ಅರಸಿಕೆರೆ: ತಾಲ್ಲೂಕಿನ ಮಾವಿನಕೆರೆ ಗ್ರಾಮದ ಶ್ರೀ ಹುಚ್ಚಮ್ಮದೇವಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ 50ಸಾವಿರ ಮೊತ್ತದ ಡಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪಟೂರು ತಾಲ್ಲೂಕಿನ ಯೋಜನಾಧಿಕಾರಿಗಳಾದ ಕೆ.ಉದಯ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಧಾರ್ಮಿಕ ಮುಜರಾಯಿ ಇಲಾಖೆ ಸದಸ್ಯರಾದ ಶ್ರೀಧರ್, ಧರ್ಮಸ್ಥಳ ಕ್ಷೇತ್ರದಿಂದ ರಾಜ್ಯದ ಜನತೆಗೆ ಧಾರ್ಮಿಕ ಕೇಂದ್ರಗಳ ಜೀರ್ಣೋದ್ದಾರಕ್ಕೆ ಸ್ವಾಮಿಯ ಪ್ರಸಾದದ ರೂಪದಲ್ಲಿ ಕೋಟ್ಯಾಂತರ ರೂ.ಗಳ ಹಣ ಸಹಾಯ ದೊರೆತಿದ್ದು, ಈ ಒಂದು ಉಡುಗೊರೆ ನಮ್ಮ ಗ್ರಾಮದ ಶ್ರೀ ಹುಚ್ಚಮ್ಮದೇವಿ ದೇವಸ್ಥಾನದ ಜೀರ್ಣೋದ್ದಾಕ್ಕೆ ದೊರೆತಿರುವುದು ಅತೀವ ಸಂತೋಷವುಂಟಾಗಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಯೋಜನಾಧಿಕಾರಿ ಉದಯ್ ಕೆ., ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿಕ್ಷಣ ವಿಭಾಗ, ಮಹಿಳಾ ಸಬಲೀಕರಣ, ಕೃಷಿ ಚಟುವಟಿಕೆಗಳು, ರಾಜ್ಯದ ಜನತೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪ್ರಗತಿನಿಧಿ ಸೌಲಭ್ಯ, ಕೆರೆ ನಿರ್ಮಾಣ, ಶುದ್ದ ಕುಡಿಯುವ ನೀರಿನ ಘಟಕ, ಜನಜಾಗೃತಿ ಕಾರ್ಯಕ್ರಮ, ವಾತ್ಸಲ್ಯ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇಷ್ಟಲ್ಲದೇ ನಮ್ಮ ರಾಜ್ಯದ ಧಾರ್ಮಿಕ ಕ್ಷೇತ್ರಗಳ ಉಳಿವಿಗಾಗಿ ದೇವಸ್ಥಾನದ ಜೀರ್ಣೋದ್ದಾರಗಳಿಗೆ ಸಹಾಯಧನವನ್ನು ಒದಗಿಸುವ ಅತ್ಯಂತ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಮಂಜುನಾಥಸ್ವಾಮಿ ಹಾಗೂ ವೀರೇಂದ್ರ ಹೆಗ್ಗಡೆಯವರಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ ಬಳಿಕ ಕ್ಷೇತ್ರದ ವತಿಯಿಂದ ಮಂಜೂರಾದ ರೂ. 50 ಸಾವಿರ ಮೊತ್ತದ ಡಿಡಿಯನ್ನು ಗ್ರಾಮಸ್ಥರಿಗೆ ವಿತರಿಸಿದರು.
ಈ ಸಂದರ್ಭ ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ನಾಗಾರಾಜ್, ಉಪಾಧ್ಯಕ್ಷ ಜವರಪ್ಪ, ಕಾರ್ಯದರ್ಶಿ ಟಿ.ಸಿ. ರಮೇಶ್, ಖಜಾಂಚಿ ಕೇಶವಮೂರ್ತಿ, ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ರಂಗಾಪುರ ವಲಯ ಮೇಲ್ವಿಚಾರಕ ದಿನೇಶ್, ಸೇವಾಪ್ರತಿನಿಧಿ ಮಹಾಲಕ್ಷ್ಮಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW