ಸರಗೂರು: ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ವಿವೇಕಾನಂದ ಯೂತ್ ಮೊಮೆಂಟ್ ಶಿಕ್ಷಣ ಸಂಸ್ಥೆ ವತಿಯಿಂದ ಹಾದನೂರು ಗ್ರಾ.ಪಂ. ವ್ಯಾಪ್ತಿಯ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲ್ಯಾಪ್ ಟಾಪ್ ಹಾಗೂ ಪ್ರೊಜೆಕ್ಟರ್ ಸೋಮವಾರ ವಿತರಿಸಲಾಯಿತು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ ಮಾತನಾಡಿ, ಸಮಾಜ ಸೇವೆ ಮತ್ತು ವಿವೇಕಾನಂದ ಯೂತ್ ಮೊಮೆಂಟ್ ಸಂಸ್ಥೆ ಸಮಾಜ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ. ಇಂದು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ,ಶಾಲೆಯ ಫಲಿತಾಂಶ ಇನ್ನಷ್ಟು ಹೆಚ್ಚುಗೊಳ್ಳಲಿ ಎಂಬ ಉದ್ದೇಶದಿಂದ ಲ್ಯಾಪ್ಟಾಪ್ ಹಾಗೂ ಪ್ರೊಜೆಕ್ಟರ್ ವಿತರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ನ ಶಾಲಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ 15 ಲ್ಯಾಪ್ಟಾಪ್ ಗಳು ಮತ್ತು ಪ್ರೊಜೆಕ್ಟರ್ ಅನ್ನು ಪಡೆಯಲಾಯಿತು. ಶಾಲಾ ಶಿಕ್ಷಣ ಕಾರ್ಯಕ್ರಮವು ನಮ್ಮ ಶಾಲೆಯಲ್ಲಿ 2 ವರ್ಷಗಳಿಂದ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ಮತ್ತು ಗಣಿತ ಮತ್ತು ವಿಜ್ಞಾನ ಪ್ರಯೋಗಗಳನ್ನು ಮಕ್ಕಳು ‘ ವಿಧಾನದ ಮೂಲಕ ಕಲಿಯುವುದರಿಂದ ಗುಣಮಟ್ಟದ ಕಲಿಕೆ ಉಂಟಾಗುತ್ತಿದೆ ಎಂದು ತಿಳಿಸಿದರು.
ನೀಡಿರುವ ಟ್ಯಾಬ್ ಅನ್ನು ಶಿಕ್ಷಣಕ್ಕೆ ಮಾತ್ರ ಬಳಸಿ. ಈ ಲ್ಯಾಪ್ಟಾಪ್ ನ ಉಪಯೋಗದಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಯಶಸ್ಸು ನಿಮ್ಮದಾಗಲಿ ಎಂದು ಹೇಳಿದರು.
ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಶಾಲೆಯ ಸಿಬ್ಬಂದಿಗಳು , ಎಸ್ ಡಿಎಂಸಿ ಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರ ಪರವಾಗಿ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶಾಂತಮ್ಮ, ಅತಿಥಿ ಶಿಕ್ಷಕರು ಪ್ರಸನ್ನ ಕುಮಾರ್, ಕೃಷ್ಣಮೂರ್ತಿ, ಗೌರೀಶ್, ಸಿದ್ದರಾಜು, ಹೇಮಾವತಿ, ವಿವೇಕಾನಂದ ಯೂತ್ ಮೊಮೆಂಟ್ ಶಿಕ್ಷಣ ಸಂಸ್ಥೆ ಸಿಬಂದ್ದಿಗಳು ಅಶೋಕ್, ಕಿರಣ್ ಕುಮಾರ್, ಹಾಗೂ ಶಾಲೆಯ ಮಕ್ಕಳು ಸೇರಿದಂತೆ ಹಾಜರಿದ್ದರು.
ವರದಿ: ಚಂದ್ರ ಹಾದನೂರು