ಕುಂಚಬ್ರಹ್ಮ, ಕುಂಚ ಕಲಾವಿದ, ರೇಖೆಗಳ ಮೋಡಿಗಾರ, ಕರ್ನಾಟಕ ಕಂಡ ಮಹಾನ್ ಹಿರಿಯಜೀವಿ 69ರ ವಸಂತದಲ್ಲಿ ಪಾದಾರ್ಪಣೆ ಮಾಡಿದ ಮುತ್ಸದ್ದಿ ಚಿತ್ರಕಲಾ ಶಿಕ್ಷಕರಾಗಿ, ತುಮಕೂರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥರಾಗಿದ್ದರು ಸರ್ಕಾರಿ ಕಲಾಶಾಲೆ ಪ್ರಾರಂಭಿಸಲು ಪರಿಶ್ರಮ ಪಟ್ಟಿದ್ದಲ್ಲದೆ ಇತಿಹಾಸ ಪುಟ ಬರೆದ ಮಹಾನ್ ವ್ಯಕ್ತಿ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ವಿದ್ಯಾದಾನ ಮಾಡಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಸಹಾಯ ಮಾಡಿ ದಾರಿದೀಪವಾಗಿದ್ದಾರೆ “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ತುಮಕೂರು” ವಿದ್ಯಾರ್ಥಿಗಳ ಪ್ರೀತಿಯೇ ಇದಕ್ಕೆ ಸಾಕ್ಷಿಯಾಗಿದೆ ಇಂತಹ ಮಹಾನ್ ವ್ಯಕ್ತಿಯಾದ ಡಾ. ಎಂ.ಕೋಟೆಪ್ಪ A.M., G.D., M.A., M.Ed., M.Phil., Ph.D., P.G.D.H.E (IGNOU) ನವರ ಪರಿಚಯವನ್ನು ಗೊಲನ ಎಂಟರ್ ಪ್ರೈಸಸ್ ಮಾಲೀಕರಾದ ನಟರಾಜು ಜಿ.ಎಲ್. ರವರ ಸಾರಥ್ಯದಲ್ಲಿ “ನಮ್ಮ ತುಮಕೂರು ಡಾಟ್ ಕಾಮ್ ಎಂಬ ಹೆಸರಿನ ಆನ್ಲೈನ್ ಮಾಧ್ಯಮ”ದಲ್ಲಿ ಮೊದಲನೇ ಸಂಚಿಕೆ ನವಂಬರ್ 1ನೇ ತಾರೀಖು 2021ರ ಕಲಾವಿದ ಪರಿಚಯ ಪುಟದ ಸಂಚಿಕೆಯಲ್ಲಿ ಬರೆಯಲು ಅವರ ಶಿಷ್ಯಂದಿರ ಬಳಗದಲ್ಲಿ ಒಬ್ಬರಾದ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರಾದ ಹಾಗೂ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯತೀಶ್ ಕುಮಾರ್ ಸರ್ ರವರು ಮಹಾನ್ ವ್ಯಕ್ತಿಯಾದ ಶ್ರೀ ಡಾ. ಎಂ.ಕೋಟೆಪ್ಪನವರ ಪರಿಚಯ ನನಗೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದು ಅದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ ಮತ್ತು ಸ್ಪೂರ್ತಿಯಾಗಿದ್ದೇನೆ.
ಪ್ರಪಂಚದಲ್ಲಿಯೇ ಕಲೆ, ಸಾಹಿತ್ಯ, ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡಿದ ದಕ್ಷಿಣ ಭಾರತದ ಉತ್ತರ ಕರ್ನಾಟಕದಲ್ಲಿ (ಈಗಿನ ಕಲ್ಯಾಣ ಕರ್ನಾಟಕ) ಬಳ್ಳಾರಿ ಜಿಲ್ಲೆಯು ನಮಗೆ ಹೆಮ್ಮೆ ಎನಿಸಿದೆ. ಹರಿಹರ, ಬುಕ್ಕರಾಯ, ಕಂಪನಾ, ಮಾರಪ್ಪ, ಮತ್ತು ಮುದ್ದಪ್ಪ ವಿಜಯನಗರ ಸಾಮ್ರಾಜ್ಯ ನಿರ್ಮಾತೃ, ಸಂಸ್ಥಾಪಕರು ನಡೆದಾಡಿದವರು ನೆಲ, ಜಲ, ಮಣ್ಣು ಮತ್ತು ಗಾಳಿ ಆ ಪ್ರದೇಶದ ಕಲೆಯನ್ನು ಹುಟ್ಟಿನಿಂದ ಅಂಟಿಸಿಕೊಂಡು ಬಂದಿರುವುದಕ್ಕೆ ಅವರ ರೇಖೆ, ಬಣ್ಣಗಳೇ ಸಾಕ್ಷಿಯಾಗಿವೆ.
