ಬೆಂಗಳೂರು: ಮೆಟ್ರೋ ರೈಲಿನೊಳಗೆ ಮಹಿಳಾ ಟೆಕ್ಕಿಯೊಬ್ಬರ ಫೋಟೋ ತೆಗೆದು ಆಯುರ್ವೇದ ವೈದ್ಯನೊಬ್ಬ ಸಿಕ್ಕಿಬಿದ್ದ ಘಟನೆ ನಡೆದಿದೆ.
ಡಿ.25ರಂದು ಮಹಿಳಾ ಟೆಕ್ಕಿಯೊಬ್ಬರು ಮೆಜೆಸ್ಟಿಕ್ ನಿಂದ ಜೆ.ಪಿ.ನಗರಕ್ಕೆ ಹೋಗಲು ಮೆಟ್ರೋ ಹತ್ತಿದ್ದಾರೆ. ಇವರ ಕಂಪಾರ್ಟ್ ಮೆಂಟ್ ನಲ್ಲಿದ್ದ ಆಯುರ್ವೇದ ವೈದ್ಯನೊಬ್ಬ ತನ್ನ ಮೊಬೈನಲ್ಲಿ ಟೆಕ್ಕಿಯ ಪೋಟೋ ಸೆರೆ ಹಿಡಿದಿದ್ದಾನೆ. ಇದು ಟೆಕ್ಕಿಯ ಗಮನಕ್ಕೆ ಬಂದಿದೆ. ಮೆಟ್ರೋ ರೈಲು ಜಯನಗರ ಮೆಟ್ರೋ ನಿಲ್ದಾಣಕ್ಕೆ ಬಂದಾಗ ಈ ವಿಷಯವನ್ನು ಸೆಕ್ಯೂರಿಟಿಗೆ ಹೇಳಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ತಕ್ಷಣ ಆ ವ್ಯಕ್ತಿಯನ್ನು ಹಿಡಿದುಕೊಂಡು ವಿಚಾರಿಸಿದಾಗ, ಆತ ಆಯುರ್ವೇದ ವೈದ್ಯ ಎಂಬುದು ಗೊತ್ತಾಗಿದೆ. ಅನುಮತಿ ಇಲ್ಲದೆ ಪೋಟೋ ತೆಗೆದಿದ್ದಾನೆಂದು ಮಹಿಳಾ ಟೆಕ್ಕಿ ಅವಲತ್ತುಕೊಂಡಿದ್ದಾರೆ.
ಸುದ್ದಿ ತಿಳಿದು ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಆಯುರ್ವೇದ ವೈದ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ಟೆಕ್ಕಿಯ ಫೋಟೋ ಡಿಲೀಟ್ ಮಾಡಿಸಿ, ಎನ್ಸಿಆರ್ ದಾಖಲಿಸಿಕೊಂಡು, ಬುದ್ಧಿವಾದ ಹೇಳಿ ನಂತರ ಆತನನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx