ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟಿಡ್ ನಲ್ಲಿ (ಬೆಮೆಲ್) ವಂದೇ ಭಾರತ್ ಸ್ಲೀಪರ್ ರೈಲು ನಿರ್ಮಾಣವಾಗಿದೆ. ಮುಂದಿನ ಮೂರು ತಿಂಗಳ ಒಳಗೆ ಸ್ಲೀಪರ್ ರೈಲು ಸಂಚಾರ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಪ್ರಾಯೋಗಿಕ ಸಂಚಾರ ನಡೆಯಲಿದೆ.
ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಈ ರೈಲು, ಸುಧಾರಿತ ಅಪಘಾತ ಸುರಕ್ಷಾ ವಿನ್ಯಾಸವನ್ನು ಹೊಂದಿದೆ.ಜೊತೆಗೆ ರೈಲ್ವೆ ಬೋಗಿಗಳು ಐಷಾರಾಮಿ, ಸಕಲ ಸೌಲಭ್ಯದ ಸಂಚಾರಿ ಅನುಭವ ನೀಡಲಿವೆ. ವಂದೇ ಭಾರತ್ ಸ್ಲೀಪರ್ ರೈಲು ರಾತ್ರಿ ವೇಳೆ 800-1200 ಕಿ.ಮೀ. ದೂರ ಕ್ರಮಿಸಲು ಅನುಕೂಲವಾಗುಂತೆ ರೂಪಿಸಲಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ದರಕ್ಕೆ ಸರಿಸಮವಾಗಿ ವಂದೇ ಭಾರತ್ ಸ್ಲೀಪರ್ ದರ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ರೈಲಿನಲ್ಲಿ 16 ಬೋಗಿಗಳು ಇರಲಿದೆ. ಅವುಗಳಲ್ಲಿ ಥರ್ಡ್ ಎಸಿಯ 10 ಕೋಚ್ ಗಳು, ಸೆಕೆಂಡ್ ಎಸಿಯ 4 ಹಾಗೂ ಫಸ್ಟ್ ಎಸಿಯ ಒಂದು ಕೋಚ್ ಇರಲಿದೆ. ರೈಲಿನಲ್ಲಿ ಎರಡು ಸೀಟಿಂಗ್ ಕಮ್ ಲಗೇಜ್ ರೇಕ್ (SLR) ಕೋಚ್ ಗಳು ಕೂಡಾ ಇರಲಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


