ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿಯ ಎಂ.ಎನ್.ಕೋಟೆ ಗ್ರಾಮದಲ್ಲಿ ಎಂ.ಎನ್.ಕೋಟೆ ವಲಯದ ಪದಾಧಿಕಾರಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸಮಾಜಕ್ಕೆ ದೊರೆಯುವ ಸೌಲಭ್ಯಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಎಂ.ಎನ್.ಕೋಟೆ ಗ್ರಾಮದ ಉದ್ಯಮಿ ಬಿ.ಎನ್.ಮಾರುತಿ ದೀಪ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದಿಂದ ಪಡೆದುಕೊಂಡ ಪ್ರಗತಿನಿಧಿಯನ್ನು ಉತ್ಪಾದನೆ ಬರುವ ಉದ್ದೇಶಗಳಿಗೆ ಉಪಯೋಗಿಸಿ , ತಾನು ಸ್ವ-ಉದ್ಯೋಗಿ ಯಾಗುವ ಮೂಲಕ ಮತ್ತೊಬ್ಬರಿಗೆ ಕಾಯಕ ಕಲ್ಲಿಸುವ ನಿಟ್ಟಿನಲ್ಲಿ ಸ್ವಾವಲಂಬಿ ಜೀವನ ನಡೆಸಬೇಕು. ಆಗ ಮಾತ್ರ ಶ್ರೀ ಕ್ಷೇತ್ರದಿಂದ ಪಡೆದ ಪ್ರಗತಿ ನಿಧಿಗೆ ಒಂದು ಅರ್ಥ ಬಂದಂತೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಎನ್.ಕೋಟೆ ಗ್ರಾಮದ ಪ್ರಗತಿ ಕೃಷ್ಣ ಬ್ಯಾಂಕ್ ನ ಚಂದನ್, ತುಮಕೂರು ಜಿಲ್ಲಾ ರಿಕವರಿ ಯೋಜನಾಧಿಕಾರಿ ಪುರಂದರ್ ಗುಬ್ಬಿ ತಾಲೂಕಿನ ಯೋಜನಾಧಿಕಾರಿಗಳಾದ ಹರೀಶ್ ಆರ್.ಎಸ್.
ಜನಜಾಗೃತಿ ವೇದಿಕೆಯ ಸದಸ್ಯರಾದ ರಂಗಸ್ವಾಮಿ, ಒಕ್ಕೂಟದ ಅಧ್ಯಕ್ಷರಾದ ಮಹಾದೇವಯ್ಯ, ಚಿದಾನಂದಮೂರ್ತಿ,
ಗಂಗಾಧರಯ್ಯ, ಜಯಶಂಕರ್, ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ, ನವಜೀವನ ಸಮಿತಿಯ ಅಧ್ಯಕ್ಷರಾದ ತ್ಯಾಗರಾಜ್,
ವಲಯದ ಮೇಲ್ವಿಚಾರಕ ವಿಶ್ವನಾಥ ಪೂಜಾರಿ ಹಾಗೂ ವಲಯದಸೇವಾಪ್ರತಿನಿಧಿಗಳಾದ ಶಿವರತ್ನಮ್ಮ, ಶಿವರಾಜ್. ನೇತ್ರಾವತಿ, ಮಧು.ಸುಮ ಲೋಕಮ್ಮ ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy