ಆನ್ಲೈನ್ ಪೇಮೆಂಟ್ (Online Payment) ವಿಧಾನವಂತೂ ಬಂದ ನಂತರ ಕ್ಯೂಆರ್ ಕೋಡ್ (QR Code) ಬಗ್ಗೆ ಹೇಳೋ ಹಾಗೆನೇ ಇಲ್ಲ. ಎಲ್ಲಿ ನೋಡಿದ್ರೂ ಕ್ಯೂಆರ್ ಕೋಡ್ ಗಳೇ ಕಾಣಸಿಗುತ್ತದೆ. ಆದರೆ ಹೆಚ್ಚಿನವರಿಗೆ ಕ್ಯೂಆರ್ ಕೋಡ್ ಅಂದ್ರೆ ಏನು? ಅನ್ನೋದು ಗೊತ್ತಿರುವುದಿಲ್ಲ.
ಕ್ಯೂಆರ್ ಕೋಡ್ (QR Code) ಅಂದ್ರೆ ಕ್ವಿಕ್ ರೆಸ್ಪಾನ್ಸ್ ಕೋಡ್ ಎಂದರ್ಥ. ಇನ್ನು ಈ ಟೆಕ್ನಾಲಜಿಯನ್ನು ಡೆನ್ಸೋ ವೇವ್ ಎಂಬ ಜಪಾನಿ ಕಂಪೆನಿಯೊಂದು ಮೊದಲ ಬಾರಿಗೆ ಪರಿಚಯಿಸಿದೆ. ಮೊದಲ ಬಾರಿಗೆ ಈ ಟೆಕ್ನಾಲಜಿಯನ್ನು ಆಟೋಮೋಟಿವ್ ಕೈಗಾರಿಕೆಯ ಉದ್ದೇಶದಿಂದ ಆವಿಷ್ಕಾರ ಮಾಡಲಾಯಿತು. ಆದರೆ ನಂತರದ ದಿನಗಳಲ್ಲಿ ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆಯಿತು.
ಮೊದಲು ವಾಹನಗಳ ತಯಾರಿಕೆಯ ಟ್ರ್ಯಾಕಿಂಗ್ ಉದ್ದೇಶವಾಗಿ ಅತಿವೇಗವಾಗಿ ಭಾಗಗಳ ಸ್ಕ್ಯಾನಿಂಗ್ ಆಗಲು ಅನುವುಮಾಡಲು ಇದನ್ನು ತಯಾರಿಸಲಾಗಿತ್ತು. ಆದರೆ, ಸ್ಮಾರ್ಟ್‌ಫೋನ್ಗಳ ಬಳಕೆ ಹೆಚ್ಚಾದಂತೆ ಈಗ ಕ್ಯೂಆರ್ ಕೋಡ್ ಗಳು ಸಹ ವ್ಯಾಪಕವಾಗಿ ಬೆಳವಣಿಗೆಯಾಗಿದೆ. ಇದಲ್ಲದೆ ಆನ್ಲೈನ್ ಪೇಮೆಂಟ್ ನಲ್ಲಿ ಈ ಟೆಕ್ನಾಲಜಿ ವಿಶ್ವದ ಮೂಲೆ ಮೂಲೆಯಲ್ಲಿ ತಲುಪಿದೆ.
ಈ ಕ್ಯೂಆರ್ ಕೋಡ್ ಗಳು ಹೆಚ್ಚಾಗಿ ಆನ್ಲೈನ್ ಪೇಮೆಂಟ್ ವಿಷಯದಲ್ಲಿ ಕಂಡುಬರುತ್ತದೆ. ಇನ್ನು ಇದರಲ್ಲಿ ಎನ್ಕೋಡಿಂಗ್ ಮೂಲಕ ಆ್ಯಡ್ ಮಾಡಲಾದ ವಿಷಯಕ್ಕೆ ಸಂಬಂಧಿಸಿದಂತೆ ಈ ಕ್ಯೂಆರ್ ಕೋಡ್ ಕಾರ್ಯನಿರ್ವಹಿಸುತ್ತದೆ. ಇದು ಇತ್ತೀಚಿನ ಕಾಲಮಾನದಲ್ಲಿ ಭಾರೀ ಸಹಕಾರಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


