ಕೊರಟಗೆರೆ: ಪಟ್ಟಣದ ಗಿರಿನಗರ ಬಡಾವಣೆಯ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸರ್ವಧರ್ಮ ಗುರುಗಳ ಸಾಮೂಹಿಕ ಪ್ರಾರ್ಥನೆಯಲ್ಲಿ ಡಾ.ಜಿ ಪರಮೇಶ್ವರ್ ಭಾವಚಿತ್ರ ಹಿಡಿದು ಅವರು ಸಿಎಂ ಆಗಲಿ ಎಂದು ಸರ್ವಧರ್ಮದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ 2000ಕ್ಕೂ ಹೆಚ್ಚು ಸ್ವಯಂಸೇವಕರು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ನಯಾಜ್ ಮಾತನಾಡಿ: ಸರ್ವಧರ್ಮ ಗುರುಗಳ ಸಾಮೂಹಿಕ ಪ್ರಾರ್ಥನೆಯ ಮುಖೇನ 2,000 ಕಾರ್ಯಕರ್ತರ ಸಮ್ಮುಖದಲ್ಲಿ ಡಾ.ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ, ಒಂದು ವೇಳೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಇದ್ದಲ್ಲಿ ಕೊರಟಗೆರೆಯಿಂದ ದೆಹಲಿ ಚಲೋ ಬೃಹತ್ ಹೋರಾಟದ ಆಂದೋಲನ ನಡೆಸುತ್ತೇವೆ ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ಮಾತನಾಡಿ: ಇಂದು ಸರ್ವಧರ್ಮ ಗುರು ಹಿರಿಯರೆಲ್ಲರೂ ಸೇರಿ ಪ್ರಾರ್ಥನೆಯನ್ನು ಮಾಡಿರುವ ಉದ್ದೇಶ ಕರ್ನಾಟಕದ ದಲಿತ ಮುಖ್ಯಮಂತ್ರಿ ಕೂಗು ನೆರವೇರಲಿ ಎನ್ನುವ ಉದ್ದೇಶವಿದೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕಾದರೆ ಪರಮೇಶ್ವರ್ ಅವರ ಬಹುದೊಡ್ಡ ಕೊಡುಗೆ ಇದೆ. ಸಿದ್ದರಾಮಯ್ಯನವರ ನಂತರ ನಮ್ಮ ಕ್ಷೇತ್ರದ ಶಾಸಕರು ಕರ್ನಾಟಕ ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆದರೆ, ರಾಜ್ಯದ ಬಡಜನರ ಪರವಾಗಿ ಕೆಲಸ ಮಾಡುವ ಸಜ್ಜನ ರಾಜಕಾರಣಿ ಇವರಾಗಿದ್ದಾರೆ. ಆದ್ದರಿಂದ ಅವರಿಗೆ ಒಂದು ಅವಕಾಶ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಇದನ್ನು ನಿರ್ಧಾರವನ್ನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ರೈಲ್ವೇ ಸರ್ಕಾರದ ನಾಮಿನಿ ನಿರ್ದೇಶಕ ಜಿ.ಎಂ.ಕಾಮರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕುರುಡುಗಾನಹಳ್ಳಿ ರಂಗಣ್ಣ, ಮೆಡಿಕಲ್ ಪ್ರಸನ್ನ ಕುಮಾರ್, ರುದ್ರೇಶ್, ವೀರೇಂದ್ರಪ್ರಸಾದ್, ಅಣ್ಣಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ವಿ.ಕೆ.ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಸೇರಿದಂತೆ ಸ್ಥಳೀಯ ನಾಗರಿಕರು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಹಂಚಿಕೊಂಡರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


