ಕೊಡಗಿನ ಬೆಡಗಿ, ಕನ್ನಡ ಚಿತ್ರರಂಗವನ್ನು ಹಲವು ಸಮಯಗಳ ಕಾಲ ಆಳಿದ ನಟಿ, ಕನ್ನಡದ ಟಾಪ್ ನಟಿಯರಲ್ಲಿ ಪ್ರೇಮಾ ಒಬ್ಬರಾಗಿದ್ದರು. 2006 ರಲ್ಲಿ ಪ್ರೇಮಾ ಜೀವನ್ ಅಪ್ಪಾಚು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿರಂಗದಿಂದ ದೂರ ಉಳಿದರು.
ಜೀವನ್ ಅಪ್ಪಾಚು ಜೊತೆ ದಾಂಪತ್ಯದಲ್ಲಿ ಹಲವಾರು ಸಮಸ್ಯೆಗಳು ಎದುರಾಯ್ತು. ಬಳಿಕ ಸಂಬಂಧ ಮುರಿದು ಹೋಯಿತು. ಇದಾದ ನಂತರ ಇವರ ಬಾಂಧವ್ಯ ಅಷ್ಟೊಂದು ಗಟ್ಟಿಯಾಗಿ ಉಳಿಯಲಿಲ್ಲ. ಡಿವೋರ್ಸ್ ಪಡೆದು ಇಬ್ಬರೂ ದೂರವಾದರು. ಸಂದರ್ಶನವೊಂದರಲ್ಲಿ ಎರಡನೇ ಮದುವೆ ಬಗ್ಗೆ ಮಾತನಾಡಿದ್ದ ನಟಿ ಪ್ರೇಮಾ, ಇದು ನನ್ನ ವೈಯಕ್ತಿಕ ನಿರ್ಧಾರ. ಒಳ್ಳೆಯ ಹುಡುಗ ಸಿಕ್ಕರೆ ಖಂಡಿತ ಎರಡನೇ ಮದುವೆ ಆಗುತ್ತೇನೆ ಎಂದು ಹೇಳಿದ್ದರು.
ಕೆಲ ವರ್ಷಗಳ ಹಿಂದೆ ನಟಿ ಪ್ರೇಮಾ ಅವರು ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದರು. ಈ ವೇಳೆ ಅವರಿಗೆ ಕ್ಯಾನ್ಸರ್ ಆಗಿದೆ ಎಂಬ ಗುಸುಗುಸು ಕೇಳಿಬಂದಿತ್ತು. ನಾನು ಡಿಪ್ರೆಷನ್ ಗೆ ಹೋಗಿದ್ದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿ ಇದ್ದೆ. ನಾನು ಕ್ಯಾನ್ಸರ್ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದೇನೆ ಎಂಬ ವದಂತಿ ಹಬ್ಬಿತ್ತು. ಕ್ಯಾನ್ಸರ್ ಎಲ್ಲಾ ಏನಿಲ್ಲ ಅದು ಸುಳ್ಳು ಎಂದು ನಟಿ ಪ್ರೇಮಾ ತಿಳಿಸಿದ್ದರು. ನಮ್ಮೂರ ಮಂದಾರ ಹೂವೆ, ತುತ್ತಾ ಮುತ್ತಾ, ಯಜಮಾನ, ಆಪ್ತಮಿತ್ರ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿ ಪ್ರೇಮಾ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳಿನಲ್ಲಿಯೂ ನಟಿಸಿದ ಹೆಗ್ಗಳಿಕೆ ಇವರದ್ದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


