ತುರುವೇಕೆರೆ: ಯಾರು ಕಷ್ಟದಲ್ಲಿ ಸಹಾಯ ಮಾಡುತ್ತಾರೋ, ಅವರನ್ನು ನೀವು ಸನ್ಮಾನಿಸಿ ಗೌರವಿಸುತ್ತೀರಾ.. ಇದೆ ನಿಜವಾದ ಬಾಂಧವ್ಯ, ನನ್ನ ಬಗ್ಗೆ ಇರುವ ನಿಮ್ಮಗಳ ನಿಜವಾದ ಕಾಳಜಿ, ಎಂದು ಶಾಸಕ ಎಂ.ಪಿ.ಕೃಷ್ಣಪ್ಪ ರವರು ಅಭಿಪ್ರಾಯ ಪಟ್ಟರು.
ಪಟ್ಟಣದ ವಾಣಿಜ್ಯ ಸಂಕೀರ್ಣದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಹಳ ಸಂತೋಷ ಒಂದು ಕಡೆ ಮೂರು ತಿಂಗಳ ಹಿಂದೆ ಮಾಜಿ ಶಾಸಕರಿಗೆ ನೀವು ನಿಂದಿಸುತ್ತಿದ್ದು, ಅದು ನನ್ನ ಗಮನಕ್ಕೆ ಬಂದಿದೆ. ಈಗ ನನಗೆ ಸನ್ಮಾನ ಮಾಡುತ್ತಿದ್ದೀರಾ, ಇದೆ ಪ್ರೀತಿಯ ನಡುವೆ ಇರುವ ವ್ಯತ್ಯಾಸ. ಯಾರು ಕಷ್ಟದಲ್ಲಿ ಸಹಾಯ ಮಾಡುತ್ತಿರೋ ಅವರನ್ನು ನೀವು ನೆನಪಿಸಿಕೊಳ್ಳುತ್ತೀರಾ ಇದೆ ನಿಜವಾದ ಬಾಂಧವ್ಯ.
ಈಗ ತಾನೆ ಒಂದು ಕಾಲೇಜಿನಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದೇ ಅಲ್ಲಿ ಸುಮಾರು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಹಿಂದೆ ನಾನು ಶಾಸಕನಾಗಿದ್ದಾಗ ಆ ಕಾಲೇಜಿಗೆ ನಿವೇಶನವನ್ನು ಮಂಜೂರು ಮಾಡಿಸಿದ್ದೆ. ಆದ್ದರಿಂದ ಇಷ್ಟು ಮಕ್ಕಳು ಕಲಿಯುತ್ತಿರುವುದನ್ನು ನೋಡಿ ನನಗೆ ಸಂತೋಷವಾಯಿತು. ಇನ್ನು ಆ ಕಾಲೇಜಿನಲ್ಲಿ ಹೆಚ್ಚುವರಿಯಾಗಿ ಮೂರು ಕೊಠಡಿಗಳನ್ನು ಉದ್ಘಾಟನೆ ಮಾಡಿದ್ದು ಸಹ ನನಗೆ ಹೆಮ್ಮೆ ಅನಿಸಿದೆ.
ವ್ಯಾಪಾರಿಗಳಾದ ನೀವು ಬಾಡಿಗೆ ಕೊಟ್ಟು ವ್ಯಾಪಾರ ಮಾಡುವ ಸ್ಥಿತಿಯಲ್ಲಿ ನೀವುಗಳು ಇಲ್ಲ. ನೀವು ಸಹ ಯಾವುದೋ ಒತ್ತಡಕ್ಕೆ ಸಿಲುಕಿ ಪಟ್ಟಣಕ್ಕೆ ಬಂದು, ಬೀದಿ ಬದಿ ವ್ಯಾಪಾರ ವನ್ನು ಆಶ್ರಯಿಸಿದ್ದೀರಾ. ನಾನು ಚುನಾವಣಾ ಪೂರ್ವದಲ್ಲಿ ಅಭಯವನ್ನು ನೀಡಿದ್ದೆ. ಅದರಂತೆ ನೀವು ನನ್ನ ಅಧಿಕಾರ ಅವಧಿಯಲ್ಲಿ ನಿರಾತಂಕವಾಗಿ ವ್ಯಾಪಾರ ವಹಿವಾಟು ಮಾಡಿಕೊಳ್ಳಿ. ಯಾರು ಸಹ ನಿಮಗೆ ತೊಂದರೆ ಕೊಡುವುದಿಲ್ಲ. ಹಾಗೊಂದು ವೇಳೆ ಯಾರಾದರೂ ತೊಂದರೆ ಕೊಟ್ಟಿದ್ದೆ ಆದರೆ ನನ್ನ ಗಮನಕ್ಕೆ ತನ್ನಿ. ನಾನು ನಿಮ್ಮಗಳ ಪರವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ, ಈ ವಾಣಿಜ್ಯ ಸಂಕೀರ್ಣದ ಸುತ್ತ ಆರಾಮಾಗಿ ವ್ಯಾಪಾರವನ್ನು ಮಾಡಿಕೊಳ್ಳಿ ನಾನು ನಿಮ್ಮೊಟ್ಟಿಗೆ ಇರುತ್ತೇನೆ ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಆರ್.ರಾಮೇಗೌಡ, ಮಾಜಿ ಸದಸ್ಯ ದಿವಾಕರ್, ಸಿಐಟಿಯು ಸತೀಶ್, ದೇವರಾಜು ಎಸ್., ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜು, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ ಉಪಾಧ್ಯಕ್ಷ ಯಾಸಿನ್ ವಕೀಲರಾದ ಉಮೇಶ್ ಧನಂಜಯ ರೇಣುಕೇಶ್ ಶಾರದಮ್ಮ ಪ್ರೇಮ ಸೇರಿದಂತೆ ಬೀದಿಬದಿ ವ್ಯಾಪಾರಿಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


