ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಸದಸ್ಯರ ವಿರುದ್ಧ ಅಧ್ಯಕ್ಷ ಪಿ.ಟಿ. ಉಷಾ ಮಾತನಾಡಿ ಇತರೆ ಸದಸ್ಯರು ನನ್ನನ್ನು ಕಡೆಗಣಿಸುತ್ತಿದ್ದು, ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಒಂದಾಗಿ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದಸ್ಯರಿಗೆ ಕಳುಹಿಸಿರುವ ಪತ್ರದಲ್ಲಿ ಪಿ.ಟಿ. ಉಷಾ ಆಕ್ಷೇಪ ವ್ಯಕ್ತಪಡಿಸಿದರು. ಪಿಟಿ ಉಷಾ ಅವರ ಕಾರ್ಯನಿರ್ವಾಹಕ ಸಹಾಯಕ ಅಜಯ್ ನಾರಂಕ್ ಅವರನ್ನು ಪದಚ್ಯುತಗೊಳಿಸಿದ ವಿರುದ್ಧ ಪತ್ರ ಕಳುಹಿಸಲಾಗಿದೆ. ಕಾರ್ಯಕಾರಿ ಸಮಿತಿಗೆ ನಾರಂಗ್ ಅವರನ್ನು ನೇಮಿಸುವ ಅಥವಾ ವಜಾ ಮಾಡುವ ಅಧಿಕಾರವಿಲ್ಲ ಮತ್ತು ದೈನಂದಿನ ಆಡಳಿತಾತ್ಮಕ ಕಾರ್ಯಗಳು ಕಾರ್ಯಕಾರಿ ಮಂಡಳಿಯ ಕೆಲಸವಲ್ಲ ಎಂದು ಪಿಟಿ ಉಷಾ ಪತ್ರದಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296