ಈ ವರ್ಷ ಎಲ್ಲೆಡೆ ಬಾರಿ ಬರಗಾಲ ಎದುರಾಗಿದೆ. ಹೀಗಾಗಿ ಜನರಿಗೆ ತಣ್ಣೀರು ಎರಚಿದೆ. ರಾಜಧಾನಿ ಬೆಂಗಳೂರಲ್ಲಂತು ಬೋರ್ ವೆಲ್ ಗಳೆಲ್ಲವೂ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಹೀಗಾಗಿ ಹೋಳಿ ಹಬ್ಬಕ್ಕೆ ನೀರಿನಲ್ಲಿ ಜಾಲಿ ಮಾಡೋದಕ್ಕೂ ಜಲಮಂಡಳಿ ರೂಲ್ಸ್ ಜಾರಿ ಮಾಡಿದೆ.
ಹೋಳಿ ಆಚರಣೆ ನೆಪದಲ್ಲಿ ಬೇಕಾಬಿಟ್ಟಿ ನೀರು ವ್ಯರ್ಥ ಮಾಡಿದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಜಲಮಂಡಳಿ ನೀಡಿದೆ. ಮನೆಗಳಲ್ಲಿ ನೀರನ್ನು ವ್ಯರ್ಥ ಮಾಡದೇ ಹೋಳಿ ಆಚರಣೆ ಮಾಡಿದರೆ ಯಾವುದೇ ಅಡ್ಡಿ ಇಲ್ಲ. ಆದರೆ ಕಮರ್ಷಿಯಲ್ ಉದ್ದೇಶದಿಂದ ನೂರಾರು ಜನರನ್ನು ಸೇರಿಸಿ ನೀರು ವ್ಯರ್ಥ ಮಾಡಿದರೆ ಅಂತಹ ಹೋಟೆಲ್, ಮಾಲ್ಗಳ ಮೇಲೆ ಕ್ರಮವಹಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾಥ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.
ಜಲಸ್ನೇಹಿ ಹೋಳಿ ಆಚರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ನಗರದಲ್ಲಿ ಜಲಕ್ಷಾಮ ಹಿನ್ನೆಲೆಯಲ್ಲಿ ದೊಡ್ಡ ಹೋಟೆಲ್, ಪಬ್ ಸೇರಿದಂತೆ ಹೋಳಿ ರೈನ್ ಡ್ಯಾನ್ಸ್ಗಳಿಗೆ ಕಡಿವಾಣ ಹಾಕಲಾಗಿದೆ. ಈಗಾಗಲೇ ಹಲವು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಹೋಳಿ ಸೆಲೆಬ್ರೆಷನ್ ಗಳನ್ನು ಹಮ್ಮಿಕೊಂಡಿವೆ. ಮಾಲ್, ಮೈದಾನ ಸೇರಿದಂತೆ ಹಲವೆಡೆ ಹೋಳಿ ಸೆಲೆಬ್ರೇಷನ್ಗೆ ಬುಕ್ಕಿಂಗ್ ಶುರುವಾಗಿದೆ.
ಕಮರ್ಷಿಯಲ್ ಉದ್ದೇಶದಿಂದ ಹೆಚ್ಚು ಜನರನ್ನು ಸೇರಿಸಿ ನೀರು ವ್ಯರ್ಥ ಮಾಡದಂತೆ ಸೂಚಿಸಲಾಗಿದೆ. ನೀರಿನ ಹೋಳಿ ಬದಲಾಗಿ, ಡ್ರೈ ಹೋಳಿ ಆಚರಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮವನ್ನು ಗಾಳಿಗೆ ತೂರಿ ಮಿತಿ ಮೀರಿ ನೀರು ಬಳಸಿದರೆ ದಂಡ ಪ್ರಯೋಗದ ಎಚ್ಚರಿಕೆಯನ್ನು ನೀಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


