ಸಾಗರ: ಮಾನವನ ಮನಸ್ಸಿನ ಕಷಾಯಗಳ ನಾಶಕ್ಕೆ ಮಾನವನ ನಿಂದ ನಿತ್ಯದಾನ ಮತ್ತು ಪೂಜೆ ಮಾಡುವುದರಿಂದ ಕಷಾಯಗಳು ನಾಶವಾಗಲಿದೆ ಇದರಿಂದ ಮೋಕ್ಷಕ್ಕೆ ಹೋಗಲು ಸಾಧ್ಯವಾಗಲಿದೆ ಎಂದು ಶ್ರೀ ಕ್ಷೇತ್ರ ಸೋಂದ ದಿಗಂಬರ ಜೈನ ಮಠದ ಸ್ವಸ್ತಿ ಶ್ರೀ ಭಟ್ಟ ಅಕಳಂಕ ಭಟ್ಟರ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಶ್ರೀ ಮಾತೆ ಪದ್ಮಾವತಿ ದೇವಿ ಉಯ್ಯಾಲೋತ್ಸವ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಗವಂತನ ಗುಣಗಳು ಎಲ್ಲರಿಗೂ ಪ್ರಾಪ್ತಿಯಾಗಬೇಕು, ಚಿಂತೆ ದೂರವಾಗಲು ಭಗವಂತನಿಗೆ ಪೂಜೆ ಅಗತ್ಯ ಇದರಿಂದ ಅನಂತ ಸುಖ ದೊರೆತು ಭಗವಂತನಿಗೆ ಪ್ರಾಪ್ತಿಯಾಗುತ್ತಾರೆ ಎಂದರು.
ಸಹಸ್ರ ಚಂದ್ರದರ್ಶನದಿಂದ ಮೋಕ್ಷ ದೊರೆಯಲಿದೆ ಮುನಿಯಾಗದೆ ಮೋಕ್ಷ ದೊರೆಯಲಾರದು, ಈ ಜನ್ಮದಲ್ಲಿ ಆಗದಿದ್ದರೂ ಮುಂದಿನ ಜನ್ಮದಲ್ಲಿ ಮುನಿಯಾಗಬಹುದು ಇದರೊಂದಿಗೆ ಭಗವಂತನ ದರ್ಶನ ಪಡೆಯಬಹುದು ಎಂದ ಭಟ್ಟರಕ ಶ್ರೀಗಳು, ಸಿದ್ದತ್ವದ ಬೀಜತ್ವ ಎಲ್ಲರಿಗೂ ಅಗತ್ಯ ,ಸಂಸ್ಕಾರ ನೀಡಬೇಕು, ಆತ್ಮಕ್ಕೆ ಧರ್ಮ ಸಂಸ್ಕಾರ ಅಗತ್ಯ ,ನಿತ್ಯದಾನ ಮತ್ತು ಪೂಜೆ ಮಾಡುವವರು ನಿಜವಾದ ಶ್ರಾವಕರು ಇದರಿಂದ ನಮ್ಮ ಅಂತರಂಗದ ಕಷಾಯಗಳು ನಾಶವಾಗಲಿದೆ ಎಂದರು.
ಮಂಗಳ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಹೊಂಬುಜ ಮಠದ ಡಾ. ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ಮಾನವನ ಮನಸ್ಸಿನಲ್ಲಿ ಒಳ್ಳೆ ಭಾವನೆಗಳು ಬರಬೇಕು, ತಂದೆ ತಾಯಿಗಳು ಮಾಡಿದ ಸಹಕಾರ ಮರೆಯಬಾರದು, ತಂದೆ ತಾಯಿಗಳ ಮಾರ್ಗದರ್ಶನ ಆಶೀರ್ವಾದ ತಿಳಿಯಬೇಕು ಅವರ ಶಕ್ತಿಯೇ ನಮಗೆ ಮಾರ್ಗದರ್ಶನ ಎಂದ ಭಟ್ಟರಕ. ಶ್ರೀಗಳು ಉಪಕಾರವನ್ನು ಯಾವುದೇ ದೃಷ್ಟಿಯಿಂದ ಅಳೆಯಲು ಸಾಧ್ಯವಿಲ್ಲ ಎಂದರು.
ಬೇರೆಯವರ ಬಗ್ಗೆ ಕೇಳಿರಿಮೆ ತೊರೆದು ನಾನು ಎನ್ನುವ ಅಹಂ ತೊರೆಯಬೇಕು ಇದರಿಂದ ಮುಕ್ತಿ ದೊರೆಯಲಿದೆ. ಪೂಜೆ, ಒಳ್ಳೆಮನಸ್ಸಿನ ಜೊತೆಗೆ ತಂದೆ ತಾಯಿಗಳ ಆಶೀರ್ವಾದ ಅಗತ್ಯ, ತಂದೆ ತಾಯಿಗಳ ಹೆಸರಿನಲ್ಲಿ ಒಳ್ಳೆ ಕೆಲಸ ಮಾಡಿ ಮನಸ್ಸಿನಲ್ಲಿ ಸ್ಮರಣೆ ಅಗತ್ಯ, ಇದರಿಂದ ಶಕ್ತಿ ತುಂಬಲಿದೆ ತಂದೆ ತಾಯಿಗಳು ಸೇವಾ ರೂಪದ ಪ್ರತಿಮೆ ಗಳಿಂದರು.
ಕಾರ್ಯಕ್ರಮದಲ್ಲಿ ಹಿರಿಯ ಶ್ರಾವಕಿ ಧರಣಮ್ಮ ಚಂದ್ರರಾಜು ಜೈನ್, ಚಂದ್ರಕಲಾ -ರಾಜಕುಮಾರ್ ದಂಪತಿಗಳು ,ಕುಟುಂಬಸ್ಥರು ,ಸ್ಥಳೀಯ ಜೈನ ಬಂಧುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು ,ಮಹಿಳಾ ಸಂಘಗಳು, ಶ್ರಾವಕ –ಶ್ರಾವಕಿಯರು ಭಾಗವಹಿಸಿದ್ದರು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q