nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು

    October 5, 2026

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?

    October 5, 2026
    Facebook Twitter Instagram
    ಟ್ರೆಂಡಿಂಗ್
    • ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು
    • ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ
    • AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?
    • ಜನಸಾಮಾನ್ಯರೇ ಗಮನಿಸಿ: ಅ.15ರಿಂದ UPIನಲ್ಲಿ ಹೊಸ ನಿಯಮ, ನಿಮ್ಮ ಹಣಕ್ಕೆ ಏನಾಗಲಿದೆ?
    • ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?
    • ತುಮಕೂರಿನ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಬೃಹತ್ ಉದ್ಯೋಗಾವಕಾಶ: ತಕ್ಷಣವೇ ನೇಮಕಾತಿ!
    • ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ
    • ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಂಟು ಆರೋಪ: ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಯುವಕನ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮನೆಗೆ ಮರು ಪೇಂಟಿಂಗ್ ಮಾಡಿಸುವಾಗ ಈ ತಪ್ಪುಗಳನ್ನು ಮರೆತೂ ಮಾಡಬೇಡಿ!
    ಲೇಖನ July 13, 2026

    ಮನೆಗೆ ಮರು ಪೇಂಟಿಂಗ್ ಮಾಡಿಸುವಾಗ ಈ ತಪ್ಪುಗಳನ್ನು ಮರೆತೂ ಮಾಡಬೇಡಿ!

    By adminJuly 13, 2026No Comments2 Mins Read
    repainting your home

    ಮನೆಗೆ ಹೊಸದಾಗಿ ಬಣ್ಣ ಬಳಿಯುವುದು, ಅದರಲ್ಲೂ ವಿಶೇಷವಾಗಿ ಮರು ಪೇಂಟಿಂಗ್ ಮಾಡಿಸುವುದು ಹಲವರಿಗೆ ದೊಡ್ಡ ತಲೆನೋವಿನ ಕೆಲಸ. ಪೇಂಟಿಂಗ್ ಮುಗಿದ ನಂತರ ಫರ್ನಿಚರ್‌ಗಳು ಹಾಳಾಗುವುದು ಅಥವಾ ನೆಲದ ಮೇಲೆ ಬಣ್ಣ ಬಿದ್ದು ಕಲೆಯಾಗುವುದು ಬಹುತೇಕ ಮನೆಗಳಲ್ಲಿ ಕೇಳಿಬರುವ ಸಾಮಾನ್ಯ ದೂರು. ಆದರೆ, ಕೊಂಚ ಮುನ್ನೆಚ್ಚರಿಕೆ ವಹಿಸಿದರೆ ಕೋಣೆಯಲ್ಲಿರುವ ಬೆಲೆಬಾಳುವ ವಸ್ತುಗಳಿಗೆ ಹಾನಿಯಾಗದಂತೆ ತಡೆಯಬಹುದು. ಪೇಂಟಿಂಗ್ ಮಾಡುವಾಗ ನೆನಪಿನಲ್ಲಿಡಬೇಕಾದ ಕೆಲವು ಮುಖ್ಯವಾದ ಸಲಹೆಗಳು ಇಲ್ಲಿವೆ:

    ವಸ್ತುಗಳ ರಕ್ಷಣೆ ಮೊದಲು:

    ಪೇಂಟಿಂಗ್ ಆರಂಭಿಸುವ ಮುನ್ನ ಕೋಣೆಯಲ್ಲಿರುವ ಸಾಧ್ಯವಿರುವ ಎಲ್ಲಾ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಿ. ಇನ್ನುಳಿದ ವಸ್ತುಗಳನ್ನು ಮತ್ತು ಇಡೀ ನೆಲವನ್ನು ಪ್ಲಾಸ್ಟಿಕ್ ಅಥವಾ ದಪ್ಪನೆಯ ಕ್ಯಾನ್ವಾಸ್ ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಿ. ಪೇಂಟಿಂಗ್ ವೇಳೆ ಬರುವ ಕಸವನ್ನು ಹಾಕಲು ಮೊದಲೇ ಒಂದು ದೊಡ್ಡ ಡಸ್ಟ್‌ಬಿನ್ ರೆಡಿ ಇಟ್ಟುಕೊಳ್ಳಿ.

    ಗೋಡೆಗಳ ಸ್ವಚ್ಛತೆ ಮತ್ತು ರಿಪೇರಿ:

    ಬಣ್ಣ ಹಚ್ಚುವ ಮುನ್ನ ಗೋಡೆಗಳನ್ನು ಚೆನ್ನಾಗಿ ತೊಳೆಯಬೇಕು. ಗೋಡೆಗೆ ಅಂಟಿಕೊಂಡಿರುವ ಕಲೆಗಳು ಅಥವಾ ಹಳೆಯ ಪೇಂಟ್ ಅವಶೇಷಗಳನ್ನು ಸ್ಕ್ರಾಪರ್ ಬಳಸಿ ತೆಗೆದುಹಾಕಿ. ಮೊಳೆ ಹೊಡೆದಿದ್ದರಿಂದ ಉಂಟಾದ ರಂಧ್ರಗಳು ಮತ್ತು ಗೋಡೆಯ ಬಿರುಕುಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಸಿಮೆಂಟ್ ಬಳಸಿ ಮುಚ್ಚಿ, ಒಣಗಿದ ನಂತರವೇ ಪೇಂಟಿಂಗ್ ಆರಂಭಿಸಬೇಕು. ಇಲ್ಲದಿದ್ದರೆ ಗೋಡೆ ಅಂದಗೆಡುತ್ತದೆ.

    ಇಂಟೀರಿಯರ್ ಪ್ಲಾನ್ ಮುಖ್ಯ:

    ನಿಮ್ಮ ಮನೆಯ ಒಳಾಂಗಣ ವಿನ್ಯಾಸಕ್ಕೆ (Interior) ಹೊಂದುವಂತಹ ಬಣ್ಣಗಳನ್ನೇ ಆಯ್ಕೆ ಮಾಡಿ. ಇದಕ್ಕಾಗಿ ಪೇಂಟಿಂಗ್ ಕೆಲಸ ಶುರುವಾಗುವ ಮುನ್ನವೇ ಇಂಟೀರಿಯರ್ ಮಾಸ್ಟರ್ ಪ್ಲಾನ್ ಸಿದ್ಧವಾಗಿರಲಿ.

     ಪೇಂಟಿಂಗ್ ಮಾಡುವ ಸರಿಯಾದ ಕ್ರಮ:

    ಸೀಲಿಂಗ್ ಮತ್ತು ಗೋಡೆಯ ಮೇಲ್ಭಾಗಕ್ಕೆ ಬಣ್ಣ ಹಚ್ಚಲು ‘ರೋಲರ್ ಸ್ಟಿಕ್’ಗಳನ್ನು ಬಳಸಿ. ಇದು ಕೆಲಸವನ್ನು ಸುಲಭಗೊಳಿಸುತ್ತದೆ. ಯಾವಾಗಲೂ ಪೇಂಟಿಂಗ್ ಅನ್ನು ಮೇಲಿನಿಂದ ಕೆಳಮುಖವಾಗಿ ಮಾಡಬೇಕು. ಮೊದಲು ಸೀಲಿಂಗ್, ನಂತರ ಗೋಡೆಗಳು, ಬಾಗಿಲು ಮತ್ತು ಕ್ಯಾಬಿನೆಟ್‌ಗಳ ಕ್ರಮದಲ್ಲಿ ಬಣ್ಣ ಬಳಿಯಬೇಕು. ಗೋಡೆಯ ಒಂದು ಭಾಗವನ್ನು ಸಂಪೂರ್ಣವಾಗಿ ಪೇಂಟ್ ಮಾಡಿದ ನಂತರವೇ ಮುಂದಿನ ಭಾಗಕ್ಕೆ ಕೈ ಹಾಕಿ.

