ಬೆಂಗಳೂರು: ಪ್ರತಿಷ್ಠಿತ ಮಾಲ್ ವೊಂದರ ಸಿದ್ಧ ಉಡುಪು ಮಾರಾಟ ಮಳಿಗೆಯಲ್ಲಿ ಬಿಲ್ ಮಾಡುವ ವಿಚಾರವಾಗಿ ಆ ಮಳಿಗೆಯ ಇಬ್ಬರು ಕ್ಯಾಶಿಯರ್ ಗಳ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಯಲಹಂಕದ ಆರ್ ಎಂಝಡ್ ಗ್ಯಾಲೇರಿಯಾ ಮಾಲ್ ನ 1ನೇ ಮಹಡಿಯಲ್ಲಿರುವ ಲೈಫ್ ಸ್ಟೈಲ್ ಶೋ ರೂಂ ಕ್ಯಾಶಿಯರ್ ಕುರುವ ಮಲ್ಲಿಕಾರ್ಜುನ್ (24) ಹತ್ಯೆಯಾಗೀಡಾದ ಯುವಕ. ಪ್ರಕರಣ ಸಂಬಂಧ ಮೃತನ ಸಹೋದ್ಯೋಗಿ ರಾಜರಥನ್ ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.


