ಹಾಸನ: ವೈದ್ಯರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೆಡಿಕಲ್ ಗೆ ಹೋಗಿ ಔಷಧಿ ತಗೊಂಡು ಬನ್ನಿ ಎಂದು ಚೀಟಿ ಬರೆದುಕೊಡುವುದು ಸಾಮಾನ್ಯ. ಆದರೀಗ ಹಾಸನದ ವೈದ್ಯರೊಬ್ಬರು ಈ ರೀತಿ ಔಷಧಿಗಾಗಿ ಬರೆದುಕೊಟ್ಟ ಚೀಟಿಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೆ ಏನೆಲ್ಲಾ ಔಷಧಿ ತರಬೇಕೆಂದು ವೈದ್ಯರು ಬರೆದ ಚೀಟಿ ಎಲ್ಲೆಡೆ ಸುದ್ದಿಯಾಗುತ್ತಿದೆ. ಯಾಕೆಂದರೆ ಅದರಲ್ಲಿ ಚಿಕಿತ್ಸೆಗೆ ಮೆಹಂದಿ ಕೋನ್ ತರುವಂತೆ ಬರೆದುಕೊಟ್ಟಿದ್ದಾರೆ. ಆರಂಭದಲ್ಲಿ ಮೆಹೆಂದಿ ಕೋನ್ ನಿಂದ ಯಾವ ಚಿಕಿತ್ಸೆ ನೀಡುತ್ತಾರೆ ಎಂಬ ಪ್ರಶ್ನೆ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ, ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೆ ಹಾಸನದ ವೈದ್ಯರು ಮೆಹಂದಿ ಕೋನ್ ಅನ್ನು ಔಷಧಿಯಾಗಿ ಬಳಕೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.
ಡಾಕ್ಟರ್ ಔಷಧಿ ಚೀಟಿಯಲ್ಲಿ ಒಂದು ಮೆಹೆಂದಿ ಕೋನ್ ಹಾಗೂ ಎರಡು ಕ್ರೇಪ್ ಬ್ಯಾಂಡೇಜ್ ತರುವಂತೆ ಬರೆದುಕೊಟ್ಟಿದ್ದರು. ಕಾಲು ಮೂಳೆ ಮುರಿದು ಬ್ಯಾಂಡೇಜ್ ಹಾಕಿಕೊಂಡಿದ್ದ ರೋಗಿ ಅದನ್ನು ಹುಡುಕಿಕೊಂಡು ಮೆಡಿಕಲ್ ಶಾಪ್, ಬ್ಯಾಂಗಲ್ ಸ್ಟೋರ್ ಅಲೆಯುತ್ತಿದ್ದಾಗ ಸಾಮಾಜಿಕ ಹೋರಾಟಗಾರ್ತಿ ಸುನೀತಾ ಹೆಬ್ಬಾರ್ ಅವರಿಗೆ ದೊರಕಿದ್ದರಿಂದ ಅವರು ಆ ಚೀಟಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಚೀಟಿಯಲ್ಲಿ ಮೆಹಂದಿ ಕೋನ್ ಬರೆದಿರುವುದನ್ನು ಡಾಕ್ಟರ್ ಗಳು ವೆರಿಕೋಸ್ ವೈನ್ಸ್ ಎಂಬ ಕಾಯಿಲೆಯ ಶಸ್ತ್ರಚಿಕಿತ್ಸೆಯಲ್ಲಿ ಇನ್ಕಾಂಪೀಟೆಂಟ್ ಪರ್ಫೋರೇಟರ್ ಇದನ್ನು ಗುರುತು ಮಾಡುವುದಕ್ಕಾಗಿ ಬಳಸಲಾಗುವುದು. ಒಂದುವೇಳೆ ಈ ಜಾಗವನ್ನು ಪೆನ್ನಿನ ಇಂಕ್ ನಲ್ಲಿ ಗುರುತು ಮಾಡಿದಲ್ಲಿ, ಅದು ಅಳಿಸಿ ಹೋಗುತ್ತದೆ. ಏಕೆಂದರೆ ಶತ್ರಚಿಕಿತ್ಸೆಯ ಸಮಯದಲ್ಲಿ ಹಾಗೂ ಅದಕ್ಕೆ ಮುನ್ನ ಆಪರೇಷನ್ ಮಾಡುವ ಜಾಗವನ್ನು ಬೀಟಾಡಿನ್ಮತ್ತು ಸ್ಪಿರಿಟ್ ನಿಂದ ಸ್ಕ್ರಬ್ /ಶುಚಿ ಗೊಳಿಸಲಾಗುವುದು.
ಆದ್ದರಿಂದ ಸ್ಥಳೀಯ ವಸ್ತುಗಳು – ಮೇಹಂದಿ/ಹೆನ್ನಾ ಇವುಗಳಿಂದ ಗುರುತಿಸಿದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಉಳಿಯುತ್ತದೆ ಹಾಗು ಸ್ಕ್ರಬ್ಬಿಂಗ್ ನಿಂದ ಅಳಿಸಿ ಹೋಗುವುದಿಲ್ಲ. ಗುರುತು ಮಾಡಿರುವ ಜಾಗದಲ್ಲಿ ಡಾಕ್ಟರ್ಗಳು ಸುಲಭವಾಗಿ ಪರ್ಫೋರೆಟಾರ್ಗಳನ್ನು ಹುಡುಕುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ, ಈ ಪ್ರಿಸ್ಕ್ರಿಪ್ಷನ್ ನಲ್ಲಿ ಇರುವ ಮೆಹಂದಿಯನ್ನು ವೈದ್ಯಕೀಯ ಕಾರಣಗಳಿಗಾಗಿ ಉಪಯೋಗಿಸಲಾಗುವುದು ಎಂದು ಹಿಮ್ಸ್ ಆಸ್ಪತ್ರೆ ಆರ್‌ಎಂಒ ಡಾ.ಪ್ರವೀಣ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


