nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗರ್ಭ ಧರಿಸಿದ 325 ಬಾಲಕಿಯರು: ತುಮಕೂರಿನಲ್ಲಿ ಹೆಚ್ಚಿದ ಪೋಕ್ಸೋ ಪ್ರಕರಣಗಳು

    December 11, 2025

    ರಾಷ್ಟ್ರೀಯ ಗಣಿತ ದಿನಾಚರಣೆ: ಡಿ.21ರಂದು ಸರ್ವೋದಯ ಕಾಲೇಜಿನಲ್ಲಿ ಗಣಿತ–ವಿಜ್ಞಾನ ಒಲಂಪಿಯಾಡ್

    December 11, 2025

    ಡಿ.13ರಂದು ಜಿಲ್ಲಾ ಬಂಜಾರ ಭವನದ ಕಟ್ಟಡ ಉದ್ಘಾಟನೆ

    December 11, 2025
    Facebook Twitter Instagram
    ಟ್ರೆಂಡಿಂಗ್
    • ಗರ್ಭ ಧರಿಸಿದ 325 ಬಾಲಕಿಯರು: ತುಮಕೂರಿನಲ್ಲಿ ಹೆಚ್ಚಿದ ಪೋಕ್ಸೋ ಪ್ರಕರಣಗಳು
    • ರಾಷ್ಟ್ರೀಯ ಗಣಿತ ದಿನಾಚರಣೆ: ಡಿ.21ರಂದು ಸರ್ವೋದಯ ಕಾಲೇಜಿನಲ್ಲಿ ಗಣಿತ–ವಿಜ್ಞಾನ ಒಲಂಪಿಯಾಡ್
    • ಡಿ.13ರಂದು ಜಿಲ್ಲಾ ಬಂಜಾರ ಭವನದ ಕಟ್ಟಡ ಉದ್ಘಾಟನೆ
    • ಕಿತ್ತೂರು ರಾಣಿಚೆನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ
    • ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಯುವನಿಧಿ ಫಲಾನುಭವಿಗಳಿಂದ ಅರ್ಜಿ ಆಹ್ವಾನ
    • ತುಮಕೂರು | ಡಿಸೆಂಬರ್ 13—14ರಂದು ಕನ್ನಡ ಭಾಷೆ ಮತ್ತು ಸಾಹಿತ್ಯ ಜಾಗೃತಿ ಕಾರ್ಯಾಗಾರ
    • ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಿ: ಎಸಿಪಿ ಪುರುಷೋತ್ತಮ್
    • ಗುಬ್ಬಿ | ಡಿ.12ರಂದು ಅಡಿಕೆ ಬೆಳೆ: ರೈತರಿಗೆ ತರಬೇತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಯಾರು ಕಷ್ಟದಲ್ಲಿ ಸಹಾಯ ಮಾಡುತ್ತಿರೋ ಅವರನ್ನು ನೀವು ನೆನಪಿಸಿಕೊಳ್ಳುತ್ತೀರಾ: ಶಾಸಕ ಎಂ.ಪಿ.ಕೃಷ್ಣಪ್ಪ
    ಜಿಲ್ಲಾ ಸುದ್ದಿ July 27, 2023

    ಯಾರು ಕಷ್ಟದಲ್ಲಿ ಸಹಾಯ ಮಾಡುತ್ತಿರೋ ಅವರನ್ನು ನೀವು ನೆನಪಿಸಿಕೊಳ್ಳುತ್ತೀರಾ: ಶಾಸಕ ಎಂ.ಪಿ.ಕೃಷ್ಣಪ್ಪ

    By adminJuly 27, 2023No Comments2 Mins Read
    m p krishnappa

    ತುರುವೇಕೆರೆ: ಯಾರು ಕಷ್ಟದಲ್ಲಿ ಸಹಾಯ ಮಾಡುತ್ತಾರೋ, ಅವರನ್ನು ನೀವು ಸನ್ಮಾನಿಸಿ ಗೌರವಿಸುತ್ತೀರಾ.. ಇದೆ ನಿಜವಾದ ಬಾಂಧವ್ಯ, ನನ್ನ ಬಗ್ಗೆ ಇರುವ ನಿಮ್ಮಗಳ ನಿಜವಾದ ಕಾಳಜಿ, ಎಂದು ಶಾಸಕ ಎಂ.ಪಿ.ಕೃಷ್ಣಪ್ಪ ರವರು ಅಭಿಪ್ರಾಯ ಪಟ್ಟರು.

    ಪಟ್ಟಣದ ವಾಣಿಜ್ಯ ಸಂಕೀರ್ಣದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಹಳ ಸಂತೋಷ ಒಂದು ಕಡೆ ಮೂರು ತಿಂಗಳ ಹಿಂದೆ ಮಾಜಿ ಶಾಸಕರಿಗೆ ನೀವು ನಿಂದಿಸುತ್ತಿದ್ದು, ಅದು ನನ್ನ ಗಮನಕ್ಕೆ ಬಂದಿದೆ. ಈಗ ನನಗೆ ಸನ್ಮಾನ ಮಾಡುತ್ತಿದ್ದೀರಾ, ಇದೆ ಪ್ರೀತಿಯ ನಡುವೆ ಇರುವ ವ್ಯತ್ಯಾಸ. ಯಾರು ಕಷ್ಟದಲ್ಲಿ ಸಹಾಯ ಮಾಡುತ್ತಿರೋ ಅವರನ್ನು ನೀವು ನೆನಪಿಸಿಕೊಳ್ಳುತ್ತೀರಾ ಇದೆ ನಿಜವಾದ ಬಾಂಧವ್ಯ.


    Provided by
    Provided by

    ಈಗ ತಾನೆ ಒಂದು ಕಾಲೇಜಿನಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದೇ ಅಲ್ಲಿ ಸುಮಾರು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಹಿಂದೆ ನಾನು ಶಾಸಕನಾಗಿದ್ದಾಗ ಆ ಕಾಲೇಜಿಗೆ ನಿವೇಶನವನ್ನು ಮಂಜೂರು ಮಾಡಿಸಿದ್ದೆ. ಆದ್ದರಿಂದ ಇಷ್ಟು ಮಕ್ಕಳು ಕಲಿಯುತ್ತಿರುವುದನ್ನು ನೋಡಿ ನನಗೆ ಸಂತೋಷವಾಯಿತು. ಇನ್ನು ಆ ಕಾಲೇಜಿನಲ್ಲಿ ಹೆಚ್ಚುವರಿಯಾಗಿ ಮೂರು ಕೊಠಡಿಗಳನ್ನು ಉದ್ಘಾಟನೆ ಮಾಡಿದ್ದು ಸಹ ನನಗೆ ಹೆಮ್ಮೆ ಅನಿಸಿದೆ.

    ವ್ಯಾಪಾರಿಗಳಾದ ನೀವು ಬಾಡಿಗೆ ಕೊಟ್ಟು ವ್ಯಾಪಾರ ಮಾಡುವ ಸ್ಥಿತಿಯಲ್ಲಿ ನೀವುಗಳು ಇಲ್ಲ. ನೀವು ಸಹ ಯಾವುದೋ ಒತ್ತಡಕ್ಕೆ ಸಿಲುಕಿ ಪಟ್ಟಣಕ್ಕೆ ಬಂದು, ಬೀದಿ ಬದಿ ವ್ಯಾಪಾರ ವನ್ನು ಆಶ್ರಯಿಸಿದ್ದೀರಾ. ನಾನು ಚುನಾವಣಾ ಪೂರ್ವದಲ್ಲಿ ಅಭಯವನ್ನು ನೀಡಿದ್ದೆ. ಅದರಂತೆ ನೀವು ನನ್ನ ಅಧಿಕಾರ ಅವಧಿಯಲ್ಲಿ ನಿರಾತಂಕವಾಗಿ ವ್ಯಾಪಾರ ವಹಿವಾಟು ಮಾಡಿಕೊಳ್ಳಿ. ಯಾರು ಸಹ ನಿಮಗೆ ತೊಂದರೆ ಕೊಡುವುದಿಲ್ಲ. ಹಾಗೊಂದು ವೇಳೆ ಯಾರಾದರೂ ತೊಂದರೆ ಕೊಟ್ಟಿದ್ದೆ ಆದರೆ ನನ್ನ ಗಮನಕ್ಕೆ ತನ್ನಿ. ನಾನು ನಿಮ್ಮಗಳ ಪರವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ, ಈ ವಾಣಿಜ್ಯ ಸಂಕೀರ್ಣದ ಸುತ್ತ ಆರಾಮಾಗಿ ವ್ಯಾಪಾರವನ್ನು ಮಾಡಿಕೊಳ್ಳಿ ನಾನು ನಿಮ್ಮೊಟ್ಟಿಗೆ ಇರುತ್ತೇನೆ ಎಂದು ಅಭಯ ನೀಡಿದರು.

    ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಆರ್.ರಾಮೇಗೌಡ, ಮಾಜಿ ಸದಸ್ಯ ದಿವಾಕರ್, ಸಿಐಟಿಯು ಸತೀಶ್, ದೇವರಾಜು ಎಸ್., ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜು, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ ಉಪಾಧ್ಯಕ್ಷ ಯಾಸಿನ್ ವಕೀಲರಾದ ಉಮೇಶ್ ಧನಂಜಯ ರೇಣುಕೇಶ್ ಶಾರದಮ್ಮ ಪ್ರೇಮ ಸೇರಿದಂತೆ ಬೀದಿಬದಿ ವ್ಯಾಪಾರಿಗಳು ಹಾಜರಿದ್ದರು.

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಲಯನ್ಸ್ ಶಾಲೆ  ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ: ಲಯನ್ಸ್  ಜಯಕುಮಾರ್

    December 10, 2025

    ವಿಧಾನಸೌಧ ಮುಂಭಾಗ ಶ್ರೀ ನಾರಾಯಣ ಗುರುಗಳ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯ

    December 9, 2025

    ಸರಗೂರು:  ಶ್ರದ್ಧಾ–ಭಕ್ತಿ, ಸಡಗರದಿಂದ ಹನುಮ ಜಯಂತಿ ಆಚರಣೆ

    December 8, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಗರ್ಭ ಧರಿಸಿದ 325 ಬಾಲಕಿಯರು: ತುಮಕೂರಿನಲ್ಲಿ ಹೆಚ್ಚಿದ ಪೋಕ್ಸೋ ಪ್ರಕರಣಗಳು

    December 11, 2025

    ತುಮಕೂರು: ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 325 ಬಾಲಕಿಯರು ಗರ್ಭ ಧರಿಸಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ…

    ರಾಷ್ಟ್ರೀಯ ಗಣಿತ ದಿನಾಚರಣೆ: ಡಿ.21ರಂದು ಸರ್ವೋದಯ ಕಾಲೇಜಿನಲ್ಲಿ ಗಣಿತ–ವಿಜ್ಞಾನ ಒಲಂಪಿಯಾಡ್

    December 11, 2025

    ಡಿ.13ರಂದು ಜಿಲ್ಲಾ ಬಂಜಾರ ಭವನದ ಕಟ್ಟಡ ಉದ್ಘಾಟನೆ

    December 11, 2025

    ಕಿತ್ತೂರು ರಾಣಿಚೆನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

    December 11, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.