ತುಮಕೂರು: ತುಮಕೂರು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಡಾ.ಜಿ.ಪರಮೇಶ್ವರ್ ಜಿ. ಅವರು ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಪರವಾಗಿ ಮತಯಾಚನೆ ಮಾಡಿದರು.
ಅಕ್ಕಿರಾಂಪುರ, ಹುಲಿಕುಂಟೆ, ತೀತಾ ಮತ್ತು ಹಂಚಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮತದಾರರು ಹಾಗೂ ಮುಖಂಡರಲ್ಲಿ ಮತಯಾಚನೆ ಮಾಡಿದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಆರ್.ರಾಜೇಂದ್ರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷರಾದ ಜಯಮ್ಮ, ಮುಖಂಡರಾದ ವೆಂಕಟಾಚಲಯ್ಯ, ವಾಲೇ ಚಂದ್ರಯ್ಯ, ಕೊಡವಾಡಿ ಚಂದ್ರಶೇಖರ್, ಚಂದ್ರಶೇಖರ್ ಗೌಡ, ಬಲರಾಮಯ್ಯ, ಬೈರಪ್ಪ, ಮೈಲಾರಪ್ಪ, ಶ್ರೀನಿವಾಸ್, ರಾಮಚಂದ್ರಪ್ಪ, ವೆಂಕಟಪ್ಪ, ರುದ್ರಪ್ರಸಾದ್, ರಾಜಣ್ಣ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಗ್ರಾ.ಪಂ. ಸದಸ್ಯರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700