ಡಾ. ಎಂ.ಕೋಟೆಪ್ಪ
ಬ್ರಿಟಿಷ್ ಸರ್ಕಾರ ಕಾಲದಲ್ಲಿ ರೆವಿನ್ಯೂ ಜಿಲ್ಲೆದಾರರಾಗಿ ಸೇವೆ ಸಲ್ಲಿಸುತ್ತಿದ್ದ ದಿವಂಗತರಾದ ಐ. ನೀಲಕಂಠಪ್ಪ ಮತ್ತು ಶ್ರೀಮತಿ ಬುಳ್ಳಮ್ಮ ದಂಪತಿಗೆ ಏಳನೇ ಮಗನಾಗಿ ದಿನಾಂಕ:21-10-1952 ರಲ್ಲಿ ಹುವಿನಹಡಗಲಿ ಪಟ್ಟಣದ ದೊಡ್ಡ ಕುಟುಂಬದಲ್ಲಿ ಕೋಟೆಪ್ಪನವರ ಜನನವಾಯಿತು. ಇವರಿಗೆ ನಾಲ್ಕು ಜನ ಅಕ್ಕಂದಿರು ಒಬ್ಬರು ಅಣ್ಣಂದಿರು ಮತ್ತೊಬ್ಬ ಕಿರಿಯ ಸಹೋದರ. ಇವರು ಚಿಕ್ಕವರಿದ್ದಾಗ ತುಂಬಾ ಸುಖವಾಗಿ ಬೆಳೆದರು ಶ್ರೀಯುತರ ತಂದೆ ಐ. ನೀಲಕಂಠಪ್ಪನವರು 1966 ರಲ್ಲಿ ದೈವಾಧೀನರಾದ ನಂತರ ದೊಡ್ಡ ಕುಟುಂಬವನ್ನು ಸಾಗಿಸಲು ಕಷ್ಟ ಪಡಬೇಕಾಯಿತು ಅಂತಹ ಕಷ್ಟದ ದಿನಗಳಲ್ಲಿ ಗದುಗಿನ ಕಲಾಮಂದಿರದಲ್ಲಿ DTC (ಡ್ರಾಯಿಂಗ್ ಟೀಚರ್ ಕೋರ್ಸ್) ಕೋರ್ಸ್ ಮಾಡಿ ಸರ್ಕಾರಿ ಚಿತ್ರಕಲಾ ಶಿಕ್ಷಕರಾಗಿ ತಿಪಟೂರಿನ ಸರ್ಕಾರಿ ಪ್ರೌಢಶಾಲೆಗೆ ದಿನಾಂಕ:30-10-1972 ರಲ್ಲಿ ನೇಮಕಗೊಂಡು ಹಾಜರಾಗಿ ಸೇವೆ ಪ್ರಾರಂಭಿಸಿದರು ನಂತರ ಕೆಲವೇ ದಿನಗಳಲ್ಲಿ ಸರ್ಕಾರಿ ಟಿ.ಟಿ.ಐ ತುಮಕೂರಿನಲ್ಲಿ ಇವರ ಕಲಾಪ್ರಪಂಚ ಶುರುವಾಯಿತು ಇಲ್ಲಿಂದ ದಿನಾಂಕ:10-08-1978 ರಲ್ಲಿ ವರ್ಗಾವಣೆಗೊಂಡು ಸರ್ಕಾರಿ ಪದವಿ ಪೂರ್ವ ಕಾಲೇಜು ತುಮಕೂರು ಪ್ರೌಢಶಾಲಾ ವಿಭಾಗದಲ್ಲಿ ಕಾರ್ಯ ಪ್ರಾರಂಭಿಸಿದರು. ಇವರಲ್ಲಿ ಇರತಕ್ಕಂತಹ ಉತ್ತಮ ಕಲೆಯಜ್ಞಾನ ಗುರುತಿಸಿ ಸರ್ಕಾರದ ಪಠ್ಯಪುಸ್ತಕ (DSCERT) ಸಂಸ್ಥೆಯಲ್ಲಿ ಶ್ರೀಯುತರನ್ನು ರೇಖಾಚಿತ್ರ ಮತ್ತು ಚಿತ್ರಗಳನ್ನು ರಚಿಸಲು ಸಮಿತಿಯ ಮುಖ್ಯಸ್ಥರಾಗಿ ನೇಮಿಸಿತು ಅಲ್ಲದೇ ಇವರಿಗೆ “ಉತ್ತಮ ಶಿಕ್ಷಕ ಪ್ರಶಸ್ತಿ” ಬಂದಿದ್ದು ನಮಗೆ ತುಂಬಾ ಹೆಮ್ಮೆಯ ವಿಷಯವಾಗಿದೆ. ಇವರು ತಮ್ಮ ಸೇವಾ ಅವಧಿಯಲ್ಲಿ ಶಾಲೆಯೇ ದೇಗುಲ ಕಾಯಕವೇ ದೇವರು ಎಂದು ನಂಬಿದಂತವರು ಬಡ ವಿದ್ಯಾರ್ಥಿಗಳಿಗೆ ಫೀ ಹಣ ಕಟ್ಟಿ ಪಠ್ಯಪುಸ್ತಕಗಳನ್ನು ನೀಡಿ ಓದಲು ಅನುವು ಮಾಡಿದಂತಹ ಮಹಾನ್ ವ್ಯಕ್ತಿ ಶ್ರೀಯುತರು ಡಾ. ಎಂ.