ಸರಗೂರು: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣದ ಹಿನ್ನೆಲೆಯಲ್ಲಿ ಹಾದನೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ನಾಮಫಲಕದ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗ್ರಾಮಸ್ಥರು ಮೇಣದ ಬತ್ತಿ ಹಚ್ಚಿ ಮೌನಚರಣೆ ನಡೆಸಿದರು.
ಈ ವೇಳೆ ಗ್ರಾಮದ ಮುಖಂಡ ಮಹದೇವಯ್ಯ ಮಾತನಾಡಿ, ಭಾರತ ದೇಶದಲ್ಲಿ ಡಿ.6 ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿಬ್ಬಾಣ ಹೊಂದಿದಾಗ 193 ರಾಷ್ಟ್ರಗಳ ಧ್ವಜವನ್ನು ಕೆಳಗಿಳಿಸಿ ಗೌರವ ಸಲ್ಲಿಸಿದ್ದಾರೆ. ಅವರ ಕೊಡುಗೆ, ಸಾಧನೆ ಜಗತ್ತಿಗೆ ತಿಳಿದಿದೆ ಆದರೆ, ಭಾರತೀಯರಿಗೆ ಇನ್ನೂ ತಿಳಿದಿಲ್ಲ ಇನ್ನೂ ಜಾತಿ, ಧರ್ಮ ಎಂದು ಯೋಚಿಸುತ್ತಿದ್ದಾರೆ ಇದು ದುರಂತ ಎಂದು ಹೇಳಿದರು.
ಗ್ರಾಮದ ಯುವಕ, ಯುವತಿಯರು ಮತ್ತು ಮಕ್ಕಳು ಅಂಬೇಡ್ಕರ್ ರವರ ಭಾವಚಿತ್ರವನ್ನಿಟ್ಟು ಮೇಣದ ಬತ್ತಿ ಹಚ್ಚಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಈ ಸಂದರ್ಭದಲ್ಲಿ ಯಾಜಮಾನರು ಮಹದೇವಯ್ಯ, ಚಿಕ್ಕಣ.ಗ್ರಾಮ ಪಂಚಾಯಿತಿ ಸದಸ್ಯರು ಶಿವರಾಜ್ ಅರಸು, ಪ್ರಕಾಶ್, ರತ್ನಮ ರಾಜೇಶ್, ಗ್ರಾಮದ ಮುಖಂಡರು ಪುಟ್ಟಸ್ವಾಮಿ, ಮಹದೇವಸ್ವಾಮಿ, ನಂಜುಂಡಿ, ಚನ್ನಯ್ಯ, ಸುರೇಶ್, ಮದನ್, ಪವರ್ ಸಿದ್ದು, ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700