ಬೆಳಗಾವಿ : ದಸರಾ ಸಾಂಸ್ಕೃತಿಕ ಹಾಗೂ ಕ್ರೀಡಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಢೋಲ-ತಾಷೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರಗು ತಂದರು.
ಶಾಸಕ ಅನಿಲ ಬೆನಕೆ ಆಯೋಜಿಸಿದ ದಸರಾ ಮಹೋತ್ಸವದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಶಾಸಕ ಅನಿಲ ಬೆನಕೆ ಹಾಗೂ ಬೆಳಗಾವಿ ಬಿಜೆಪಿ ಮುಖಂದರು ಸತ್ಕರಿಸಿ, ಆಶೀರ್ವಾದ ಪಡೆದರು.
ನಗರದ ಸರದಾರ ಮೈದಾನದಲ್ಲಿ ಕಳೆದ 10 ದಿನಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು, ಕೊನೆಯ ದಿನವಾದ ನಿನ್ನೆ ಬಿಜೆಪಿಯಲ್ಲಿ ಸಂಘಟನಾ ಚತುರರು ಎಂದೇ ಪ್ರಖ್ಯಾತಿ ಗಳಿಸಿರುವ ಬಿ.ಎಲ್.ಸಂತೋಷ್ ಆಗಮಿಸಿ, ಕೊನೆಯ ದಿನದ ಡೋಲ-ತಾಷೆ ಸ್ಪರ್ಧೆಗಳನ್ನು ವೀಕ್ಷಿಸಿ, ಖುಷಿ ಪಟ್ಟು, ಕಾರ್ಯಕ್ರಮಕ್ಕೆ ಹೆಚ್ಚು ಮೆರಗು ನೀಡಿದರು.
ಕಳೆದ 10 ದಿನದಿಂದ ದಸರಾ ಹಬ್ಬದ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಲಾಗಿತ್ತು. ನಡೆದ ಎಲ್ಲಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ ಸ್ಪರ್ಧೆಗಳಿಗೆ ಬಹುಮಾನ ವಿತರಣೆ ಮಾಡಲಾಗಿದೆ. ಸ್ಪರ್ಧಾಳುಗಳು ಸಹ ಇನ್ನು ಹೆಚ್ಚಿನ ತಯಾರಿ ಮಾಡಿ, ಮುಂದಿನ ದಸರಾ ಹಬ್ಬದ ವೇಳೆಗೆ ಸಜ್ಜಾಗಬೇಕು ಹಾಗೂ ಬೆಳಗಾವಿ ಉತ್ತರ ಮತಕ್ಷೇತ್ರದ ಜನತೆಯ ಪ್ರೀತಿ ಮತ್ತು ಆಶೀರ್ವಾದ ಸದಾ ಹೀಗೆ ಇರಲಿ ಎಂದು ಶಾಸಕ ಅನಿಲ ಬೆನಕೆ ಆಶಿಸಿದರು.
ಢೋಲ ತಾಷೆ ಸ್ಪರ್ಧೆಯ ವಿಜೆತರಾಗಿ ಶಿವ ಸಂಸ್ಕೃತಿ ಢೋಲ ತಾಷೆ ಪಥಕ ಗೊವಾ ಪ್ರಥಮ ಕ್ರಮಾಂಕ, ಆರಂಭ ಢೋಲ ತಾಷೆ ಪಥಕ ಬೆಳಗಾಂವಿ ದ್ವಿತಿಯ ಕ್ರಮಾಂಕ, ಶಿವ ಗರ್ಜನಾ ಢೋಲ ತಾಷೆ ಪಥಕ ಬೆಳಗಾವಿ ತೃತಿಯ ಕ್ರಮಾಂಕ, ವಜ್ಯನಾದ ಹಾಗೂ ಮೋರಯಾ ಢೋಲ ತಾಷೆ ಪಥಕ ಬೆಳಗಾವಿ ಉತ್ತೆಜನಾರ್ಥ ಸೇರಿದಂತೆ ಉತ್ಕೃಷ್ಟ ಧ್ವಜ ಪ್ರತೀಕ ಮೋರೆ, ಉತ್ಕೃಷ್ಟ ತಾಷೆ ಅನಿರುದ್ಧ ಪವಾರ, ಉತ್ಕೃಷ್ಟ ಢೊಲ ಸೌ. ಉಪಾಸನಾ ದೇಸಾಯಿ ಶೀವ ಸಂಸ್ಕøತಿ ಢೊಲ ತಾಷೆ ಪಥಕ ಗೊವಾ, ಉತ್ಕೃಷ್ಟ ಟೋಲ ಅನಿಕೆತ ಚಟವಾದಿ, ನಗದ ಬಹುಮಾನದೊಂದಿಗೆ ಛತ್ರಪತಿ ಧರ್ಮವೀರ ಸಂಭಾಜಿ ಮಹಾರಾಜರ ಸ್ಮೃತಿ ಚಿನ್ಹೆ ಸೇರಿದಂತದೆ ಪಾರಿತೋಷಕ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲಜಿ, ಬಿಜೆಪಿ ರಾಜ್ಯ ವಕ್ತಾರರಾದ ಎಂ.ಬಿ.ಜಿರಳಿ, ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ರಾಜೇಶ ನಿರಳಿಸೇರಿದಂತೆ ಬಿಜೆಪಿಯ ಹಲವು ನಾಯಕರು ಉಪಸ್ಥಿತರಿದ್ದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನಾಜಿ ಅವರು ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಶಾಸಕ ಅನಿಲ ಬೆನಕೆ ಅವರು ಸುರಾನಾಜಿ ಅವರನ್ನು ಆತ್ಮಿಯವಾಗಿ ಸತ್ಕರಿಸಿದರು. ಬಳಿಕ ಢೋಲ-ತಾಷ ಕಾರ್ಯಕ್ರಮವನ್ನು ಸುರಾನಾಜಿ ಆನಂದಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy