ಬೆಂಗಳೂರು: ಸತೀಶ್ ಜಾರಕಿಹೊಳಿ ಅವರು 20 ಶಾಸಕರ ಜೊತೆ ವಿದೇಶ ಪ್ರವಾಸ ಹೋಗಲು ಸಿದ್ದರಾಗಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ್, ಅವರೇನೋ ಸ್ನೇಹಿತರು ಫಾರಿನ್ ಕಂಟ್ರಿಗೆ ಹೋಗುತ್ತಿರಬಹುದು. ವಿದೇಶಕ್ಕೆ ಹೋಗೋದರ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಐಟಿ ದಾಳಿಯಲ್ಲಿ ಸಿಕ್ಕ ಹಣದ ವಿಚಾರವಾಗಿ ಸಿಬಿಐ ತನಿಖೆಗೆ ಕೊಡಬೇಕು ಎಂದು ಬಿಜೆಪಿ ಆಗ್ರಹಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಅವರು ಆರೋಪ ಮಾಡುತ್ತಾರೆ. ಸಿಬಿಐಗೆ ಕೊಡಬೇಕು ಅಂತಿದರೇ ಐಟಿ ಡಿಪಾರ್ಟ್‌ಮೆಂಟ್ ನವರೇ ಕೊಡುತ್ತಾರೆ. ಪಂಚರಾಜ್ಯಗಳಿಗೆ ಹಣ ಕಳಿಸುತ್ತಾರೆ ಅಂತ ಹೇಳುತ್ತಾರೆ. ಅವಕಾಶ ಸಿಕ್ಕಾಗ ಬಿಜೆಪಿಯವರು ಹೀಗೆ ಹೇಳುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.


