ಬೆಂಗಳೂರು: ಮುಡಾ ಪ್ರಕರಣದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆಗೆ ಮುಂದಾಗಿದೆ. ಆದರೆ, ಇದೀಗ ಪಾದಯಾತ್ರೆಗೂ ಮುನ್ನವೇ ಬಿಜೆಪಿ—ಜೆಡಿಎಸ್ ನಡುವೆ ಹೊಂದಾಣಿಕೆ ಸಮಸ್ಯೆ ಕಾಣಿಸಿಕೊಂಡಿದ್ದು, ಅಪಸ್ವರ ಎದ್ದಿದೆ.
ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಕಮಿಟಿ ಅಧ್ಯಕ್ಷ ಶಾಸಕ ಜಿ.ಟಿ.ದೇವೇಗೌಡ ಈ ಧರಣಿ ಯಾತ್ರೆಯನ್ನು ಮುಂದೂಡುವಂತೆ ಬಿಜೆಪಿಗೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಮಳೆ, ಪ್ರವಾಹ ಉಂಟಾಗಿದೆ. ಇದಲ್ಲದೇ ಮುಖ್ಯವಾಗಿ ನಮ್ಮ ನಾಯಕರಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಬಜೆಟ್ ಅಧಿವೇಶನದಲ್ಲಿ ಇದ್ದಾರೆ. ಅವರು ಇಲ್ಲದ ನಾಯತ್ವದಲ್ಲಿ ನಾವು ಹೋರಾಟ ಮಾಡಲ್ಲ ಅಂತ ಅವರು ಹೇಳಿದ್ದಾರೆ.
ರಾಜಕೀಯ ಲೆಕ್ಕಾಚಾರ?
ಬೆಂಗಳೂರು–ಮೈಸೂರುವರೆಗೆ ಬಿಜೆಪಿಯೊಂದಿಗೆ ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗಿಯಾದರೆ, ಈ ಭಾಗದಲ್ಲಿ ಬಲಿಷ್ಠವಿರುವ ಜೆಡಿಎಸ್ ಗೆ, ಇಲ್ಲಿ ಬಿಜೆಪಿಯೇ ಹೋರಾಟ ಲೀಡ್ ಮಾಡಿದಂತಾಗುತ್ತದೆ ಎನ್ನುವುದು ಜೆಡಿಎಸ್ ನಾಯಕರ ಆತಂಕ ಅಂತ ಹೇಳಲಾಗುತ್ತಿದ್ದು, ಹೀಗಾಗಿ ಪಾದಯಾತ್ರೆಯನ್ನು ಮೊಟಕುಗೊಳಿಸಲು ಜೆಡಿಎಸ್ ನಾಯಕರು ಮುಂದಾದರೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


