ಕಲಾವಿದರ ಸಂಘದ ಕಟ್ಟಡದಲ್ಲಿ ಹಲವು ಬಗೆಯ ಪೂಜೆ ಮಾಡಲಾಗಿದೆ. ಇದರಲ್ಲಿ ಅನೇಕ ಕಲಾವಿದರು ಭಾಗಿ ಆಗಿದ್ದಾರೆ. ನಟ ಜಗ್ಗೇಶ್ ಕೂಡ ಆಗಮಿಸಿ ಈ ಪೂಜೆಯ ಬಗ್ಗೆ ಮಾತನಾಡಿದ್ದಾರೆ. ಇಂದು (ಆ.14) ನಡೆದ ಪೂಜೆ ದರ್ಶನ್ ಸಲುವಾಗಿ ಮಾಡಿದ್ದು ಎಂಬ ಗುಮಾನಿ ಕೂಡ ಇದೆ. ಆ ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಜಗ್ಗೇಶ್ ಅವರು ನೇರವಾಗಿ ಉತ್ತರ ನೀಡಿದ್ದಾರೆ.

‘ನನಗೆ ಕೂಡ ಆರಂಭದಲ್ಲಿ ಅದೇ ರೀತಿಯ ಮಾಹಿತಿ ಬಂತು. ದರ್ಶನ್ಗಾಗಿ ಪೂಜೆ ಆಗಿದ್ದರೆ ನಾನು ಕೂಡ ಬರುತ್ತಿರಲಿಲ್ಲ. ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ ಇದು ಅದಲ್ಲ. ಕಲಾವಿದರ ಒಳಿತಿಗಾಗಿ ಈ ಪೂಜೆ ನಡೆದಿದೆ. ಕೆಲವರಿಗೆ ಮಾಹಿತಿ ಕೊರತೆ ಆಗಿರಬಹುದು. ಹಾಗಾಗಿ ಅಪಾರ್ಥ ಮಾಡಿಕೊಂಡಿದ್ದಾರೆ. ಅನೇಕರು ಬೇರೆ ವಲಯಗಳಿಂದ ನನಗೆ ಫೋನ್ ಮಾಡಿ ಕೇಳಿದರು. ನನಗೂ ಅನುಮಾನ ಬಂತು. ವಿಚಾರಿಸಿದಾಗ ಆ ಥರ ಅಲ್ಲ ಎಂಬುದು ಗೊತ್ತಾದಮೇಲೆ ನಾನು ಕೂಡ ಬಂದೆ’ ಎಂದು ಜಗ್ಗೇಶ್ ಹೇಳಿದ್ದಾರೆ.
‘ನಾಗದೇವರು ಸಲಹೆ ನೀಡಿದೆ. ತಂದೆ-ತಾಯಿ ಮುಂದಿನ ಪೀಳಿಗೆಗೆ ಬುದ್ಧಿ ಹೇಳುವ ರೀತಿ ಒಗ್ಗಟ್ಟಾಗಿ ಹೋಗಿ ಎಂದಿದೆ. ನಾನು ಆಧ್ಯಾತ್ಮಿಕವಾಗಿ ಇರುವವನು. ಹಾಗಾಗಿ ನಿರ್ಮಾಪಕರ ಸಂಘಕ್ಕೆ ಸಲಹೆ ನೀಡಿದ್ದೆ. ಕೆಲವರಿಗೆ ದೇವರು ಅಂದ್ರೆ ಆಗಲ್ಲ. ಅಂಥವರಿಗೆ ನಾವು ಏನೂ ಮಾಡೋಕೆ ಆಗಲ್ಲ. ದೇವರನ್ನು ನಂಬುವವರ ಮತ್ತು ನಂಬದವರ ಬೆಳವಣಿಗೆ ಹೇಗಿದೆ ಅಂತ ನೀವೇ ನೋಡಿ’ ಎಂದಿದ್ದಾರೆ ಜಗ್ಗೇಶ್.
‘ನಾನು ಮತ್ತು ರಾಕ್ಲೈನ್ ಅವರು ದೂರವಾಣಿಯಲ್ಲಿ ಮಾತನಾಡುವ ಈ ಪೂಜೆಯ ವಿಚಾರ ಬಂತು. ಮುಂದಿನ ಪೀಳಿಗೆ ಸಲುವಾಗಿ ನಾವು ಬಿಟ್ಟುಕೊಡಬೇಕು. ಇದಕ್ಕೆ ಚಾಲನೆ ಸಿಕ್ಕಿದೆ. ಕಲಾವಿದರಿಗೆ ಇದು ಮಾತೃಸಂಸ್ಥೆ ಆಗಬೇಕು. ಬೇರೆ ರಾಜ್ಯಗಳಲ್ಲಿ ಇದೆ. ಎಲ್ಲ ಕಲಾವಿದರ ಸದಸ್ಯತ್ವ ನೋಂದಣಿ ಮಾಡಿಸುವ ಕೆಲಸ ಆಗಬೇಕು. ಆಗ ಹಬ್ಬದ ವಾತಾವರಣ ಸೃಷ್ಟಿ ಆಗಲಿ’ ಎಂದು ಜಗ್ಗೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


