ಥೈರಾಯ್ಡ್ ಗ್ರಂಥಿಯು ಕುತ್ತಿಗೆಯ ಮುಂಭಾಗದಲ್ಲಿ ಇರುವ ಒಂದು ಸಣ್ಣ ಅಂಗವಾಗಿದೆ. ನಿಮ್ಮ ದೇಹವು ಹೆಚ್ಚು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದರೆ ನೀವು ಹೈಪರ್ ಥೈರಾಯ್ಡಿಸಮ್ ಎಂಬ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ದೇಹವು ಥೈರಾಯ್ಡ್ ಹಾರ್ಮೋನ್ ಅನ್ನು ಕಡಿಮೆ ಮಾಡಿದರೆ, ಅದನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. ಈ ಎರಡೂ ಸಮಸ್ಯೆಗಳು ಗಂಭೀರವಾಗಿರುತ್ತವೆ.
ನಿಮ್ಮ ಥೈರಾಯ್ಡ್ ಸರಿಯಾಗಿ ಕೆಲಸ ಮಾಡದಿದ್ದರೆ ಅದು ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರಬಹುದು. ನಿಮಗೆ ಥೈರಾಯ್ಡ್ ಸಮಸ್ಯೆಯಿದ್ದರೆ ಈ 5 ಆಹಾರಗಳನ್ನು ಸೇವಿಸಬೇಡಿ.
ಶೇಂಗಾ: ಶೇಂಗಾ ಬೀಜಗಳನ್ನು ತಿನ್ನುವುದರಿಂದ ಅವುಗಳಲ್ಲಿನ ಗೋಯಿಟ್ರೋಜೆನ್ಗಳ ಉಪಸ್ಥಿತಿಯಿಂದಾಗಿ ಹೈಪೋಥೈರಾಯ್ಡಿಸಮ್ ಅನ್ನು ಹದಗೆಡಿಸಬಹುದು. ಆದ್ದರಿಂದ ಹೈಪೋಥೈರಾಯ್ಡ್ ಹೊಂದಿರುವ ಜನರು ಕಡಲೆಕಾಯಿ ಅಥವಾ ಪೀನಟ್ ಬಟರ್ ಸೇವನೆಯನ್ನು ನಿಲ್ಲಿಸಬೇಕು.
ರಾಗಿ: ರಾಗಿ ಆರೋಗ್ಯಕರವಾದ ಆಹಾರವೆಂಬುದರಲ್ಲಿ ಅನುಮಾನವಿಲ್ಲ. ಆದರೆ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ನಾರಿನಂಶದಿಂದ ಸಮೃದ್ಧವಾಗಿರುವ ರಾಗಿ ಗಾಯಿಟ್ರೊಜೆನಿಕ್ ಆಹಾರವಾಗಿದೆ. ಇದನ್ನು ಚೆನ್ನಾಗಿ ನೆನೆಸಿ ಮತ್ತು ಬೇಯಿಸಿದ ನಂತರ ಆಗಾಗ ಅಪರೂಪಕ್ಕೆ ಮಾತ್ರ ಇದನ್ನು ತಿನ್ನಬೇಕು.
ಬಾದಾಮಿ: ಬಾದಾಮಿಯು ಗಾಯಿಟ್ರೊಜೆನಿಕ್ ಹೊಂದಿರುವ ಆಹಾರವಾದ್ದರಿಂದ, ಇದನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಥೈರಾಯ್ಡ್ ಅನ್ನು ವಿಸ್ತರಿಸಬಹುದು, ಇದು ಅಯೋಡಿನ್ ಅನ್ನು ಹೀರಿಕೊಳ್ಳುವ ಥೈರಾಯ್ಡ್ ಗ್ರಂಥಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಹೈಪೋಥೈರಾಯ್ಡ್ ಹೊಂದಿರುವ ಜನರು ಪ್ರತಿದಿನ 3-5 ಬಾದಾಮಿಗಳನ್ನು ತಿನ್ನಬಹುದು. ಆದರೆ ಅದಕ್ಕಿಂತ ಹೆಚ್ಚಿಗೆ ತಿನ್ನಬಾರದು.
ಸೋಯಾ ಆಹಾರಗಳು: ಸೋಯಾ ಭರಿತ ಆಹಾರಗಳು ಥೈರಾಯ್ಡ್ ಔಷಧಿಗಳನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಸೋಯಾ-ಆಧಾರಿತ ಆಹಾರ ಉತ್ಪನ್ನಗಳಲ್ಲಿಯೂ ಸಹ ಗೈಟ್ರೋಜೆನ್ಗಳು ಪತ್ತೆಯಾಗಿವೆ. ಇದು ಥೈರಾಯ್ಡ್ ಗ್ರಂಥಿಯ ಕಿರಿಕಿರಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಸೋಯಾ ಉತ್ಪನ್ನಗಳನ್ನು ಅವಾಯ್ಡ್ ಮಾಡಬೇಕು.
ಗ್ಲುಟನ್: ಗೋಧಿಯು ಗ್ಲುಟನ್ ಅನ್ನು ಹೊಂದಿರುತ್ತದೆ ಮತ್ತು ಇದು ಸಂಭಾವ್ಯ ಗಾಯಿಟ್ರೋಜೆನಿಕ್ ಆಹಾರವಾಗಿದೆ. ಆಟೋಇಮ್ಯೂನ್ ಹೈಪೋಥೈರಾಯ್ಡಿಸಂ ಸಂದರ್ಭದಲ್ಲಿ ಗೋಧಿಯ ಸೇವನೆಯನ್ನು ಕಡಿಮೆ ಮಾಡಲು ಸೂಚಿಸಲಾಗುತ್ತದೆ. ಗ್ಲುಟನ್ ಮುಕ್ತ ಆಹಾರವನ್ನು ಸೇವಿಸುವ ಜನರು ಥೈರಾಯ್ಡ್ ಗ್ರಂಥಿಯ ಮೇಲೆ ದಾಳಿ ಮಾಡುವ ರಕ್ತದಲ್ಲಿನ ಪ್ರತಿಕಾಯಗಳ ಕಡಿಮೆ ಸಾಂದ್ರತೆಯನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ.
ಥೈರಾಯ್ಡ್ಗೆ ಉತ್ತಮ ಆಹಾರಗಳು: ಥೈರಾಯ್ಡ್ ಸಮಸ್ಯೆ ಇರುವವರು ಕೊತ್ತಂಬರಿ, ತೆಂಗಿನಕಾಯಿ, ಬ್ರೆಜಿಲ್ ಬೀಜಗಳು, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಮೂಂಗ್ ಬೀನ್ಸ್ ಮತ್ತು ಇತರ ಆಹಾರಗಳನ್ನು ಸೇವಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296