ಬೆಂಗಳೂರು: ರಾಚೇನಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾಗಿದೆ. ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಸತ್ತ ಮೀನುಗಳ ವಾಸನೆಯಿಂದಾಗಿ ವಾಯುವಿಹಾರಿಗಳು ಬೆಳಗ್ಗೆ-ಸಂಜೆ ವಾಕ್ ಮಾಡಲು ಈ ಕೆರೆಗೆ ಬರುತ್ತಿಲ್ಲ. ರಣಹದ್ದುಗಳು ಮತ್ತು ನಾಯಿಗಳು ಸತ್ತ ಮೀನುಗಳನ್ನು ತಿನ್ನಲು ಬರುತ್ತಿವೆ.
ಸತ್ತ ಮೀನುಗಳನ್ನು ಅರ್ಧಂಬರ್ಧ ತಿಂದು ಕೆರೆ ಅಕ್ಕಪಕ್ಕದ ಮನೆಗಳ ಬಳಿ ಬಿಟ್ಟು ಹೋಗುತ್ತಿವೆಯಂತೆ. ಅಕ್ಕಪಕ್ಕದ ಮನೆಗಳಿಂದ ನೇರವಾಗಿ ನೀರನ್ನು ಬಿಡಲಾಗ್ತಿದೆ. ಇದರಿಂದ ಕೆರೆಯಲ್ಲಿರುವ ಮೀನುಗಳು ಸಾವನ್ನಪ್ಪುತ್ತಿವೆ ಎಂದು ಕೆಲವರು ತಿಳಿಸಿದ್ದಾರೆ.
ಇದರಿಂದ ವಾಸನೆ ತಾಳಲಾಗದೆ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಥಣಿಸಂದ್ರ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ರಾಚೇನಹಳ್ಳಿ ಕೆರೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿರುವ 148 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಯಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಪ್ರತಿನಿತ್ಯ ವಾಕ್ ಮಾಡಲು ಬರ್ತಿವಿ. ಆದರೆ ಸತ್ತಿರುವ ಮೀನುಗಳಿಂದ ತುಂಬಾ ಕೆಟ್ಟ ವಾಸನೆ ಬರ್ತಿದೆ. ದಯವಿಟ್ಟು ಬಿಬಿಎಂಪಿ ಅಧಿಕಾರಿಗಳು ಕೆರೆಯನ್ನು ಕ್ಲೀನ್ ಮಾಡಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


