ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ತಾಲೂಕಿನ ರಂಗಾಪುರ ವಲಯದ ಹುಲ್ಲೇಕೆರೆ ಗ್ರಾಮದ ಮಾಶಾಸನ ಸದಸ್ಯರಾದ ಸಣ್ಣಮ್ಮರವರಿಗೆ ವಾತ್ಸಲ್ಯ ಕಾರ್ಯಕ್ರಮದಲ್ಲಿ ವಾತ್ಸಲ್ಯ ಮನೆ ರಚನೆ ಮಾಡಿದ್ದು, ಈ ದಿನ ತುಮಕೂರು ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಅವರು ಮನೆ ಹಸ್ತಾಂತರ ಮಾಡಿದರು.
ಬಳಿಕ ಮಾತನಾಡಿ ಅವರು, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 800 ವರ್ಷದ ಇತಿಹಾಸವಿದೆ, ಶ್ರೀ ಕ್ಷೇತ್ರದಲ್ಲಿ ಚತುರ್ಧಾನದಲ್ಲಿ ಅನ್ನದಾನ, ವಿದ್ಯಾದಾನ, ಔಷಧ ದಾನ, ಅಭಯದಾನ ನಡೆಯುತ್ತಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತೃಶ್ರೀ ಹೇಮಾವತಿ ಅಮ್ಮನವರ ಕಲ್ಪನೆಯಲ್ಲಿ ಮೂಡಿ ಬಂದಿರುವ ವಾತ್ಸಲ್ಯ ಕಾರ್ಯಕ್ರಮದಲ್ಲಿ ತಿಪಟೂರು ತಾಲೂಕಿನಲ್ಲಿ ಒಟ್ಟು 9 ವಾತ್ಸಲ್ಯ ಮನೆ ರಚನೆ ಆಗಿದೆ ಎಂದರು.
ಇದರ ಜೊತೆಗೆ ಮಾಶಾಸನ ಫಲಾನುಭವಿರವರಿಗೆ ವಾತ್ಸಲ್ಯ ಕಿಟ್ ಅಂದರೆ ಬಟ್ಟೆ ಚಾಪೆ, ದಿಂಬು, ಹೊದಿಕೆ, ಪಾತ್ರೆ ನೀಡಲಾಗುತ್ತಿದೆ. ಹಾಗೆ ವಾತ್ಸಲ್ಯ ಮಿಕ್ಸ್ ವಿತರಣೆ ಮಾಡಲಾಗುತ್ತದೆ, ಹಾಗೆ ಪ್ರತಿ ತಿಂಗಳು 1000 ದಿಂದ 3000/-ದಂತೆ ಮಾಶಾಸನ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಹರೀಶ್ ಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಿದ್ಯಾರ್ಥಿಗಳಿಂದ ವಯಸ್ಸಾದ ಹಿರಿಯರವರೆಗೆ ವಿಶೇಷವಾಗಿ ಅರ್ಥಪೂರ್ಣ ಕೆಲಸ ಮಾಡುತ್ತಿದ್ದಾರೆ ಎಂದರು.
ಗ್ರಾಮ ಪಂಚಾಯತ್ ಸದಸ್ಯರು ಹರೀಶ್ ರವರು ನಮ್ಮ ಊರಲ್ಲಿ ಸಣ್ಣಮ್ಮ ರವರಿಗೆ ವಾತ್ಸಲ್ಯ ಮನೆ ಮಾಡಿರುವುದು ತುಂಬಾ ಸಂತೋಷ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವ ಉದಯ್ ಕೆ. ಪ್ರಾದೇಶಿಕ ವ್ಯಾಪ್ತಿಯ ಜ್ಞಾನ ವಿಕಾಸ ಯೋಜನಾಧಿಕಾರಿಯವರಾದ ಸಂಗೀತ, ಊರಿನ ಹಿರಿಯರು ಪುಟ್ಟಸ್ವಾಮಿ, ಗುಡಿಗೌಡರು ದುಷ್ಯಂತ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಎಮ್.ಡಿ., ಮೇಲ್ವಿಚಾರಕರು, ವಿನೋದ್ ಸೇವಾಪ್ರತಿನಿಧಿ ಕಮಲ ಹಾಗೂ ವಲಯದ ಸೇವಾಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC