ತುಮಕೂರು: ಜಾತಿ ಗಣತಿ ವರದಿ ವಿಚಾರದಲ್ಲಿಇದರಲ್ಲಿ ಯಾರಿಗೆ ತೊಂದರೆ ಅನ್ನೋದಕ್ಕಿಂತ ಗೊಂದಲ ಸೃಷ್ಟಿಯಾಗಿದೆ. ಇನ್ನಷ್ಟು ಗೊಂದಲ ಮಾಡಿಕೊಳ್ಳಬೇಡಿ, ವರದಿ ತಿರಸ್ಕಾರ ಮಾಡಿ ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಮಾತನಾಡಿದ ಅವರು ಮತ್ತೆ ಪ್ರತಿಯೊಂದನ್ನ ಪಾರದರ್ಶಕವಾಗಿ ರೀ ಸರ್ವೆ ಮಾಡಿ. ನಿಮ್ಮ ಕಾಲದಲ್ಲೇ ಅನೌನ್ಸ್ ಮಾಡಿ ನೀವೇ ಕ್ರೆಡಿಟ್ ತಗೊಳ್ಳಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡಬೇಡಿ ಎಂದರು.
ಇಷ್ಟೆಲ್ಲಾ ಗೊಂದಲ ಇಟ್ಟುಕೊಂಡು ಇದನ್ನು ಜಾರಿ ಮಾಡಿದರೆ ಜೇನುಗೂಡಿಗೆ ಕೈ ಹಾಕಿದ ಹಾಗೆ. ಇದರಿಂದ ಏನೂ ಪ್ರಪಂಚ ಮುಳುಗಿ ಹೋಗೋದಿಲ್ಲ, ಸಿದ್ದರಾಮಯ್ಯ ಅರಿವು ಉಳ್ಳವರಾಗಿ ಹೀಗೆ ಮಾಡಬೇಡಿ ಎಂದರು.
ಒಂದೂವರೆ ವರ್ಷಗಳ ಕಾಲ ಸಮಯ ಕೊಟ್ಟು ಮತ್ತೊಮ್ಮೆ ಸರ್ವೆ ಮಾಡಿ. ಆವಾಗ ದೇವರಾಜ ಅರಸು ತರ ನಿಮ್ಮನ್ನು ನೆನಪು ಮಾಡಿಕೊಳ್ತಿವಿ ಎಂದರು. ಅದನ್ನು ಬಿಟ್ಟು ಇರೋ ವರದಿ ಜಾರಿ ಮಾಡಿ ಖಳನಾಯಕರಾಗಬೇಡಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW