಲ್ಲಿ ಸೌಖ್ಯವಿಲ್ಲ ಯಾವುದಕ್ಕೂ ವಿವೇಚನೆ ಅಗತ್ಯ ಎಂದರು.
ತಿಂಗಳಿಗೊಂದು ಚಿಂತನ ಸಭೆ ಅಗತ್ಯ ,ಗಣ್ಯರಿಂದ ಕಾರ್ಯಕ್ರಮಗಳು ಅಗತ್ಯ, ಸಮಸ್ಯೆ ಇರುವುದು ಧರ್ಮದಿಂದಲ್ಲ, ಜನರಿಂದ ಎಂದ ಅವರು ಎಲ್ಲದಕ್ಕೂ ವೈಚಾರಿಕತೆ ಅಗತ್ಯ ಎಂದ ಅವರು, ಈ ಬಗ್ಗೆ ಅಧ್ಯಯನಶೀಲರಾಗೋಣ ಎಂದರು.
ಶ್ರೀ ಕ್ಷೇತ್ರ ಸಿದ್ದರ ಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಎಂದು ಯುವ ಪೀಳಿಗೆಗೆ ಧರ್ಮದ ಬೋಧನೆ ಅಗತ್ಯ ,ಆತ್ಮಸ್ಥೈರ್ಯ ತುಂಬುವುದು ಅಗತ್ಯ, ಜೈನ ಧರ್ಮ ಧಾರ್ಮಿಕ ಆಚರಣೆಯಲ್ಲಿ ಮಹತ್ವ ಹೊಂದಿದ್ದು, ಇಂದು ಧೈರ್ಯ ಎನ್ನುವುದು ಅಗತ್ಯವಾಗಿದ್ದು, ಇದಕ್ಕೆ ಕರ್ಮವನ್ನು ನಿಗ್ರಹಿಸುವ ಶಕ್ತಿ ಇದೆ. ಧರ್ಮವನ್ನು ಆಚರಿಸಿದಾಗ ಧೈರ್ಯ, ಶಕ್ತಿ ಬರಲಿದೆ ಎಂದ ಅವರು, ಧರ್ಮದಿಂದ ಆಚಾರವಂತರಾದಾಗ ಎಲ್ಲಾ ಸಾಧ್ಯವಾಗಲಿದೆ ,ಪರಂಪರೆಗಳನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು .ಧರ್ಮದ ಹಾದಿಯಲ್ಲಿ ನಡೆದಾಗ ಎಲ್ಲಾ ಸಾಧ್ಯವಾಗಲಿದೆ ಸತ್ಯದ ಮೂಲಕ ಧರ್ಮದ ಹಾದಿ ಅನುಸರಿಸಿ, ಧರ್ಮದ ಆಚಾರ –ವಿಚಾರ ಗಳನ್ನ ರೂಡಿಸಿಕೊಳ್ಳುವಂತೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೋವಿನಕೆರೆ ದಿಗಂಬರ ಜೈನ ಶ್ರೀಚಂದ್ರಪ್ರಭಾ ತೀರ್ಥಂಕರ ಜಿನಮಂದಿರ ಅಧ್ಯಕ್ಷ ಹಾಗೂ ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ಉಪಾಧ್ಯಕ್ಷ ಶೀತಲ್ ಪ್ರಾಸ್ತಾವಿಕ ನುಡಿಗಳನ್ನಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ , ಜಾನಪದ ತಜ್ಞ, ಡಾ.ಎಸ್. ಪಿ.ಪದ್ಮಪ್ರಸಾದ್ ಜೈನ, ತೋವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿಜಮ್ಮ, ತೋವಿನಕೆರೆ ಜೈನ ಸಮಾಜದ ವಿಜಯ್ ಕುಮಾರ್, ವಿಮಲ್ ರಾಜ್, ಚಂದ್ರಪ್ರಭ, ಸುರೇಂದ್ರ ಜೈನ್, ಕುರಂ ಕೋಟೆ ಟಿ.ಎಸ್.ಪ್ರಕಾಶ್ ಜೈನ್, ಉದ್ಯಮಿ ಗಳಾದ ಜಿ.ಪಿ.ಉಮೇಶ್ ಕುಮಾರ್, ಸನ್ಮತಿ ಕುಮಾರ್, ಸೆಕ್ಯೂರಿಟಿ ಸರ್ವಿಸ್ ಶೀತಲ್, ಎ.ಎನ್ ರಾಜೇಂದ್ರ ಪ್ರಸಾದ್ ,ಚಂದ್ರಕೀರ್ತಿ , ಧರಣಿಂದ್ರೆಯ್ಯ, ಸುಗಂಧರಾಜ, ಬೆಳಗುಲಿ ವಿಜಯ್ ಕುಮಾರ್ ,ಅರಸಪುರ ಸಂತೋಷ್, ಡಾ.ನಾಗೇಂದ್ರ ಕುಮಾರ್, ಸೇರಿದಂತೆ ತೋವಿನಕೆರೆ ಜೈನ ಸಮಾಜದ ಮುಖಂಡರುಗಳು, ಮಹಿಳಾ ಜೈನ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಜೈನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶ್ರಾವಕ –ಶ್ರಾವಕಿಯರು ಭಾಗವಹಿಸಿದ್ದರು
ಪುರೋಹಿತರಾದ ಪದ್ಮರಾಜ್, ಕಿರಣ್ ಪಂಡಿತ್ ಹಾಗೂ ಮಹಾವೀರ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಬೆಳಗ್ಗೆ ವಾಸ್ತು ಹೋಮ, ಚಂದ್ರನಾಥ ಸ್ವಾಮಿಗೆ ನಿತ್ಯ ಅಭಿಷೇಕ ,ನವಗ್ರಹ ಆರಾಧನೆಗಳು ನಡೆದವು. ಇದೇ ಸಂದರ್ಭದಲ್ಲಿ ಧರ್ಮ ಕಾರ್ಯಗಳಿಗೆ ಸಹಕರಿಸಿದ ,ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಕು. ಗ್ರೀಷ್ಮಾ ಸಂಗಡಿಗರು ಮಂಗಳಚರಣೆ ನೆರವೇರಿಸಿದರು. ಕುಮುದ ನಾಗಭೂಷಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q