ಮಧುಗಿರಿ: ಪ್ರತಿಫಲಾಕ್ಷೆ ಇಲ್ಲದೆ ಸಮಾಜಕ್ಕೆ ಕೊಡುಗೆ ನೀಡುವ ದಾನಿಗಳು ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಕಾಯ ಅಳಿದರೂ ಕೀರ್ತಿ ಉಳಿದಿದೆ ಎನ್ನುವಂತೆ, ಕೊಟ್ಟ ಕೊಡುಗೆಗಳೆಲ್ಲಾ ಸಾರ್ಥಕತೆ ಕಾಣುತ್ತವೆ’ ಎಂದು ಮಧುಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎನ್. ಹನುಮಂತರಾಯಪ್ಪ ತಿಳಿಸಿದರು.
ಪಟ್ಟಣದ ಕರಡಿಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದನೇ ತರಗತಿಯ ನಲಿ-ಕಲಿ ಮಕ್ಕಳಿಗೆ ಶಾಲೆ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ,
ಸರಕಾರಿ ಶಾಲೆಗಳು ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸುವುದರ ಜೊತೆಗೆ ಮಕ್ಕಳನ್ನು ಆಕರ್ಷಿಸಲು ಸುಂದರ ವಾತಾವರಣ ಅಗತ್ಯ. ಅದಕ್ಕೆ ಸರಕಾರಿ ಅನುದಾನಕ್ಕೆ ಕಾಯದೆ ದಾನಿಗಳ ಮನವೊಲಿಸಿ ಅಭಿವೃದ್ಧಿಪಡಿಸಲು ಮುಂದಾದ ನಮ್ಮ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕಿ ಶೋಭಾರವರು ದಾನಿಗಳ ಸಹಾಯದಿಂದ ಕರಡಿಪುರ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನಲಿಕಲಿ ಮಕ್ಕಳು ಹಾಸನದ ಮೇಲೆ ಕೂತು ಬೋಧನೆ ಮಾಡಲು ಹಾಸನದ ವ್ಯವಸ್ಥೆಯನ್ನು ಮಾಡಿದ್ದಾರೆ.
ಇವರ ಈ ಕಾರ್ಯ ಮೊದಲನೆಯದಲ್ಲ ಶೋಭಾ ರವರು ಸರಕಾರಿ ಶಾಲೆಗಳ ಕೊರತೆಗಳನ್ನು ನೀಗಿಸುವುದಕ್ಕಾಗಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡೆತಡೆಯಾಗದಂತೆ ದಾನಿಗಳ ಸಹಕಾರದಿಂದ ಸತತವಾಗಿ ಒಂದಲ್ಲ ಒಂದು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಇವರ ಈ ಕಾರ್ಯಕ್ಕೆ ನಮ್ಮ ಇಲಾಖೆಯ ಹಾಗೂ ನನ್ನ ಸಹಕಾರ ಎಂದಿಗೂ ಇರುತ್ತೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.
ಎಸ್ ಡಿ ಎಂ ಹನುಮಂತರಾಯಪ್ಪ ಮಾತನಾಡಿ, ಶೈಕ್ಷಣಿಕ ಪ್ರಗತಿ ನಲಿಕಲಿ ಮಕ್ಕಳಲ್ಲಿ ಉತ್ತಮವಾಗಿ ಬೆಳೆದರೆ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತಮ ಅನುಕೂಲವಾಗಲಿದೆ. ಈ ಆಲೋಚನೆಯಿಂದಾಗಿ ಶಿಕ್ಷಕಿ ಶೋಭಾ ಅವರು ದಾನಿಗಳ ಸಹಕಾರದಿಂದ ಶಾಲೆಯ ಮಕ್ಕಳಿಗೆ ಲೇಖನ ಸಾಮಗ್ರಿ ಹಾಗೂ ಕೂತು ಬೋಧನೆ ಮಾಡಲು ಅತ್ಯಗತ್ಯವಾದ ಹಾಸನದ ವ್ಯವಸ್ಥೆಯನ್ನು ಮಾಡಿದ್ದಾರೆ, ಸರಕಾರಿ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಗಳ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬಂತೆ ಶಿಕ್ಷಣ ಹಂತದಲ್ಲಿ ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ದಾನಿಗಳಾದ ಕಾಂಟ್ರಾಕ್ಟರ್ ರವಿ ಮಾತನಾಡಿ, ಸರಕಾರಿ ಶಾಲೆ ಮಕ್ಕಳ ಕಲಿಕೆಗೆ ಅತ್ಯಗತ್ಯವಾದ ಲೇಖನ ಸಾಮಗ್ರಿಗಳು ಹಾಗೂ ಕೂತು ಬೋಧನೆ ಮಾಡಲು ಹಾಸನದ ವ್ಯವಸ್ಥೆಯನ್ನು ಒಂದನೇ ತರಗತಿ ನಲ್ಲಿ ಕಲಿ ಮಕ್ಕಳಿಗೆ ಮಾಡಿದ್ದು, ಶೀಘ್ರದಲ್ಲಿ ಎರಡನೇ ತರಗತಿ ಮಕ್ಕಳಿಗೂ ಸಹ ಹಾಸನದ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿ, ನಾನು ಸಹ ಸರಕಾರಿ ಶಾಲೆ ವಿದ್ಯಾರ್ಥಿ ನನಗೆ ಸರಕಾರಿ ಶಾಲೆಗಳ ಮೇಲೆ ಅಪಾರ ಪ್ರೀತಿ ಇದೆ, ಬಡ ಕುಟುಂಬದ ಮಕ್ಕಳಿಗೆ ಸರಕಾರಿ ಶಾಲೆಗಳು ಶಿಕ್ಷಣದ ದೇವಾಲಯಗಳಂತೆ ಕಾಣುತ್ತದೆ. ಈ ದೇವಾಲಯಗಳಿಗೆ ಶಕ್ತಿ ತುಂಬುವ ಕೆಲಸ ಸದಾ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮುದ್ದಪ್ಪ, ಶಿಕ್ಷಕರಾದ ದಾಸಣ್ಣ, ತಿಮ್ಮರಾಜು ಗೌರೀಶ್ ದಾನಿಗಳಾದ ಗೌರೀಶ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಅಬಿದ್ ಮಧುಗಿರಿ