ಕೋಟೆಪ್ಪರವರು ತಮ್ಮ ಚಿತ್ರಕಲಾ ಶಿಕ್ಷಕ ವೃತ್ತಿ ಬಗ್ಗೆ ಆಸಕ್ತಿಯೊಂದಿಗೆ “ಕಷ್ಟಪಡದೆ ಯಾವುದೂ ಸಾಧ್ಯವಿಲ್ಲ” ಎಂಬ ಮೂಲ ಮಂತ್ರದ ಅರ್ಥದ ಸಾಕ್ಷಾತ್ಕಾರದೊಂದಿಗೆ ಬಿಡುವಿನ ವೇಳೆಯಲ್ಲಿ ಪುಸ್ತಕ ಓದುವುದು ಇವರು ಹವ್ಯಾಸ ರೂಢಿಸಿಕೊಂಡಿದ್ದರು ಹಗಲಿರುಳು ಪರಿಶ್ರಮಪಟ್ಟು “ಯಾರಿಗಿಂತ ನಾನು ಕಡಿಮೆನಲ್ಲ” ಅನ್ನುವ ಯುಕ್ತಿ ಯಂತೆ ಹೆಚ್ಚಿನ ಉನ್ನತ ವಿದ್ಯಾಭ್ಯಾಸ ಮಾಡಿ ವಿಶ್ವವಿದ್ಯಾಲಯದಲ್ಲಿ ಇರತಕ್ಕಂತ ಎಲ್ಲಾ ಪದವಿಗಳನ್ನು ತಮ್ಮ ದಾಗಿಸಿಕೊಂಡಂತಹ ರಾಜ್ಯದ ಏಕೈಕ ಚಿತ್ರಕಲಾ ಶಿಕ್ಷಕ.
ಡಾ. ಎಂ.ಕೋಟೆಪ್ಪ ಇವರ ಧರ್ಮಪತ್ನಿ ಶೈಲಜಾ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಮಗ ಹರೀಶ್ ಕುಮಾರ್ ಮಗಳು ಅಶ್ವಿನಿ ಇವರು ವಿಜ್ಞಾನ ಶಿಕ್ಷಕಿಯಾಗಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಸ್ನೇಹಜೀವಿ ಯಾವುದೇ ಕೆಲಸ ತೆಗೆದುಕೊಂಡರು ಆಸಕ್ತಿಯಿಂದ ಪೂರ್ತಿಯಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದಂತ ಉತ್ಸಾಹಿ ಚಿಲುಮೆಯಾಗಿದ್ದಂತ ಮಹಾನಾಯಕ. ನವಂಬರ್ 01-2021 ರಂದು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಹಾರೈಸುವದರೊಂದಿಗೆ ಅವರು ಸುದೀರ್ಘ 40 ವರ್ಷಗಳ ಕಾಲ ಕನ್ನಡನಾಡಿನ ಕಲೆ ಮತ್ತು ನಮ್ಮ ಸಂಸ್ಕೃತಿಯನ್ನು ಪ್ರಸ್ತುತಪಡಿಸಲು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಸಿ ವಿದ್ಯಾದಾನ ಮಾಡಿ ಮನೆ-ಮನೆಗೆ ಸಂಸ್ಕೃತಿಯನ್ನು ತಲುಪಿಸಿ ಕಲಾ ಸೇವೆಗೈದ ಮಹಾನ್ ಚೇತನಕ್ಕೆ ಭಾರತ ಸರ್ಕಾರವು ಕೊಡಮಾಡುವ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರೆ ಅವರು ಮಾಡಿದಂತ ಕಾರ್ಯಕ್ಕೆ ಸಾರ್ಥಕ ಸೇವೆಯಾದಿತೆಂದು ಅವರ ಸಮಕಾಲೀನ ಪ್ರೀತಿಯ ಗೆಳೆಯರ ಬಳಗ ಮತ್ತು ಶ್ರೀಯುತರನ್ನು ದೇವರಿಗಿಂತ ಹೆಚ್ಚು ಪೂಜ್ಯನಿಯ ಭಾವನೆಗೆ ಪ್ರಭಾವಿತರಾದ ವಿದ್ಯಾರ್ಥಿ ಬಳಗದಲ್ಲಿ ಸರ್ಕಾರಕ್ಕೆ ಪತ್ರ ಚಳುವಳಿ ಮಾಡುವುದರೊಂದಿಗೆ ಮತ್ತು ಸರ್ಕಾರಕ್ಕೆ ಪತ್ರ ಮುಖೇನ ತಿಳಿಸುವುದರೊಂದಿಗೆ ನನ್ನದೊಂದು ತಮ್ಮೆಲ್ಲರಿಗೆ ನಿವೇದನೆಮಾಡಿ ತಿಳಿಸುತ್ತಾ ದೇವರು ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಿ ಬದುಕಿ ಬಾಳಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಧನ್ಯವಾದಗಳೊಂದಿಗೆ..