    ಗುಣಮಟ್ಟ ಮತ್ತು ಅನುಭವಕ್ಕೆ ಆದ್ಯತೆ ನೀಡಿ:

    ಯಾವಾಗಲೂ ಉತ್ತಮ ಅನುಭವವಿರುವ ಪೇಂಟರ್‌ ಗಳಿಗೆ ಮಾತ್ರ ಕೆಲಸವನ್ನು ವಹಿಸಿಕೊಡಿ. ಕಾಂಟ್ರಾಕ್ಟ್ ನೀಡುವಾಗ ಗೋಡೆಗೆ ಎರಡು ಕೋಟ್ ಪ್ರೈಮರ್ (Primer) ಹಾಕುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಗೋಡೆಯ ಮೇಲೆ ಬ್ರಷ್‌ ನ ಕಲೆಗಳು ಬೀಳದಂತೆ ತಡೆಯಲು ಉತ್ತಮ ಗುಣಮಟ್ಟದ ಬ್ರಷ್ ಮತ್ತು ರೋಲರ್‌ ಗಳನ್ನೇ ಬಳಸಿ. ಹೊರಗಿನ ಗೋಡೆಗಳನ್ನು ತೊಳೆಯಲು ಸಾಮಾನ್ಯ ಬ್ರಷ್‌ಗಳ ಬದಲಿಗೆ ‘ಹೈ ಪ್ರೆಶರ್ ಕ್ಲೀನರ್’ ಮೆಷಿನ್ ಬಳಸುವುದು ಗೋಡೆಯನ್ನು ಗರಿಷ್ಠವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

    ನಿಮ್ಮ ಮನೆಗೆ ಮರು ಪೇಂಟಿಂಗ್ ಮಾಡುವಾಗ ಈ ಸರಳ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡರೆ, ಯಾವುದೇ ಗೊಂದಲವಿಲ್ಲದೆ ನಿಮ್ಮ ಮನೆಗೆ ವೃತ್ತಿಪರ ಹಾಗೂ ಸುಂದರ ನೋಟವನ್ನು ನೀಡಬಹುದು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?

    October 5, 2026

    ಶಿವನ ಕೊರಳಿನಿಂದ ಬುದ್ಧನ ಧ್ಯಾನದವರೆಗೆ ನಾಗರಹಾವಿನ ನಂಟೇಕೆ? ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿರುವ ನಿಗೂಢ ನಂಬಿಕೆಯ ಕಥೆ ಇಲ್ಲಿದೆ!

    October 4, 2026

    ‘ಕಸ’ವೇ ಇಲ್ಲಿ ಹರಕೆ! ಹಳೆಯ ವಸ್ತುಗಳನ್ನು ದೇವಿಗೆ ಅರ್ಪಿಸುವ ಅಪರೂಪದ ಆಚರಣೆ ಎಲ್ಲಿದೆ ಗೊತ್ತಾ?

    October 2, 2026

    Leave A Reply Cancel Reply

    Our Picks

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!

    October 3, 2026

    ಫ್ಲೈದುಬೈ ವಿಮಾನ ದಾಳಿ: ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು ?

    October 2, 2026

    ಇಂದಿನಿಂದ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್, ವಿಮಾನ ಇಂಧನ (ATF) ದರ ಏರಿಕೆ

    October 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು

    October 5, 2026

    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಚಿತ್ರಕಥೆಗಾರ ಸಿಂಗೀತಂ ಶ್ರೀನಿವಾಸ ರಾವ್ (94) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಆರೋಗ್ಯ…

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?

    October 5, 2026

    ಜನಸಾಮಾನ್ಯರೇ ಗಮನಿಸಿ: ಅ.15ರಿಂದ UPIನಲ್ಲಿ ಹೊಸ ನಿಯಮ, ನಿಮ್ಮ ಹಣಕ್ಕೆ ಏನಾಗಲಿದೆ?

    October 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.