ಕೆಲವರ ಮುಖದಲ್ಲಿ ನೀವು ನೋಡಿರುವಿರಿ ಮೊಡವೆ ಕಲೆಗಳು ಎದ್ದು ಕಾಣುತ್ತಿರುತ್ತವೆ. ಇದು ಮುಖದ ಅಂದವನ್ನೇ ಹಾಳು ಮಾಡುತ್ತದೆ. ಈ ಮೊಡವೆ ಕಲೆಗಳ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಟಿಪ್ಸ್.
ಕಿತ್ತಳೆ ಹಣ್ಣಿನ ಸಿಪ್ಪೆ: ಕಿತ್ತಳೆ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಸಿಟ್ರಿಕ್ ಆಸಿಡ್ ಸಾಕಷ್ಟು ಪ್ರಮಾಣದಲ್ಲಿ ಇರುವ ಈ ಪುಡಿಯ ಪೇಸ್ಟ್ ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿ. ಮೊಡವೆ ಕಲೆಗಳಿರುವ ಜಾಗಕ್ಕೆ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ. ಅದೇ ರೀತಿ ನಿಂಬೆ ಹಣ್ಣಿನಲ್ಲೂ ಸಿಟ್ರಿಕ್ ಆಮ್ಲ ಇರುವುದರಿಂದ ಬೇರೆ ಫೇಸ್ ಪ್ಯಾಕ್ ಗಳ ಜೊತೆ ನಿಂಬೆ ರಸವನ್ನು ಸೇರಿಸಿ ಹಚ್ಚಿಕೊಳ್ಳಿ.
ಅಲೋವೆರಾ: ಕಲೆರಹಿತ ನೈಸರ್ಗಿಕವಾಗಿ ಹೊಳೆಯುವ ಚರ್ಮಕ್ಕಾಗಿ, ಅಲೋವೆರಾ ಪರಿಪೂರ್ಣ ಪರಿಹಾರವಾಗಿದೆ. ಅದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಚರ್ಮದಲ್ಲಿನ, ಮೊಡವೆ ಗುರುತುಗಳು ಮತ್ತು ಸೋಂಕುಗಳಂತಹ ಚರ್ಮದ ತೊಂದರೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿನ ಮೊಡವೆ ಕಲೆಗಳು ಮಾತ್ರವಲ್ಲ ಗಾಯದ ಕಲೆಗಳನ್ನೂ ನಿವಾರಿಸುತ್ತದೆ.
ಆಲೂಗಡ್ಡೆ: ವಿಟಮಿನ್ ಹಾಗೂ ಮಿನರಲ್ಗಳಿಂದ ಸಮೃದ್ಧವಾಗಿರುವ ಆಲೂಗಡ್ಡೆಯು ಮೊಡವೆಗಳು ಹಾಗೂ ಮೊಡವೆ ಕಲೆಗಳನ್ನು ಹೋಗಲಾಡಿಸಲು ಉಪಕಾರಿಯಾಗಿದೆ. ನೀವು ಆಲೂಗಡ್ಡೆಯನ್ನು ಕಟ್ ಮಾಡಿ ಕಲೆಗಳಿರುವ ಜಾಗಕ್ಕೆ ಉಜ್ಜಬಹುದು ಇಲ್ಲವಾದೆ ಆಲೂಗಡ್ಡೆಯ ಜ್ಯೂಸ್ನ್ನು ಹಚ್ಚಬಹುದು.
ಕಡಲೆಹಿಟ್ಟು: ಇದು ಚರ್ಮದ ತೊಂದರೆಗಳಿಗೆ ಸೂಕ್ತವಾಗಿ ಬರುತ್ತದೆ. ಮೊಡವೆಗಳ ಗುರುತುಗಳನ್ನು ತೆಗೆದುಹಾಕಲು ಅಥವಾ ಮುಖದ ಸ್ಕ್ರಬ್ ಆಗಿ ಬಳಸಲೂ ಬಹುದು, ಕಡಲೆ ಹಿಟ್ಟು ಕ್ಷಾರೀಯ ಗುಣಗಳಿಂದ ತುಂಬಿರುತ್ತದೆ ಮತ್ತು ಚರ್ಮದ pH ಸಮತೋಲನವನ್ನು ಕಾಪಾಡಿಕೊಳ್ಳಲು ಇದನ್ನು ಬಹಳ ಹಿಂದಿನಿಂದಲೂ ತ್ವಚೆಯ ಕ್ಲೆನ್ಸರ್ ಆಗಿ ಬಳಸಲಾಗುತ್ತದೆ.
ಅರಶಿನ: ಇದರಲ್ಲಿನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಗಾಯಗಳನ್ನು ಹಾಗೂ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅರಶಿನವು ಬರೀ ಚರ್ಮವನ್ನು ಹೊರಗಿನಿಂದ ಮಾತ್ರವಲ್ಲ ಒಳಗಿನಿಂದಲೂ ಆರೋಗ್ಯವಾಗಿರಿಸುತ್ತದೆ. ಜೊತೆಗೆ ತ್ವಚೆಯನ್ನು ಹೊಳಪಾಗಿಸುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296