ಇಂದ:
ಎಂ.ಆರ್.ಸೌದಾಗರ. A.M., B.A.,
ನಿವೃತ್ತ ಚಿತ್ರಕಲಾ ಶಿಕ್ಷಕರು,
ಪ್ಲಾಟ ನಂ:02
“ರಾಸಿನಿಲಯ”,
ಗಂಗಾನಗರ,
ನಿಂಬರಗಿ ಬಡಾವಣೆ.,
ಅಥಣಿ ರಸ್ತೆ,
ವಿಜಯಪುರ – 586102,
ದೂರವಾಣಿ ಸಂಖ್ಯೆ: 7899317399.
●ನಮ್ಮ ತುಮಕೂರು ಡಾಟ್ ಕಾಮ್ ಆನ್ಲೈನ್ ಮಾಧ್ಯಮಕ್ಕೆ ಮತ್ತು ಈ ಮಾಧ್ಯಮದ ಮೊದಲ ಕಲಾವಿದರ ಪರಿಚಯ ಸಂಚಿಕೆಗೆ ಶುಭಕೋರುವವರು:
ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು
ಗೌರವಾಧ್ಯಕ್ಷರು: ಶ್ರೀನಿವಾಸಮೂರ್ತಿ .ಟಿ
ಅಧ್ಯಕ್ಷರು: ನಾಗೇಂದ್ರ ಕುಮಾರ್ .ಎಸ್.ಹೆಚ್
ಉಪಾಧ್ಯಕ್ಷರು: ನಟರಾಜು .ಜಿ.ಎಲ್
ಪ್ರಧಾನ ಕಾರ್ಯದರ್ಶಿ: ಯತೀಶ್ ಕುಮಾರ್
ಸಂಘಟನಾ ಕಾರ್ಯದರ್ಶಿ: ನರಸಿಂಹಮೂರ್ತಿ .ಎಂ
ಖಜಾಂಚಿ: ಮಹಮದ್ ಗೌಸ್ ಪೀರ್
ಕಾನೂನು ಸಲಹೆಗಾರರು: ಮಂಜುನಾಥ .ಎಂ.ಆರ್
ಸಂಚಾಲಕರು:
ರಂಗಸ್ವಾಮಿ .ಆರ್
ರಹಮತ್ ತುಲ್ಲಾ.ಪಿ
ಹಜರತ್ ಅಲಿ.ಯು
ಶಿವಶಂಕರ್ ಮೂರ್ತಿ .ಕೆ.ಎನ್
ರವಿಕುಮಾರ್ .ಹೆಚ್.ಡಿ
ಚಂದ್ರಶೇಖರಯ್ಯ
ಬುದ್ದೇಶ್
ಲಕ್ಷ್ಮಿ ಕಾಂತರಾಜು. ಎಸ್
ನಿರ್ದೇಶಕರು:
ಪವನ್ .ಆರ್
ಶಿವರಾಜು.ಎಂ
ರವಿಕುಮಾರ್. ವಿ
ಸುರೇಶ್ .ಕೆ.ಆರ್
ಹುಚ್ಚಯ್ಯ ಕೆ.ಎಲ್
ಎನ್.ಎ. ಲಕ್ಷ್ಮಿ ಕಾಂತರಾಜು
ಉಮಾಪತಿ .ಎನ್
ಪಿ.ಸಿ. ನರಸಿಂಹಮೂರ್ತಿ
ಉಮೇಶ್
ನರಸಿಂಹಪ್ಪ .ಡಿ
ಸುನಿಲ್ ಸುಜಯ್ ಕುಮಾರ್ .ಕೆ
ಭಾಸ್ಕರ್ ಕೆ.ಎನ್
ಕೆ.ಎನ್. ನಾರಾಯಣ
ಡಿ.ಬಿ. ಜಗದೀಶ್
ರಂಗಸ್ವಾಮಿ .ಎಂ.ಟಿ
ಶಿವಸ್ವಾಮಿ .ಎಂ.ಎಸ್
ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ (ರಿ), ತುಮಕೂರು.