ಬೆಳಗಾವಿ: ಎಂಇಎಸ್ ಪುಂಡಾಟದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಬಿಜೆಪಿ ನಾಯರು ಆರೋಪಿಸುತ್ತಿದ್ದು, ಇದೀಗ ಈ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿ, ಮರಾಠಿಗರ ಮನವೊಲಿಕೆಗೆ ಡಿಕೆಶಿ ಆಟ ಆಡಿದರೂ ಆಡಿರಬಹುದು ಎಂದಿದ್ದಾರೆ.
ಬೆಳಗಾವಿಯ ಆನಗೋಳದಲ್ಲಿ ಮಾತನಾಡಿದ ಈಶ್ವರಪ್ಪ, ಎಂಇಎಸ್ ಬಗ್ಗೆ ಡಿ.ಕೆ.ಶಿವಕುಮಾರ್ ಮೃದು ಧೋರಣೆ ತಳೆದಿರುವುದು ನೋಡಿದರೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಜನರ ಮನವೊಲಿಕೆಗಾಗಿ ಎಂಇಎಸ್ ಬೆಂಬಲಕ್ಕೆ ಆಟ ಆಡಿದರೂ ಆಡಿರಬಹುದು. ಅದಕ್ಕೆ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ ಎಂದರು
ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎಂಇಎಸ್ ಬ್ಯಾನ್ ಗೆ ಒತ್ತಾಯ ಮಾಡುತ್ತಾರೆ. ಹೊರಗಡೆ ಡಿ.ಕೆ. ಶಿವಕುಮಾರ್ ಎಂಇಎಸ್ ಪರ ಬ್ಯಾಟ್ ಬೀಸುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಎಂಇಎಸ್ ಪುಂಡಾಟದ ಹಿಂದೆ ಯಾವ ರಾಜಕೀಯ ಶಕ್ತಿ ಅಡಗಿದೆ ಎಂಬುದು ತನಿಖೆಯಿಂದ ತಿಳಿಯಬೇಕು. ಈ ನಿಟ್ಟಿನಲ್ಲಿ ತನಿಖೆ ಮಾಡುತ್ತೇವೆ ಎಂದರು.