ಪಾವಗಡ: ಸೋಮವಾರ ಪಾವಗಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಕರ್ನಾಟಕ ರತ್ನ, ನಡೆದಾಡುವ ದೇವರು, ಅಕ್ಷರ ದಾಸೋಹ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯರ 117ನೇ ಜನ್ಮೋತ್ಸವವನ್ನು, ಪಾವಗಡ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರ ಒಕ್ಕೂಟ ಮತ್ತು ಡಿ ಗ್ರೂಪ್ ನೌಕರರ ಸಹಯೋಗದಲ್ಲಿ ಆಚರಿಸಲಾಗಿದೆ.
ಇದರ ಪ್ರಯುಕ್ತ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು.
ಆಸ್ಪತ್ರೆಯ ಆಡಳಿತ ವೈದ್ಯ ಅಧಿಕಾರಿ ಎ ಎಸ್ ಎಲ್ ಬಾಬು ಮಾತನಾಡಿ, “ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ತಮ್ಮದೇ ಆದ ರೀತಿಯಲ್ಲಿ ಚಾಪು ಮೂಡಿಸಿ, ಅನೇಕ ಸಾವಿರ ಮಕ್ಕಳಿಗೆ ಅನ್ನ ಮತ್ತು ಅಕ್ಷರವನ್ನು ನೀಡಿ ಸಾಕಿದ್ದಾರೆ. ಅಂತಹವರ ಜಯಂತಿ ಮಾಡುತ್ತಿರುವುದು ಪುಣ್ಯ” ಎಂದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ, ತಿರುಪತಯ್ಯ, ಅಂಬರೀಷ್ ಚಾಲಕರ ಒಕ್ಕೂಟದ ವೆಂಕಟೇಶ್, ಪೊನ್ನ ಸಮುದ್ರ ಈರಣ್ಣ, ಸಾಗರ್, ನಂದೀಶ್, ಭಾರತಿ, ಅಜಿತ್, ಆಸ್ಪತ್ರೆಯ ಕೃಷ್ಣಪ್ಪ, ಆರೋಗ್ಯ ನಿರೀಕ್ಷಕರಾದ ಚಂದ್ರಶೇಖರ್, ಸುರೇಶ್, ಕ್ಯಾಂಟೀನ್ ರವಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296